ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!

ನಗರದ ಹೊರವಲಯಕ್ಕೆ ಮಾಂಸದ ಅಂಗಡಿಗಳ ಸ್ಥಳಾಂತರ

​ವಾರಾಣಸಿ (ಉತ್ತರ ಪ್ರದೇಶ) – ನಗರದ ಒಳಗಡೆಯಿರುವ ಮೀನು ಮತ್ತು ಮಾಂಸದ ಅಂಗಡಿಗಳನ್ನು ನಗರದ ಗಡಿಯಿಂದ ಹೊರಗೆ ಸ್ಥಳಾಂತರಿಸುವ ಯೋಜನೆಗೆ ವಾರಾಣಸಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಮಹಾನಗರ ಪಾಲಿಕೆಯ ಯೋಜನೆಯ ಪ್ರಕಾರ, ನಗರದ ಗಡಿಯಿಂದ ಹೊರಗೆ ಸುಸಜ್ಜಿತ ‘ಮೀಟ್ ಮಾರ್ಕೆಟ್’ (ಮಾಂಸದ ಮಾರುಕಟ್ಟೆ) ಅಭಿವೃದ್ಧಿಪಡಿಸಲಾಗುವುದು.

ಅಲ್ಲಿಗೆ ಮೀನು-ಮಾಂಸದ ಅಂಗಡಿಗಳನ್ನು ಸ್ಥಳಾಂತರಿಸಲಾಗುವುದು. ಇದಕ್ಕಾಗಿ ಮೊದಲ ಹಂತದಲ್ಲಿ ರಾಮನಗರ, ಸುಜಾಬಾದ್, ಗಣೇಶಪುರ, ಅವಲೇಶಪುರ ಮತ್ತು ಶಿವಪುರ ಪ್ರದೇಶಗಳನ್ನು ಆಯ್ಕೆ ಮಾಡಲಾಗಿದೆ. ಈ ಸ್ಥಳಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಮಾಂಸದ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲಾಗುವುದು. ನಗರದ ನಾಲ್ಕೂ ದಿಕ್ಕುಗಳಲ್ಲಿ ಬೇರೆ-ಬೇರೆ ಸ್ಥಳಗಳಲ್ಲಿ ಈ ಮಾರುಕಟ್ಟೆಗಳನ್ನು ನಿರ್ಮಿಸಲಾಗುವುದು. ಇದರಿಂದ ನಗರದ ಸ್ವಚ್ಛತಾ ವ್ಯವಸ್ಥೆ ಸುಧಾರಿಸಲಿದೆ ಮತ್ತು ಸಂಚಾರದ ಸಮಸ್ಯೆಯೂ ಕಡಿಮೆಯಾಗಲಿದೆ.

ಸಂಪಾದಕೀಯ ನಿಲುವು

ಹಿಂದೂಗಳ ಪ್ರತಿಯೊಂದು ತೀರ್ಥಕ್ಷೇತ್ರದ ನಗರಗಳಲ್ಲೂ ಇಂತಹುದೇ ನಿರ್ಧಾರ ತೆಗೆದುಕೊಳ್ಳಬೇಕು!