ರಾತ್ರಿ ನಿದ್ದೆ ಬರದಿದ್ದರೆ, ಕಣ್ಣುಗಳ ಮೇಲಿನ ಆವರಣವನ್ನು ತೆಗೆದು ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿಯನ್ನು ದೂರಗೊಳಿಸಿ !

ಸದ್ಗುರು (ಡಾ.) ಮುಕುಲ ಗಾಡಗೀಳ

‘ರಾತ್ರಿ ನಿದ್ದೆ ಬರದಿರುವ ತೊಂದರೆ ಇರುವ ಸಾಧಕರಿಗೆ ನಾನು ಆಧ್ಯಾತ್ಮಿಕ ಉಪಾಯವನ್ನು ಹೇಳಿದೆನು. ಅವರಿಗಾಗಿ ಉಪಾಯವನ್ನು ಹುಡುಕುವಾಗ, ‘ಅವರಿಗೆ ನಿದ್ದೆ ಬರದಿರಲು ಮುಖ್ಯವಾಗಿ ಕಣ್ಣುಗಳ ಮೇಲಿರುವ ತೊಂದರೆದಾಯಕ ಶಕ್ತಿಯ ಆವರಣ ಮತ್ತು ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿ ಈ ಆಧ್ಯಾತ್ಮಿಕ ಕಾರಣಗಳಾಗಿವೆ’, ಎಂದು ಗಮನಕ್ಕೆ ಬಂದಿತು. ತೊಂದರೆದಾಯಕ ಶಕ್ತಿಯ ಜಡತ್ವದಿಂದ ನಿದ್ದೆ ಬಂದರೂ ಕಣ್ಣುಗಳು ಮುಚ್ಚಲು ಆಗುವುದಿಲ್ಲ. ನಾನು ಉಪಾಯ ಮಾಡಿ ಆ ಸಾಧಕರ ಕಣ್ಣುಗಳಲ್ಲಿದ್ದ ತೊಂದರೆದಾಯಕ ಶಕ್ತಿ ಯನ್ನು ದೂರ ಮಾಡಿದಾಗ ಅವರಿಗೆ ಆ ರಾತ್ರಿ ಸರಿಯಾಗಿ ನಿದ್ದೆ ಬಂದಿತು. ಆದ್ದರಿಂದ ರಾತ್ರಿ ನಿದ್ದೆ ಬರದಿರುವ ತೊಂದರೆ ಇರುವ ಸಾಧಕರು ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿಯನ್ನು ದೂರ ಮಾಡುವುದು ಆವಶ್ಯಕವಾಗಿದೆ. ಅದಕ್ಕಾಗಿ ಮುಂದಿನ ಪದ್ಧತಿಯನ್ನು ಅನುಸರಿಸಬೇಕು.

೧. ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯಿಂದ ಉಪಾಯವನ್ನು ಹುಡುಕುವಾಗ ನಮ್ಮಲ್ಲಿರುವ ತೊಂದರೆದಾಯಕ ಶಕ್ತಿಯ ಅರಿವಾಗಲು ಯಾವ ರೀತಿ ನಾವು ಶರೀರದ ಚಕ್ರಗಳ ಮೇಲೆ ಕೈಗಳ ಬೆರಳುಗಳನ್ನು, ತಿರುಗಿಸುತ್ತೇವೆಯೋ, ಅದೇ ರೀತಿ ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿಯ ಅರಿವಾಗಲು ಕಣ್ಣುಗಳೆದುರು ಬೆರಳುಗಳನ್ನು ತಿರುಗಿಸಬೇಕಾಗುತ್ತದೆ ಮತ್ತು ಕಣ್ಣುಗಳಿಗಾಗಿ ಉಪಾಯವನ್ನು ಹುಡುಕಬೇಕಾಗುತ್ತದೆ. ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯಿಂದ ಉಪಾಯವನ್ನು ಹೇಗೆ ಹುಡುಕಬೇಕು ?’, ಎಂಬ ಮಾಹಿತಿಯನ್ನು ಸನಾತನದ ಗ್ರಂಥ ‘ರೋಗ ನಿವಾರಣೆಗಾಗಿ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಹೇಗೆ ಹುಡುಕಬೇಕು??’ ಇದರಲ್ಲಿ ಕೊಡಲಾಗಿದೆ.

