ಸದ್ಗುರು ಚಾರುದತ್ತ ಪಿಂಗಳೆ ಇವರು ಗುರು-ಶಿಷ್ಯ ಸಂಬಂಧದ ವಿಷಯದಲ್ಲಿ ವ್ಯಕ್ತಪಡಿಸಿದ ಅಪೂರ್ವ ವಿಚಾರಗಳು !
‘ನಾವು ಗುರುದೇವರ ಋಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ. ನನಗೆ ಕೆಲವು ಹಳೆಯ ಪ್ರಸಂಗಗಳು ನೆನಪಾಗುತ್ತವೆ. ಮೊದಲು ನನಗೆ ‘ಗುರುಗಳ ಋಣವನ್ನು ತೀರಿಸಬೇಕು, ಎನ್ನುವ ಅಹಂಕಾರದ ವಿಚಾರವಿತ್ತು. ‘ನಾವು ಗುರುಗಳ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ, ಎಂಬುದು ನನಗೆ ತಿಳಿಯುತ್ತಿರಲಿಲ್ಲ. ನಂತರ ಸೇವೆ ಮಾಡುತ್ತಿರುವಾಗ ನನಗೆ ಅರಿವಾಯಿತೇನೆಂದರೆ, ‘ನಾನು ಗುರುಗಳಿಗಾಗಿ ಏನೆಲ್ಲ ಮಾಡುತ್ತೇನೋ (ಸೇವೆ), ಅದರಿಂದ ನನಗೇನು ಸಿಗುತ್ತದೋ (ಆನಂದ), ಅದನ್ನು ಗುರುಗಳೇ ಕೊಡುತ್ತಾರೆ.