ಛತ್ರಪತಿ ಸಂಭಾಜಿನಗರದಲ್ಲಿ ‘ಲವ್ ಜಿಹಾದ್’ ಮತ್ತು ಮತಾಂತರದ ಪಿತೂರಿ ಬಯಲು!
ಮತಾಂಧ ಹುಸೇನ್ ಅಬು ಸೋಯ್ದಾನ್ ವಿರುದ್ಧ ಪ್ರಕರಣ ದಾಖಲು!

ಛತ್ರಪತಿ ಸಂಭಾಜಿನಗರ – ದುಬೈನಲ್ಲಿ ಹೆಚ್ಚಿನ ಸಂಬಳದ ಕೆಲಸ ಕೊಡಿಸುವ ಮತ್ತು ಮದುವೆಯಾಗುವ ಸುಳ್ಳು ಆಮಿಷ ತೋರಿಸಿ 43 ವರ್ಷದ ವಿವಾಹಿತ ಹಿಂದೂ ಶಿಕ್ಷಕಿಯ ಮೇಲೆ ಮತಾಂಧ ಹುಸೇನ್ ಅಬು ಸೋಯ್ದಾನ್ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ‘ದುಬೈನಲ್ಲಿ ಕೆಲಸ ಮಾಡಬೇಕಾದರೆ ಮುಸ್ಲಿಂ ಧರ್ಮವನ್ನು ಸ್ವೀಕರಿಸಬೇಕು’ ಎಂಬ ಷರತ್ತನ್ನು ವಿಧಿಸಿ ಮತಾಂಧನು ಸಂತ್ರಸ್ತೆಯ ಮತಾಂತರ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಸಂತ್ರಸ್ತೆಯಿಂದ 3 ಲಕ್ಷದ 41 ಸಾವಿರ ರೂಪಾಯಿ ನಗದು ಮತ್ತು 6 ತೊಲ ಚಿನ್ನವನ್ನು ಲೂಟಿ ಮಾಡಿ ಆರೋಪಿ ಪರಾರಿಯಾಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಂಡಲಿಕನಗರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಾಗಿದ್ದು, ಆತ ದುಬೈಗೆ ಪಲಾಯನ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಸಹೋದ್ಯೋಗಿಯೇ ಹೆಣೆದ ‘ಲವ್ ಜಿಹಾದ್’ ಜಾಲ !
ಸಂತ್ರಸ್ತ ಮಹಿಳೆಯು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಜೂನ್ 2024 ರಲ್ಲಿ ಅದೇ ಶಾಲೆಯಲ್ಲಿ ಶಿಕ್ಷಕನಾಗಿದ್ದ ಹುಸೇನ್ ಸೋಯ್ದಾನ್ ಜೊತೆ ಆಕೆಗೆ ಪರಿಚಯವಾಗಿತ್ತು. ಈ ಪರಿಚಯವು ನಂತರ ಸ್ನೇಹಕ್ಕೆ ತಿರುಗಿತು. ನವೆಂಬರ್-ಡಿಸೆಂಬರ್ 2025 ರಲ್ಲಿ ಹುಸೇನ್ ಆಕೆಯನ್ನು ತನ್ನ ಜಾಲಕ್ಕೆ ಸೆಳೆಯಲು ಪ್ರಾರಂಭಿಸಿದನು. ‘ನನಗೆ ನೀನೆಂದರೆ ಇಷ್ಟ. ಗಂಡನಿಗೆ ವಿಚ್ಛೇದನ ನೀಡಿ ನನ್ನೊಂದಿಗೆ ಇರು’ ಎಂದು ಮರುಳು ಮಾಡಿ, ದುಬೈನಲ್ಲಿ ಕೆಲಸ ಕೊಡಿಸುವ ಆಮಿಷ ತೋರಿಸಿದನು. ಜನವರಿ 4 ರಂದು ನಿರಾಲಾ ಬಜಾರ್ ಪ್ರದೇಶದ ಉಪಾಹಾರ ಗೃಹವೊಂದಕ್ಕೆ ಕರೆದೊಯ್ದು ಹುಸೇನ್ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ.
ಆರೋಪಿಯ ಅಪರಾಧ ಹಿನ್ನೆಲೆ ಮತ್ತು ಆರ್ಥಿಕ ಲೂಟಿ !
ಹಣದ ಅಗತ್ಯವಿದೆ ಎಂದು ಹೇಳಿ ಜನವರಿಯಿಂದ ಏಪ್ರಿಲ್ ಅವಧಿಯಲ್ಲಿ ವೇದಾಂತನಗರ ಮತ್ತು ಸಿಡ್ಕೋ ಪ್ರದೇಶದ ಉಪಾಹಾರ ಗೃಹಗಳಿಗೆ ಮಹಿಳೆಯನ್ನು ಕರೆಸಿಕೊಂಡು ಆಕೆಯಿಂದ 3 ಲಕ್ಷದ 41 ಸಾವಿರ ರೂಪಾಯಿ ನಗದು ಹಾಗೂ ಆನ್‌ಲೈನ್ ಮೂಲಕ ಹಣವನ್ನು ಪಡೆದಿದ್ದಾನೆ. ವಿದೇಶಕ್ಕೆ ಹೋಗಲು ಮತ್ತು ಪಾಸ್‌ಪೋರ್ಟ್ ಮಾಡಿಸಲು ಆರಂಭದಲ್ಲಿ ಸ್ವಂತ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ನಂಬಿಸಿ, ಏಪ್ರಿಲ್ 20 ರಂದು ನಿರಾಲಾ ಬಜಾರ್‌ನ ಉಪಾಹಾರ ಗೃಹದಲ್ಲಿ ಮಹಿಳೆಯಿಂದ ನಂಬಿಸಿ 6 ತೊಲ ಚಿನ್ನವನ್ನು ದೋಚಿದ್ದಾನೆ. ಏಪ್ರಿಲ್ ಆರಂಭದಲ್ಲಿ ಸಂತ್ರಸ್ತೆಯ ಪತಿಗೆ ಈ ವಿಷಯ ತಿಳಿಯುತ್ತಿದ್ದಂತೆ ಮಹಿಳೆಯು ಮನೆ ಬಿಡಬೇಕಾಯಿತು. ಆರೋಪಿಯು ಆಕೆಗೆ ಗಾರಖೇಡಾ ಭಾಗದಲ್ಲಿ ಬಾಡಿಗೆ ಮನೆ ಕೊಡಿಸಿ, ಅಲ್ಲಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಲು ಇನ್ನು 50 ಸಾವಿರ ರೂಪಾಯಿಗಳನ್ನು ವಸೂಲಿ ಮಾಡಿದ್ದಾನೆ.
ಯೂಟ್ಯೂಬ್‌ನಲ್ಲಿ ಮಂಗಳಾಷ್ಟಕ ಹಾಕಿ ಮದುವೆಯ ನಾಟಕ ಮತ್ತು ಬಲವಂತದ ಮತಾಂತರ !
ಏಪ್ರಿಲ್ 19 ರಂದು ಆರೋಪಿಯು ಮನೆಯಲ್ಲೇ ಯೂಟ್ಯೂಬ್‌ನಲ್ಲಿ ಮಂಗಳಾಷ್ಟಕಗಳನ್ನು ಹಾಕಿ ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡು ಹಿಂದೂ ಪದ್ಧತಿಯಂತೆ ಮದುವೆಯಾಗುವ ಸುಳ್ಳು ನಾಟಕವಾಡಿದ್ದಾನೆ. ಆದರೆ ಅದರ ಬೆನ್ನಲ್ಲೇ ತನ್ನ ನಿಜಸ್ವರೂಪವನ್ನು ಪ್ರದರ್ಶಿಸುತ್ತಾ, ‘ದುಬೈನಲ್ಲಿ ಕೆಲಸಕ್ಕೆ ಬರಬೇಕಾದರೆ ಮುಸ್ಲಿಂ ಧರ್ಮವನ್ನು ಸ್ವೀಕರಿಸಲೇಬೇಕು’ ಎಂದು ಹೇಳಿ ಸಂತ್ರಸ್ತ ಹಿಂದೂ ಶಿಕ್ಷಕಿಗೆ ಬಲವಂತವಾಗಿ ಕಲ್ಮಾ ಪಠಿಸುವಂತೆ ಮಾಡಿ, ಆಕೆಯ ಮತಾಂತರ ಪ್ರಕ್ರಿಯೆಯನ್ನು ನಡೆಸಿದ್ದಾನೆ.
ವಂಚನೆ ಅರಿವಾಗುತ್ತಿದ್ದಂತೆ ಪೊಲೀಸರಿಗೆ ದೂರು !
ಏಪ್ರಿಲ್ 25 ರಿಂದ ಆರೋಪಿಯು ಮಹಿಳೆಯೊಂದಿಗೆ ಸಂಪರ್ಕ ಕಡಿತಗೊಳಿಸಲು ಪ್ರಾರಂಭಿಸಿದನು ಮತ್ತು ಮದುವೆಯ ಬಗ್ಗೆ ಕೇಳಿದಾಗ ಹಾರಿಕೆಯ ಉತ್ತರಗಳನ್ನು ನೀಡಿದನು. ಅಂತಿಮವಾಗಿ ಜೂನ್ 1 ರಿಂದ ಆತನ ಮೊಬೈಲ್ ಸಂಖ್ಯೆ ಸಂಪೂರ್ಣವಾಗಿ ಬಂದ್ ಆದಾಗ ತನಗೆ ವಂಚನೆಯಾಗಿರುವುದು ಮಹಿಳೆಗೆ ಅರಿವಾಯಿತು. ಇದಕ್ಕೂ ಮುನ್ನ ಸಂತ್ರಸ್ತೆಯು ದೂರು ನೀಡಿದ್ದರಾದರೂ, ಆರೋಪಿಯು ಒಪ್ಪಂದದ ಧೋರಣೆ ತಳೆದಿದ್ದನು. ಆದರೆ ಆತ ಒಪ್ಪಿಕೊಂಡಂತೆ ನಡೆದುಕೊಳ್ಳದ ಕಾರಣ, ಈಗ ಮಹಿಳೆಯು ಪೊಲೀಸರಿಗೆ ಹೊಸದಾಗಿ ವಿವರವಾದ ದೂರನ್ನು ನೀಡಿದ್ದು, ಅದರಲ್ಲಿ ಮತಾಂತರದ (ಜಿಹಾದಿ ಕೃತ್ಯಗಳ) ಸ್ಪಷ್ಟ ಉಲ್ಲೇಖ ಮಾಡಿದ್ದಾರೆ. ಪೊಲೀಸರು ಈ ಗಂಭೀರ ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!