೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರು ತೆಗೆದುಕೊಂಡ ಮತ್ತು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಅಡಿಪಾಯವಾದ ಅಭ್ಯಾಸವರ್ಗಗಳ ಬಗ್ಗೆ ಪೂ. ಶಿವಾಜಿ ವಟಕರರಿಗೆ ಅರಿವಾದ ಅಂಶಗಳು

ಪೂ. ಶಿವಾಜಿ ವಟಕರ

‘ನನಗೆ ೧೯೮೯ ರಿಂದ ಮುಂಬೈಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಭ್ಯಾಸವರ್ಗಗಳಲ್ಲಿ ಸಹಭಾಗಿಯಾಗುವ ಭಾಗ್ಯ ಲಭಿಸಿತು. ಅವರು ತಮ್ಮ ನಿವಾಸದಲ್ಲಿ ಸಮ್ಮೋಹನ-ಉಪಚಾರ ‘ಚಿಕಿತ್ಸಾಲಯ’ದ ಒಂದು ಕೋಣೆಯಲ್ಲಿ ಅಭ್ಯಾಸ ವರ್ಗ ಮತ್ತು ಸತ್ಸಂಗಗಳನ್ನು ತೆಗೆದುಕೊಳ್ಳುತ್ತಿದ್ದರು. ಈಗ ಅವರು ವಿಶ್ವರೂಪವನ್ನು ಧರಿಸಿದ್ದು ಮಹರ್ಷಿಗಳು ಹೇಳಿದಂತೆ, ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ ವು ಸಂಪೂರ್ಣ ಜಗತ್ತಿಗಾಗಿ ಒಂದು ಆದರ್ಶ ಗುರುಕುಲ ಮತ್ತು ದೀಪಸ್ತಂಭವಾಗುತ್ತಿದೆ. ಆದುದರಿಂದ ನನ್ನ ಆನಂದವು ಈಗ ಗಗನದಲ್ಲಿ ಹಿಡಿಸಲಾರದಷ್ಟಾಗಿದೆ. ಪರಾತ್ಪರ ಗುರು ಡಾಕ್ಟರರ ಅಭ್ಯಾಸವರ್ಗಗಳಲ್ಲಿ ಕಲಿಯುವಾಗ, ಹಾಗೆಯೇ ಸೇವೆ ಮತ್ತು ಪ್ರಸಾರವನ್ನು ಮಾಡುವಾಗ ನನಗೆ ಅವರನ್ನು ಬಹಳ ಹತ್ತಿರದಿಂದ ನೋಡಲು ಮತ್ತು ಅನುಭವಿಸಲು ಸಿಕ್ಕಿತ್ತು. ಅವರ ಅಭ್ಯಾಸವರ್ಗದಿಂದಲೇ ನಾನು ‘ಅಧ್ಯಾತ್ಮಶಾಸ್ತ್ರ ಮತ್ತು ಸಾಧನೆ’ಯನ್ನು ಆರಂಭಿಸಿದೆನು. ಮೊದಲ ಭೇಟಿಯಿಂದಲೇ ನನಗೆ ‘ಅವರು ಒಬ್ಬ ಅಸಾಮಾನ್ಯ ಮಹಾಪುರುಷರಾಗಿದ್ದಾರೆ’ ಮತ್ತು ‘ನನ್ನ ಸರ್ವಸ್ವರಾಗಿದ್ದಾರೆ’, ಎಂದು ಅನಿಸಿತ್ತು.

ಮಹರ್ಷಿಗಳು ಮತ್ತು ಉಚ್ಚ ಕೋಟಿಯ ಸಂತರು ಅವರನ್ನು ಗುರುತಿಸಿ ‘ಅವರು ಸಾಕ್ಷಾತ್ ವಿಷ್ಣುವಿನ ಅವತಾರವಾಗಿದ್ದಾರೆ’, ಎಂದು ಹೇಳಿದ್ದಾರೆ. ಆರಂಭದಲ್ಲಿ ನನಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ಅವರ ಚರಣಗಳಲ್ಲಿ ಕ್ಷಮೆಯಾಚನೆ ಮಾಡುತ್ತೇನೆ. ಅವರು ಅಧ್ಯಾತ್ಮಶಾಸ್ತ್ರದಲ್ಲಿನ ಮುಖ್ಯ ಮತ್ತು ಆವಶ್ಯಕ ಜ್ಞಾನವನ್ನು ಅವರ ಅಭ್ಯಾಸವರ್ಗಗಳು, ಸತ್ಸಂಗಗಳು ಮತ್ತು ಗ್ರಂಥಗಳ ಮೂಲಕ ಕಲಿಸಿದ್ದಾರೆ. ಅವರು ಮೊದಲು ಸ್ವತಃ ತಮ್ಮ ಆಚರಣೆಯಿಂದ, ಮಾತುಗಳಿಂದ ಮತ್ತು ಕೃತಿಗಳಿಂದ ಕಲಿಸಿದರು ‘ಬೊಲೆ ತೈಸಾ ಚಾಲೆ, ತ್ಯಾಚಿ ವಂದಾವಿ ಪಾವೂಲೆ |’, ಎಂಬ ಮರಾಠಿ ವಚನಕ್ಕನುಸಾರ ನಾನು ಅವರ ಚರಣಗಳಲ್ಲಿ ನಿರಂತರ ನತಮಸ್ತಕನಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

ಈಗ ನನ್ನ ವಯಸ್ಸು ೭೧, ಆದುದರಿಂದ ನನಗೆ ಕೆಲವು ವಿಷಯಗಳು ನೆನಪಾಗುವುದಿಲ್ಲ. ‘ನಾನು ಸನಾತನ ಸಂಸ್ಥೆಯ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಕಳೆದ ೨೭ ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದೇನೆ, ಎಂದು ಯಾವಾಗಲೂ ಹೇಳುತ್ತಿರುತ್ತೇನೆ; ಆದರೆ ‘ಅದು ಯಾವುದರ ಮೇಲಿನಿಂದ ?’, ಎಂದು ನನಗೆ ಆಗಾಗ ಸಂಶಯ ಬರುತ್ತಿತ್ತು. ‘೧೧.೨.೧೯೮೯ ರಿಂದ ಪರಾತ್ಪರ ಗುರು ಡಾಕ್ಟರರು ಏನು ಕಲಿಸಿದರು ?’, ಎಂಬ ಟಿಪ್ಪಣಿಗಳ ವಹಿಗಳು ನನಗೆ ದೊರಕಿದ ನಂತರ ನಾನು ಹೇಳುವುದು ಸರಿ ಅನಿಸಿತು. ಆಗ ನನ್ನ ಭಾವಜಾಗೃತವಾಗಿ ನನಗೆ ತುಂಬಾ ಆನಂದವಾಯಿತು. ಆ ಟಿಪ್ಪಣಿಗಳ ವಹಿಗಳ ಆಧಾರದಲ್ಲಿ ನಾನು ಮುಂದಿನ ಮಾಹಿತಿಯನ್ನು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಕೊಡುತ್ತಿದ್ದೇನೆ.

೧. ಪರಾತ್ಪರ ಗುರು ಡಾ. ಆಠವಲೆಯವರ ಚೈತನ್ಯದಿಂದಾಗಿ ಅಭ್ಯಾಸವರ್ಗಗಳ ಕಡೆಗೆ ಆಕರ್ಷಿತವಾಗುವುದು

ತಿಳಿದುಕೊಳ್ಳಲು ಸುಲಭ ಮತ್ತು ಸುಬೋಧ ಭಾಷೆ, ವಿಷಯಗಳನ್ನು ಶಾಸ್ತ್ರಬದ್ಧವಾಗಿ ಮಂಡಿಸುವುದು, ಅಗತ್ಯವಿದ್ದಲ್ಲಿ ಆಕೃತಿಗಳಿಂದ, ಕೋಷ್ಟಕಗಳಿಂದ ಮತ್ತು ಸೂಕ್ಷ್ಮ ಚಿತ್ರಗಳಿಂದ ಕಲಿಸುವುದು. ಇವುಗಳಿಂದಾಗಿ ಅಭ್ಯಾಸವರ್ಗಗಳಲ್ಲಿ ಕಲಿಸಿದ ವಿಷಯಗಳನ್ನು ತಿಳಿದುಕೊಂಡು ಅವುಗಳಿಗನುಸಾರ ಕೃತಿಗಳನ್ನು ಮಾಡಲು ಪ್ರೇರಣೆ ಸಿಗುತ್ತಿತ್ತು. ಆದುದರಿಂದ ನನಗೆ ‘ಏನೇ ಆದರೂ, ಅಭ್ಯಾಸವರ್ಗ ಮತ್ತು ಸತ್ಸಂಗಗಳಿಗೆ ಹೋಗಲೇಬೇಕು’, ಎಂದು ಅನಿಸುತ್ತಿತ್ತು. ಆ ಸಮಯದಲ್ಲಿ ಹಾಗೆ ಅನಿಸಿದರೂ, ‘ಕೇವಲ ಪರಾತ್ಪರ ಗುರು ಡಾಕ್ಟರರ ಚೈತನ್ಯದಿಂದಾಗಿಯೇ ನಾನು ಅವರ ಕಡೆಗೆ ಆಕರ್ಷಿತನಾದೆನು’, ಎಂದು ಈಗ ನನಗೆ ಅನಿಸುತ್ತದೆ.

೨. ಆರಂಭದಲ್ಲಿ ಅಭ್ಯಾಸವರ್ಗಗಳ ಮೂಲಕ ಮಾಡುತ್ತಿದ್ದ ಕಾರ್ಯವನ್ನು ಪರಾತ್ಪರ ಗುರು ಡಾಕ್ಟರ ಆಠವಲೆಯವರು ಈಗ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಮಾಡುತ್ತಿದ್ದಾರೆ

ವಿಜ್ಞಾನ ಮತ್ತು ಅಧ್ಯಾತ್ಮ, ಇವುಗಳ ಸುಂದರ ಸಮನ್ವಯವನ್ನು ಮಾಡಿ ಪರಾತ್ಪರ ಗುರು ಡಾಕ್ಟರರು ಅಭ್ಯಾಸವರ್ಗದಲ್ಲಿ ಆರಂಭದಿಂದಲೇ ಅದ್ವಿತೀಯ ಕಾರ್ಯವನ್ನು ಮಾಡಿದ್ದಾರೆ. ಅವರು ಕಳೆದ ೩೦ ವರ್ಷಗಳಿಂದ ಜಗತ್ತಿಗೆಲ್ಲ ವೈಜ್ಞಾನಿಕ ಭಾಷೆಯಲ್ಲಿ ಜ್ಞಾನವನ್ನು ನೀಡುವ ಅಮೂಲ್ಯ ಕಾರ್ಯವನ್ನು ಮಾಡುತ್ತಿದ್ದಾರೆ. ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ವಿವಿಧ ವೈಜ್ಞಾನಿಕ ಉಪಕರಣಗಳ ಮೂಲಕ ಜಗತ್ತಿನಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಅತೀಂದ್ರಿಯ ಶಕ್ತಿಗಳ ಜ್ಞಾನವನ್ನು ಪಡೆಯುವುದು ಮತ್ತು ಅವುಗಳ ಸತ್ಯತೆಯನ್ನು ಪರಿಶೀಲಿಸುವುದು’, ಮುಂತಾದವುಗಳ ಸಹಿತ ಈಗ ಅವರು ಅನೇಕ ವ್ಯಾಪಕ ಸಂಶೋಧನೆಯ ಕಾರ್ಯವನ್ನು ಮಾಡುತ್ತಿದ್ದಾರೆ.

೩. ಪರಾತ್ಪರ ಗುರು ಡಾ. ಆಠವಲೆಯವರು ೧೯೮೯ ರಿಂದ ಪ್ರಾರಂಭಿಸಿದ ಅಭ್ಯಾಸವರ್ಗಗಳ ವೈಶಿಷ್ಟ್ಯಗಳು

೩ ಅ. ಪ್ರಾಯೋಗಿಕ ಭಾಗಗಳ ಮೂಲಕ ಸಾಧನೆಯನ್ನು ಕಲಿಸುವುದು

೩ ಅ ೧. ವೈದ್ಯಕೀಯ ಶಿಕ್ಷಣವನ್ನು ಪಡೆದಿದ್ದರೂ ಅಭ್ಯಾಸ ವರ್ಗದಲ್ಲಿ ವೈಜ್ಞಾನಿಕ ಭಾಷೆಯಲ್ಲಿ ವಿಷಯವನ್ನು ಮಂಡಿಸುವುದು :

ಪರಾತ್ಪರ ಗುರು ಡಾ. ಆಠವಲೆಯವರು, “ಅಧ್ಯಾತ್ಮಶಾಸ್ತ್ರವು ಒಂದು ಮಹಾನ ಶಾಸ್ತ್ರವಾಗಿದೆ. ಅದು ಅನಂತದ ಜ್ಞಾನವಾಗಿರುವುದರಿಂದ ಅದನ್ನು ಅನಂತ ಕಾಲದವರೆಗೆ ಹೇಳಿದರೂ, ಅದು ಮುಗಿಯುವುದಿಲ್ಲ”, ಎಂದು ಹೇಳುತ್ತಿದ್ದರು. ಆದುದರಿಂದ ಅವರು ಅಭ್ಯಾಸವರ್ಗದಲ್ಲಿ ಸಾಧಕರ ಆವಶ್ಯಕತೆಗನುಸಾರ ಕಲಿಸಿದರು. ‘ವೈದ್ಯಕೀಯ ಶಿಕ್ಷಣ ಮತ್ತು ವೈದ್ಯಕೀಯ ವ್ಯವಸಾಯದಲ್ಲಿದ್ದರೂ ಅಭ್ಯಾಸವರ್ಗದಲ್ಲಿ ವಿಜ್ಞಾನದ ಭಾಷೆಯಲ್ಲಿ ಅವರು ಹೇಗೆ ಕಲಿಸುತ್ತಾರೆ ?’, ಎಂದು ನನಗೆ ಆಶ್ಚರ್ಯವಾಗುತ್ತಿತ್ತು. ಫಲಕದ ಮೇಲೆ ಬರೆದು ಅವರು ‘ಕಂಪನಗಳು, ಲಹರಿಗಳು, ‘ರೆಝೋನನ್ಸ್ ಇಫೆಕ್ಟ್’ ಹೇಗಾಗುತ್ತದೆ ?’, ಎಂಬುದನ್ನು ಹೇಳುತ್ತಿದ್ದರು. ರಾಮನ್ ಇಫೆಕ್ಟ್, ನೋಬಲ್ ಪಾರಿತೋಷಕ ಪಡೆದ ಫಿನಮ್ಯಾನ್ ಮುಂತಾದವರ ಸಂಶೋಧನೆಯ ಕುರಿತು ಹೇಳಿ ಅವರು ಅದನ್ನು ಅಧ್ಯಾತ್ಮಕ್ಕೆ ಜೋಡಿಸುತ್ತಿದ್ದರು. ‘ಮೆಕ್ಯಾನಿಕಲ್ ಇಂಜನೀಯರಿಂಗ್’ದಲ್ಲಿ ‘ವೈಬ್ರೇಶನ್ಸ್’ ಎಂಬ ವಿಶೇಷ ವಿಷಯವನ್ನು ತೆಗೆದುಕೊಂಡಿದ್ದರೂ ನಾನು ಅದನ್ನು ಮರೆತಿದ್ದೆ. ಪರಾತ್ಪರ ಗುರು ಡಾಕ್ಟರರ ಮನೋಲಯ ಮತ್ತು ಬುದ್ಧಿಲಯವಾಗಿರುವುದರಿಂದ ಅವರು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯ ಜೊತೆಗೆ ಏಕರೂಪವಾಗಿದ್ದಾರೆ. ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಲ್ಲಿ ಎಲ್ಲ ಜ್ಞಾನವೂ ಇರುತ್ತದೆ; ಆದುದರಿಂದ ಪರಾತ್ಪರ ಗುರು ಡಾಕ್ಟರರಿಗೆ ತ್ರಿಕಾಲ ಜ್ಞಾನವಿದೆ. ಆದುದರಿಂದ ‘ರೆಝೋನನ್ಸ್ ಇಫೆಕ್ಟ್’ ಮತ್ತು ಕಂಪನಗಳು ಅವರಿಗಾಗಿ ಏನು ದೊಡ್ಡ ವಿಷಯವಲ್ಲ.

೩ ಆ ೨. ಸುಲಭ ಉದಾಹರಣೆಗಳಿಂದ ಅಧ್ಯಾತ್ಮವನ್ನು ಕಲಿಸುವುದು : ಸುಲಭ ಉದಾಹರಣೆಗಳಿಂದ ಅವರು ಅಧ್ಯಾತ್ಮದ ದೊಡ್ಡ ದೊಡ್ಡ ತತ್ತ್ವಗಳನ್ನು ಕಲಿಸುತ್ತಿದ್ದರು, ಉದಾ. ‘ಒಂದೇಸಮನಾಗಿರುವ ೨ ತಂಬೂರಿಗಳನ್ನು ತೆಗೆದುಕೊಂಡು ಅವುಗಳ ತಂತಿಗಳಿಗೆ ಒಂದೇ ರೀತಿಯ ಒತ್ತಡವನ್ನು ಕೊಟ್ಟರೆ. ಒಂದು ತಂಬೂರಿಯನ್ನು ನುಡಿಸಿದರೆ, ಇನ್ನೊಂದು ತಂಬೂರಿಯೂ ‘ರೆಝೋನನ್ಸ್ ಇಫೆಕ್ಟ್’ ದಿಂದ ತಾನಾಗಿಯೇ ನಾದವನ್ನು ತೆಗೆಯುತ್ತದೆ’, ಈ ತತ್ತ್ವಕ್ಕನುಸಾರ ಆಶ್ರಮದಲ್ಲಿರುವ ಸಾಧಕರಲ್ಲಿ ಈಶ್ವರೀ ರಾಜ್ಯ ಬಂದರೆ, ಆಶ್ರಮದಲ್ಲಿ ಈಶ್ವರೀ ರಾಜ್ಯ ಬರುವುದು. ಅದು ರಾಮನಾಥಿ (ಗೋವಾ)ದ ಆಶ್ರಮದಲ್ಲಿ ಬಂದರೆ, ಗೋವಾ ರಾಜ್ಯದಲ್ಲಿ ಬರುವುದು. ಗೋವಾ ರಾಜ್ಯದಲ್ಲಿ ಬಂದರೆ ಇತರ ಎಲ್ಲ ರಾಜ್ಯಗಳಲ್ಲಿ ತಾನಾಗಿ ಬರುವುದು.

೩ ಆ. ‘ವೈಯಕ್ತಿಕ ಆಧ್ಯಾತ್ಮಿಕ ಉನ್ನತಿ’ ಕೇಂದ್ರಬಿಂದು : ೧೧.೨.೧೯೮೯ ರಿಂದ ಪ್ರತಿ ಶನಿವಾರ ಮತ್ತು ರವಿವಾರ ಅಭ್ಯಾಸ ವರ್ಗಗಳು ನಡೆಯುತ್ತಿದ್ದವು. ಅವುಗಳಲ್ಲಿ ಪರಾತ್ಪರ ಗುರು ಡಾಕ್ಟರರು ಪ್ರಾಮುಖ್ಯತೆಯಿಂದ ‘ಅಭ್ಯಾಸವರ್ಗಕ್ಕೆ ಬರುವವರ ಸಾಧನೆಯು ಹೇಗೆ ಆಗುವುದು ?’, ಎಂಬುದಕ್ಕಾಗಿಯೇ ಪ್ರಾಧಾನ್ಯತೆಯನ್ನು ಕೊಡುತ್ತಿದ್ದರು. ‘ವೈಯಕ್ತಿಕ ಆಧ್ಯಾತ್ಮಿಕ ಉನ್ನತಿ’ ಇದುವೇ ಅವರು ಕಲಿಸುವ, ಹಾಗೆಯೇ ಅವರ ಅಭ್ಯಾಸವರ್ಗ, ಸತ್ಸಂಗ ಮತ್ತು ಅಧ್ಯಾತ್ಮಪ್ರಸಾರ ಇವುಗಳ ಕೇಂದ್ರಬಿಂದುವಾಗಿತ್ತು.

೩ ಇ. ಸೂತ್ರಗಳ ರೂಪದಲ್ಲಿ ಅಧ್ಯಾತ್ಮದ ಪ್ರತಿಯೊಂದು ವಿಷಯವನ್ನು ಕಲಿಸಿ ಸಾಧನೆಯ ಮಹತ್ವವನ್ನು ಬಿಂಬಿಸುವುದು : ಅಭ್ಯಾಸ ವರ್ಗದಲ್ಲಿ ಅವರು ಸ್ವತಃ ತಾವೇ ಬರೆದಿರುವ ‘ಅಧ್ಯಾತ್ಮಶಾಸ್ತ್ರ’ ಎಂಬ ಪುಸ್ತಕದಲ್ಲಿದ್ದ ಕೃತಿಶೀಲ ಮತ್ತು ನಮಗೆ ಆವಶ್ಯಕವಿರುವ ಮಹತ್ವದ ವಿಷಯಗಳನ್ನು ಕಲಿಸುತ್ತಿದ್ದರು. ಅವರು ಅಧ್ಯಾತ್ಮದಲ್ಲಿ ಪ್ರತಿಯೊಂದು ವಿಷಯವನ್ನು ಸ್ಪಷ್ಟವಾಗಿ ಹೇಳುತ್ತಿದ್ದರು. ಸಂದೇಹಗಳ ನಿವಾರಣೆಯನ್ನು ಮಾಡಿ ಎಲ್ಲರಿಗೂ ಅರ್ಥವಾದ ಮೇಲೆಯೇ, ಅವರು ಮುಂದಿನ ಭಾಗವನ್ನು ಕಲಿಸುತ್ತಿದ್ದರು. ‘ಅಧ್ಯಾತ್ಮಶಾಸ್ತ್ರ’ ಈ ಪುಸ್ತಕದ ವಿಷಯವನ್ನು ತಿಳಿಸಿ ಹೇಳುವಾಗ ಅವರು ಯಾವುದೇ ಗ್ರಂಥದಲ್ಲಿ ಲಭ್ಯವಿಲ್ಲದ ಹೊಸ ಮಾಹಿತಿ ಮತ್ತು ಅಂಕಿಅಂಶಗಳನ್ನು ಹೇಳುತ್ತಿದ್ದರು. ಅವರು ಅಂಶಾಂತ್ಮಕವಾಗಿ ಪ್ರತಿಯೊಂದು ವಿಷಯವನ್ನು ಫಲಕದ ಮೇಲೆ ಬರೆದು ಕಲಿಸುತ್ತಿದ್ದರು. ಇದರಲ್ಲಿ ಆ ವಿಷಯಗಳ ಸ್ಪಷ್ಟೀಕರಣವನ್ನು ಆಕೃತಿಗಳ ಮೂಲಕ ತೋರಿಸುತ್ತಿದ್ದರು.

‘ಯಾರಾದರೊಬ್ಬರಿಗೆ ಕ್ಷಯ ರೋಗವಾದರೆ, ಅದರ ಮೇಲೆ ಶಾರೀರಿಕ ರೋಗವೆಂದು ಉಪಚಾರ ಮಾಡಬೇಕು; ಆದರೆ ಅವನಿಗೆ ಸೂಕ್ಮ ಜಂತುಗಳು (ಬೆಕ್ಟೇರಿಯಾ) ಏಕೆ ತೊಂದರೆ ಕೊಟ್ಟವು ? ಏಕೆಂದರೆ ಅವನು ಗುಡಿಸಲಿನಲ್ಲಿರುತ್ತಿದ್ದನು ! ಅವನು ಗುಡಿಸಲಿನಲ್ಲಿ ಏಕೆ ಇದ್ದನು ? ಏಕೆಂದರೆ ಅವನು ಅಲ್ಲಿಯೇ ಜನಿಸಿದನು ? ಅವನು ಅಲ್ಲಿಯೇ ಏಕೆ ಜನಿಸಿದ ? ಕೊನೆಗೆ ಅವನ ಪ್ರಾರಬ್ಧ ! ಅಂದರೆ ಪ್ರಾರಬ್ಧವೆಂದು ಅವನಿಗೆ ಈ ತೊಂದರೆಯಾಯಿತು. ಅದನ್ನು ಅನುಭವಿಸಿ ತೀರಿಸಲು ಮತ್ತು ಅದನ್ನು ಕಡಿಮೆ ಮಾಡಿಕೊಳ್ಳಲು ಸಾಧನೆಯನ್ನು ಮಾಡುವುದು ಆವಶ್ಯಕವಾಗಿದೆ, ಹೀಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು. ಕೊನೆಗೆ ಅವರು ಅಧ್ಯಾತ್ಮ ಮತ್ತು ಸಾಧನೆಯ ಮಹತ್ವವನ್ನು ಹೇಳುತ್ತಿದ್ದರು. ‘ಅದಕ್ಕಾಗಿ ಯಾವ ಸಾಧನೆಯನ್ನು ಮಾಡಬೇಕು ?, ಎಂಬುದನ್ನು ಹೇಳಿ ಅದರಂತೆ ಅವರು ಸಾಧಕರಿಂದ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದರು.

೩ ಈ. ಕೋಷ್ಟಕಗಳಿಂದ ವಿಷಯವನ್ನು ತಿಳಿಸಿ ಹೇಳುವುದು : ಮೊದಲು ಅವರು ಕುಲದೇವತೆಯ ನಾಮಸ್ಮರಣೆಯ ಮಹತ್ವವನ್ನು ಹೇಳಿ ಸಾಧಕರಿಂದ ಕುಲದೇವತೆಯ ನಾಮಸ್ಮರಣೆಯನ್ನು ಮಾಡಿಸಿಕೊಂಡರು. ಕಾಲಾಂತರ ‘ಸಾಧಕರ ನಾಮಸ್ಮರಣೆಯು ಸರಿಯಾಗಿ ಆಗುವುದಿಲ್ಲ’, ಎಂಬುದು ಗಮನಕ್ಕೆ ಬಂದನಂತರ ಅವರು ಶೋಧಿಸಿದ ಸಮ್ಮೋಹನಶಾಸ್ತ್ರದ ಸಾಧನೆಗೆ ಪೂರಕವಾಗಿರುವ ಮಾನಸಿಕ ಸ್ತರದ ಅಭ್ಯಾಸವನ್ನೂ ಮಾಡಿಸಿಕೊಂಡರು, ಉದಾ. ‘ಭೌತಿಕ ಸುಖದ ಕಡೆಗೆ ಗಮನವಿರುವ ಮನುಷ್ಯನು ಯಾವಾಗಲೂ ಚಿಂತಾಗ್ರಸ್ತನಾಗಿರುತ್ತಾನೆ ?’, ಎಂಬುದನ್ನು ಮುಂದಿನ ಕೋಷ್ಟಕದಿಂದ ಕಲಿಸಿದರು.

೩ ಉ. ಪ್ರತ್ಯಕ್ಷ ಉದಾಹರಣೆಯಿಂದ ಸ್ವಯಂಸೂಚನೆಯ ಪದ್ಧತಿಯನ್ನು ಕಲಿಸುವುದು : ಮುಂಬೈಯಲ್ಲಿ ಅವರ ಮನೆಯ ಮುಂದಿನ ಸೇತುವೆಯ ಅಡಿಯಲ್ಲಿ ಗುಡಿಸಲುಗಳಿದ್ದವು. ಅವುಗಳಲ್ಲಿ ಅನೇಕ ಬಡವರು ಮತ್ತು ದುಶ್ಚಟಗಳಿರುವ ಜನರು ದುಃಖದ ಜೀವನವನ್ನು ನಡೆಸುತ್ತಿದ್ದರು. ಸಾಕ್ಷಿಭಾವವನ್ನು ಕಲಿಸಲು ಅವರು ಅವರ ಉದಾಹರಣೆಯನ್ನು ಕೊಡುತ್ತಿದ್ದರು. ಯಾವುದಾದರೊಂದು ವಿಷಯದ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲದಿದ್ದರೆ, ಅದರ ಕಡೆಗೆ ತತ್ತ್ವಜ್ಞಾನದ ಭೂಮಿಕೆಯಿಂದ ನೋಡಲು ಅವರು ಇಂತಹ ಪ್ರತ್ಯಕ್ಷ ಉದಾಹರಣೆಗಳನ್ನು ಕೊಟ್ಟು ಸ್ವಯಂಸೂಚನೆಯ ಪದ್ಧತಿ ‘ಆ ೨’ ರಂತೆ ಕಲಿಸುತ್ತಿದ್ದರು. ಸಮ್ಮೋಹನಶಾಸ್ತ್ರದಲ್ಲಿನ ಉಪಚಾರ ಪದ್ಧತಿಯಂತೆ ಸಂದರ್ಭವನ್ನು ಕೊಟ್ಟು ಅವರು ನಮ್ಮ ವ್ಯಕ್ತಿತ್ವಕ್ಕೆ ಬಲವನ್ನು ನೀಡಿ ನಮ್ಮ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುತ್ತಿದ್ದರು.’

೩ ಊ. ವಿಜ್ಞಾನಯುಗದಲ್ಲಿ ಸಾಧಕರ ‘ಏಕೆ ಮತ್ತು ಹೇಗೆ ?’, ಎಂಬ ಪ್ರಶ್ನೆಗಳ ಉತ್ತರಗಳನ್ನು ಕೊಡುವುದು : ನನಗೆ ಪ್ರವಚನವನ್ನು ಕೇಳಲು ಸಮಯವಿರಲಿಲ್ಲ. ಒಂದು ಹವ್ಯಾಸವೆಂದು ನಾನು ಅದನ್ನು ಕೇಳಿ ‘ಚೆನ್ನಾಗಿದೆ ಚೆನ್ನಾಗಿದೆ’, ಎಂದು ಹೇಳುತ್ತಿದ್ದೆ; ಆದರೆ ‘ಪ್ರತ್ಯಕ್ಷ ಪ್ರಸಂಗ ಬಂದಾಗ, ಪ್ರವಚನ ಕೇಳುವವನು ಮತ್ತು ಹೇಳುವವನು, ಇಬ್ಬರೂ ಆಯಾ ಪ್ರಸಂಗಗಳಲ್ಲಿ ದುಃಖದಿಂದ ಹೊರಗೆ ಬರಲು ಸಾಧ್ಯವಿಲ್ಲ’, ಎಂಬುದು ನನ್ನ ಅನುಭವವಾಗಿತ್ತು. ಆದುದರಿಂದ ‘ಅದು ನಮ್ಮ ವಿಷಯವಲ್ಲ’, ಎಂದು ನಾನು ನಿರ್ಧರಿಸಿದ್ದೆನು. ಪರಾತ್ಪರ ಗುರು ಡಾ. ಆಠವಲೆಯವರ ಅಧ್ಯಾತ್ಮಶಾಸ್ತ್ರದ ಅಭ್ಯಾಸವರ್ಗವಿತ್ತು; ಆದುದರಿಂದ ನಾನು ಅವರ ಪ್ರವಚನಕ್ಕೆ ಹೋಗಿದ್ದೆನು. ಅವರು ೧೧.೨.೧೯೮೯ ರ ದಿನದ ಅಭ್ಯಾಸ ವರ್ಗದಲ್ಲಿ, “ಪ್ರವಚನವೆಂದರೆ ದೈನಂದಿನ ದುಃಖದಿಂದ ಹೊರಗೆಬರಲು ಮಾಡಿದ ಮಾರ್ಗದರ್ಶನ ! ಸತ್ಯವು ಕಾಲದ ಪರೀಕ್ಷೆಯನ್ನು ಎದುರಿಸುತ್ತದೆ ಮತ್ತು ಅಸತ್ಯವು ಅಳಿಸಿ ಹೋಗುತ್ತದೆ. ಅಧ್ಯಾತ್ಮಶಾಸ್ತ್ರವು ಕೇವಲ ಶಾಸ್ತ್ರವಾಗಿರದೇ ಮಹಾಶಾಸ್ತ್ರವಾಗಿದೆ. ‘ನಾವು ಎಷ್ಟು ದಿನ ಬದುಕುತ್ತೇವೆ ?’, ಎಂಬುದು ನಮಗೆ ಗೊತ್ತಿಲ್ಲ; ಆದ್ದರಿಂದ ‘ಅಧ್ಯಾತ್ಮ ಮತ್ತು ಸಾಧನೆಯನ್ನು ವಯಸ್ಸಾದ ಮೇಲೆ (ಮುದುಕರಾದ ಮೇಲೆ) ಮಾಡೋಣ’, ಎಂದು ಹೇಳುವುದು ತಪ್ಪಾಗಿದೆ. ನಮ್ಮ ಬಹಳಷ್ಟು ಪ್ರಶ್ನೆಗಳು ಆಧ್ಯಾತ್ಮಿಕ ಕಾರಣಗಳಿಂದ ಉಂಟಾಗುತ್ತವೆ. ಅವುಗಳಿಗೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು. ಅಧ್ಯಾತ್ಮ ವೆಂದರೆ ಮನಸ್ಸು ಮತ್ತು ಬುದ್ಧಿಯ ಆಚೆಗಿರುವ ಕಾರಣಗಳ ವಿಶ್ಲೇಷಣೆ ಮತ್ತು ಉಪಾಯ !”, ಎಂದು ಹೇಳುತ್ತಿದ್ದರು. ಈ ರೀತಿ ಅವರು ‘ಅಧ್ಯಾತ್ಮವೆಂದರೆ ನಿಶ್ಚಿತವಾಗಿ ಏನು ?’, ‘ಯಾರು ಸಾಧನೆ ಮಾಡಬಹುದು ?’, ‘ಅದರ ಬಗ್ಗೆ ಯಾವ ತಪ್ಪು ಕಲ್ಪನೆಗಳಿವೆ ?’, ಎಂಬುದನ್ನು ಉದಾಹರಣೆಗಳೊಂದಿಗೆ ತಿಳಿಸಿ ಹೇಳುತ್ತಿದ್ದರು. ಅವರು, “ಅಧ್ಯಾತ್ಮವನ್ನು ಕಲಿತು ಸಾಧನೆಯನ್ನು ಮಾಡಲು ವೇದ, ಪುರಾಣ, ಮಹಾಭಾರತ, ಭಗವದ್ಗೀತೆ ಇತ್ಯಾದಿಗಳನ್ನು ಓದುವ ಆವಶ್ಯಕತೆಯಿಲ್ಲ; ಏಕೆಂದರೆ ಮನಸ್ಸು ಮತ್ತು ಬುದ್ಧಿಯ ಕಾರ್ಯ ಮುಗಿದ ಮೇಲೆ ಅಧ್ಯಾತ್ಮ ಪ್ರಾರಂಭವಾಗುತ್ತದೆ,” ಎಂದು ಹೇಳುತ್ತಿದ್ದರು.  (ಮುಂದುವರಿಯುವುದು)

– (ಪೂ.) ಶ್ರೀ. ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ. (೧೬.೮.೨೦೧೭)