೨. ಕಣ್ಣುಗಳೆದುರು ಬೆರಳುಗಳನ್ನು ತಿರುಗಿಸಿದಾಗ ಕಣ್ಣುಗಳ ಮೇಲಿನ ಆವರಣ ಇರುವುದು ಗೊತ್ತಾದರೆ ಮೊದಲಿಗೆ ಆ ಆವರಣವನ್ನು ತೆಗೆಯುವುದು ಆವಶ್ಯಕವಾಗಿದೆ. ಅದಕ್ಕಾಗಿ ಕೈಗಳಿಂದ ಗಾಳಿ ಹಾಕಿಕೊಂಡಂತೆ ಕಣ್ಣುಗಳ ಮೇಲಿನ ಆವರಣವನ್ನು ದೂರ ಸರಿಸಬೇಕು. ‘ತೊಂದರೆದಾಯಕ ಶಕ್ತಿಯ ಆವರಣವನ್ನು ಹೇಗೆ ದೂರ ಮಾಡಬೇಕು ?’, ಎಂಬ ಮಾಹಿತಿಯನ್ನು ಸನಾತನದ ಮೇಲ್ಕಾಣಿಸಿದ ಗ್ರಂಥದಲ್ಲಿ ಕೊಡಲಾಗಿದೆ.

೩. ಕಣ್ಣುಗಳ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ದೂರ ಮಾಡಿದಾಗ ‘ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿಯನ್ನು ಹೇಗೆ ದೂರ ಮಾಡಬೇಕು ?’, ಎಂಬ ಪದ್ಧತಿಯನ್ನು ಈಗ ನಾವು ನೋಡೋಣ. ಕಣ್ಣಿನಲ್ಲಿ ತೊಂದರೆದಾಯಕ ಶಕ್ತಿಯು ಪ್ರವೇಶಿಸುವಾಗ ಅದು ಕಣ್ಣಿನ ಕಿವಿಯ ಕಡೆಗಿನ ಮೂಲೆಯಿಂದ ಪ್ರವೇಶಿಸುತ್ತದೆ ಮತ್ತು ನಂತರ ಕಣ್ಣುಗಳಲ್ಲಿ ಹರಡುತ್ತದೆ. ಕಣ್ಣಿನ ತೊಂದರೆದಾಯಕ ಶಕ್ತಿಯು ಹೊರಗೆ ಬರುವಾಗಲೂ ಅದು ಕಣ್ಣಿನ ಕಿವಿಯ ಕಡೆಗಿನ ಮೂಲೆಯಿಂದ ಹೊರಗೆ ಬೀಳುತ್ತದೆ. ಆದುದರಿಂದ ‘ಕಣ್ಣುಗಳ ಮೇಲೆ ಉಪಾಯ ಮಾಡಲಿಕ್ಕಿದ್ದರೆ ಕಣ್ಣುಗಳೆದುರು ಉಪಾಯ ಮಾಡುವುದು ಪರಿಣಾಮಕಾರಿಯಲ್ಲ, ಆದರೆ ಕಣ್ಣುಗಳ ಕಿವಿಗಳ ಕಡೆಗಿನ ಮೂಲೆಗಳ ಮೇಲೆ ಉಪಾಯ ಮಾಡುವುದು ಪರಿಣಾಮ ಕಾರಿಯಾಗಿದೆ.

೪. ‘ಶರೀರದ ಒಂದು ಭಾಗದ ಮೇಲೆ ತೊಂದರೆಯೆನಿಸುತ್ತಿರುವಾಗ ಆ ಭಾಗದ ಮೇಲೆ ಕೈಗಳ ಬೆರಳುಗಳನ್ನು ತಿರುಗಿಸಿ ‘ಪ್ರಾಣಶಕ್ತಿವಹನ ಉಪಾಯಪದ್ಧತಿ’ಯಿಂದ ಉಪಾಯವನ್ನು ಹೇಗೆ ಕಂಡು ಹಿಡಿಯಬೇಕು ?’, ಎಂಬ ಪದ್ಧತಿಯನ್ನು ‘ಅಂಶ ೧’ರಲ್ಲಿ ನಮೂದಿಸಲಾದ ಸನಾತನದ ಗ್ರಂಥದಲ್ಲಿ ಕೊಡಲಾಗಿದೆ. ಅದೇ ಪದ್ಧತಿಯನ್ನು ಕಣ್ಣುಗಳ ತೊಂದರೆಗಾಗಿ ಉಪಾಯ ಹುಡುಕುವಾಗ ಉಪಯೋಗಕ್ಕೆ ತರಬೇಕು.

೫. ಕಣ್ಣುಗಳಿಗೆ ಉಪಾಯವನ್ನು ಹುಡುಕಿದಾಗ ತೇಜತತ್ತ್ವ, ವಾಯುತತ್ತ್ವ ಅಥವಾ ಆಕಾಶತತ್ತ್ವ ಈ ಪಂಚಮಹಾಭೂತಗಳ ಉಪಾಯಗಳಿದ್ದರೆ ಅನುಕ್ರಮವಾಗಿ ಮಧ್ಯಮಾ, ತರ್ಜನಿ ಅಥವಾ ಹೆಬ್ಬೆರಳು ಇವುಗಳಿಗೆ ಸಂಬಂಧಿಸಿದ ಮುದ್ರೆ ಬರುತ್ತದೆ. ಆಗ ಈ ಮುದ್ರೆಯನ್ನು ಎರಡೂ ಕೈಗಳಿಂದ ಮಾಡಬೇಕು ಮತ್ತು ಆ ಮುದ್ರೆಯಿಂದ ಕಣ್ಣುಗಳ ಕಿವಿಗಳ ಕಡೆಗಿನ ಮೂಲೆಗಳ ಮೇಲೆ ನ್ಯಾಸ ಮಾಡಿ ಉಪಾಯ ಮಾಡಬೇಕು. ಆಕಾಶ ತತ್ತ್ವದ ಮುಂದಿನ ನಿರ್ಗುಣದೊಂದಿಗೆ ಸಂಬಂಧಿಸಿದ ‘ಶೂನ್ಯ’, ‘ಮಹಾಶೂನ್ಯ’, ‘ನಿರ್ಗುಣ’ ಅಥವಾ ‘ಓಂ’ ಈ ನಾಮಜಪದ ಉಪಾಯ ಬಂದರೆ ಯಾವುದೇ ಒಂದು ಕೈಯ ಅಂಗೈಯನ್ನು ಎರಡೂ ಕಣ್ಣುಗಳೆದುರು ಇಟ್ಟು ಉಪಾಯ ಮಾಡಬೇಕು ಮತ್ತು ಇನ್ನೊಂದು ಕೈಯ ಅಂಗೈಯನ್ನು ಆಕಾಶದ ದಿಕ್ಕಿಗೆ ಮಾಡಿ ತೊಡೆಯ ಮೇಲಿಡಬೇಕು.

೬. ಕಣ್ಣುಗಳ ಮೇಲೆ ನ್ಯಾಸ ಮಾಡುತ್ತಾ ಉಪಾಯ ಮಾಡುವಾಗ ನಡುನಡುವೆ ‘ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ಎರಡೂ ಕೈಗಳ ಮುಷ್ಠಿಗಳಲ್ಲಿ ಸಂಗ್ರಹಿಸಿ ಅದನ್ನು ದೂರ ಮಾಡುವುದು’, ಹೀಗೂ ಮಾಡಬೇಕು. ಇದರಿಂದ ಹೆಚ್ಚು ಪರಿಣಾಮಕಾರಿ ಉಪಾಯವಾಗುತ್ತದೆ. ಕಣ್ಣುಗಳಲ್ಲಿನ ತೊಂದರೆದಾಯಕ ಶಕ್ತಿಯನ್ನು ಎರಡೂ ಕೈಗಳ ಮುಷ್ಠಿಗಳಲ್ಲಿ ಸಂಗ್ರಹಿಸುವಾಗ ಅದನ್ನು ಕಣ್ಣುಗಳ ಕಿವಿಗಳ ಕಡೆಗಿನ ಮೂಲೆಗಳಿಂದ ಸಂಗ್ರಹಿಸಬೇಕು.

೭. ಉಪಾಯ ಮಾಡುವಾಗ ಕಣ್ಣುಗಳ ಮೇಲಿನ ಜಡತ್ವವು ಕಡಿಮೆಯಾಗಿ ಅವುಗಳು ಸ್ವಲ್ಪ ಹಗುರವೆನಿಸಿದರೆ, ಪುನಃ ಕಣ್ಣುಗಳಿಗಾಗಿ ಉಪಾಯವನ್ನು ಹುಡುಕಬೇಕು. ಆಗ ಪ್ರತಿಸಲ ಜಪವು ಕಡಿಮೆ ಸ್ತರದ್ದು ಸಿಗುತ್ತಾ ಹೋಗುತ್ತದೆ, ಉದಾ. ಆರಂಭದಲ್ಲಿ ‘ಶೂನ್ಯ’ ಈ ಜಪದಿಂದ ಅದು ‘ಆಕಾಶದೇವ’, ‘ವಾಯುದೇವ’ ಮತ್ತು ಕೊನೆಗೆ ‘ಅಗ್ನಿದೇವ’ ಹೀಗೆ ಆಗುತ್ತಾ ಹೋಗುತ್ತದೆ. ಕಣ್ಣುಗಳ ಮೇಲೆ ಉಪಾಯ ಮಾಡುವಾಗ ಜಪ ಕಡಿಮೆ ಸ್ತರದ್ದಾಗುತ್ತಾ ಹೋಗುವುದರಿಂದ ಎರಡೂ ಕಣ್ಣುಗಳ ಮೂಗಿನ ಕಡೆಗಿನ ಮೂಲೆಗಳಿಂದ ಕಿವಿಗಳ ಕಡೆಗಿನ ಮೂಲೆಗಳವರೆಗೆ ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿಯು ಕಡಿಮೆ ಕಡಿಮೆಯಾಗುತ್ತಿರುವುದು ಅರಿವಾಗುತ್ತದೆ.

೮. ಕೊನೆಗೆ ಕಣ್ಣುಗಳಲ್ಲಿರುವ ತೊಂದರೆದಾಯಕ ಶಕ್ತಿಯು ಸಂಪೂರ್ಣವಾಗಿ ದೂರವಾದಾಗ, ಕಣ್ಣುಗಳು ಹಗುರ ಮತ್ತು ಪ್ರಕಾಶಮಾನವೆನಿಸತೊಡಗುತ್ತವೆ. ಅನಂತರ ಕಣ್ಣುಗಳ ಮೇಲೆ ಉಪಾಯ ಮಾಡುವುದನ್ನು ನಿಲ್ಲಿಸಬೇಕು ಮತ್ತು ಶಾಂತ ನಿದ್ದೆ ಬರಲು ದೇವರಿಗೆ ಪ್ರಾರ್ಥಿಸಿ ಮಲಗಬೇಕು.’

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೧೦.೨೦೨೦)