
ವಾಷಿಂಗ್ಟನ್ (ಅಮೆರಿಕ) – ಭಾರತದ ಪ್ರಜನನ ದರವು ಹಲವು ವರ್ಷಗಳ ಹಿಂದೆಯೇ ಸುಶಿಕ್ಷಿತ ವರ್ಗದಲ್ಲಿ ಪುನರುತ್ಪಾದನೆ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಭಾರತದ ಒಟ್ಟು ಪ್ರಜನನ ದರವು ಕುಸಿದು ಅಂದಾಜು 1.9 ಕ್ಕೆ ತಲುಪಿದೆ, ಹಾಗೂ ಪುನರುತ್ಪಾದನೆ ಪ್ರಮಾಣವನ್ನು 2.1 ಎಂದು ಪರಿಗಣಿಸಲಾಗುತ್ತದೆ. ಇದರಿಂದಾಗಿ ದೀರ್ಘಾವಧಿಯಲ್ಲಿ ಜನಸಂಖ್ಯೆಯ ರಚನೆಯ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದು ‘ಟೆಸ್ಲಾ’ ಮತ್ತು ‘ಸ್ಪೇಸ್‌ಎಕ್ಸ್’ ಸಾರಕಾರಿ ಸಂಸ್ಥೆಗಳ ಮಾಲೀಕರಾದ ಇಲಾನ್ ಮಸ್ಕ್ ಅವರು ಪೋಸ್ಟ್ ಒಂದರ ಮೂಲಕ ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕಾಗಿ ಅವರು ವರದಿಯೊಂದರ ಉಲ್ಲೇಖವನ್ನು ನೀಡಿದ್ದಾರೆ.
ವರದಿಯಲ್ಲಿ ದೆಹಲಿಯ ಪ್ರಜನನ ದರವು ಕುಸಿದು ಅಂದಾಜು 1.2 ಕ್ಕೆ ತಲುಪಿದೆ ಎಂದು ದಾವೆ ಮಾಡಲಾಗಿದ್ದು, ಇದು ಹಲವು ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಕಡಿಮೆ ಎಂದು ಪರಿಗಣಿಸಲಾಗಿದೆ. ತಜ್ಞರ ಪ್ರಕಾರ, ನಗರ ಪ್ರದೇಶಗಳಲ್ಲಿ ಶಿಕ್ಷಣ, ಜೀವನಶೈಲಿ ಮತ್ತು ಆರ್ಥಿಕ ಕಾರಣಗಳಿಂದಾಗಿ ಕುಟುಂಬದ ಗಾತ್ರವು ಸತತವಾಗಿ ಚಿಕ್ಕದಾಗುತ್ತಿದೆ.
ವಿಶ್ವಸಂಸ್ಥೆಯ ವರದಿಯಲ್ಲೂ ಮಾಹಿತಿ
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ‘ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್ 2025’ ರಲ್ಲೂ ಭಾರತದ ಪ್ರಜನನ ದರವು 2.1 ಕ್ಕಿಂತ ಕೆಳಗೆ ಕುಸಿದು 1.9 ಕ್ಕೆ ಬಂದಿದೆ ಎಂದು ನಮೂದಿಸಲಾಗಿದೆ. ಭಾರತವು ಈಗ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ; ಆದರೆ ಇದರ ಹೊರತಾಗಿಯೂ ಜನಸಂಖ್ಯೆ ಬೆಳವಣಿಗೆಯ ದರವು ಕ್ರಮೇಣ ಕಡಿಮೆಯಾಗುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation