
ಫಿಲಡೆಲ್ಫಿಯಾ (ಅಮೆರಿಕ) – ಇಲ್ಲಿ ಮೂಲತಃ ತೆಲಂಗಾಣದ 28 ವರ್ಷದ ಭಾರತೀಯ ಯುವಕ ಅಂಶುಲ್ ಕುಂಚಾ ಎಂಬಾತನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಅರೆಕಾಲಿಕ ಪಿಜ್ಜಾ ವಿತರಣೆ ಕೆಲಸ ಮಾಡುತ್ತಿದ್ದ ಅಂಶುಲ್‌ನನ್ನು ನಕಲಿ ಆರ್ಡರ್ ಮೂಲಕ ಕರೆಸಿಕೊಂಡು ಕೊಲೆ ಮಾಡಲಾಗಿದೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
🇮🇳 Indian youth shot dead by unidentified assailants in Philadelphia, USA.
The rising number of attacks and killings involving Indians abroad in recent years is deeply concerning.
How many more such tragedies must occur before stronger measures are taken to ensure the safety… pic.twitter.com/nRNE0K6EOq
— Sanatan Prabhat (@SanatanPrabhat) June 7, 2026
ಅಂಶುಲ್ ಕುಂಚಾ ಕಳೆದ 4 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದನು. ಆತ ಅಲ್ಲಿ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಪೂರ್ಣಾವಧಿ ಕೆಲಸ ಮಾಡುತ್ತಿದ್ದನು. ಹೆಚ್ಚುವರಿ ಆದಾಯಕ್ಕಾಗಿ ಆತ ಶನಿವಾರ ಮತ್ತು ಭಾನುವಾರ ಪಿಜ್ಜಾ ವಿತರಣೆ ಕೆಲಸ ಮಾಡುತ್ತಿದ್ದನು. 6 ಜೂನ್ ರಾತ್ರಿ ಆತನಿಗೆ ನಿರ್ಜನ ಪ್ರದೇಶವೊಂದಕ್ಕೆ ಪಿಜ್ಜಾ ತಲುಪಿಸುವಂತೆ ಆರ್ಡರ್ ಬಂದಿತ್ತು. ಅಂಶುಲ್ ಆ ಸ್ಥಳಕ್ಕೆ ತಲುಪಿದಾಗ, ಅಲ್ಲಿ ಈಗಾಗಲೇ ಹೊಂಚು ಹಾಕಿ ಕುಳಿತಿದ್ದ ಅಪರಿಚಿತರು ಆತನ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ. ಅವರು ಅಂಶುಲ್ ತಲೆಗೆ ಒಂದರ ಮೇಲೊಂದರಂತೆ ಹಲವು ಸುತ್ತು ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಅಂಶುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನಿಂದ ಯಾವುದೇ ಲೂಟಿ ನಡೆದಿಲ್ಲ. ಆತನ ಹಣ ಅಥವಾ ಅಮೂಲ್ಯ ವಸ್ತುಗಳು ಕಳ್ಳತನವಾಗದ ಕಾರಣ ಈ ಕೊಲೆಯ ಮುಖ್ಯ ಉದ್ದೇಶ ಏನಿರಬಹುದು?, ಎಂಬ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿನ್ಹೆ ಮೂಡಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation