ಸತತ ಭಾವಾವಸ್ಥೆಯಲ್ಲಿರುವ ಮತ್ತು ಇಳಿವಯಸ್ಸಿನಲ್ಲಿಯೂ ಪರಿಪೂರ್ಣ ಸೇವೆಯ ತಳಮಳ ಇರುವ ಪೂ. ವಿನಾಯಕ ಕರ್ವೆ !

ಪೂ. ವಿನಾಯಕ ಕರ್ವೇ ಮಾಮಾ ಇವರ ಹುಟ್ಟುಹಬ್ಬದ ನಿಮಿತ್ತ…

ಪೂ. ವಿನಾಯಕ ಕರ್ವೆಯವರ ಹುಟ್ಟುಹಬ್ಬದ ನಿಮಿತ್ತ ಅವರ ಚರಣಗಳಲ್ಲಿ ಸನಾತನ ಪರಿವಾರದ ವತಿಯಿಂದ ಕೃತಜ್ಞತಾಪೂರ್ವಕ ನಮಸ್ಕಾರಗಳು

ಆಶ್ವಯುಜ ಕೃಷ್ಣ ಪಕ್ಷ ಪಂಚಮಿ (೪.೧೧.೨೦೨೦) ರಂದು ಪೂ. ವಿನಾಯಕ ಕರ್ವೆಯವರ ಹುಟ್ಟುಹಬ್ಬವಿದೆ. ಆ ನಿಮಿತ್ತ ಸಾಧಕರಿಗೆ ಗಮನಕ್ಕೆ ಬಂದ ಅವರ ಗುಣವೈಶಿಷ್ಟ್ಯ ಗಳನ್ನು ಇಲ್ಲಿ ನೀಡಲಾಗಿದೆ.

ಶ್ರೀ. ಸುಮನ ಹುರುಕಡ್ಲೆ, ಮಂಗಳೂರು

೧. ಸ್ವಯಂಶಿಸ್ತು

ಅ. ‘ಪೂ. ಕರ್ವೆ ಮಾಮಾರವರು ನಿಗದಿತ ಸಮಯಕ್ಕೆ ಏಳುತ್ತಾರೆ ಮತ್ತು ಮಲಗುತ್ತಾರೆ.

ಆ. ಅವರು ವೈಯಕ್ತಿಕ ಸೇವೆ (ಉದಾ. ಬಟ್ಟೆ ತೊಳೆಯುವುದು) ನಿಯೋಜಿತ ಸಮಯದಲ್ಲಿ ಮಾಡುತ್ತಾರೆ.

ಇ. ಅವರು ಮಹಾಪ್ರಸಾದ ಸೇವಿಸುವ ಸಮಯವನ್ನು ಪಾಲಿಸುತ್ತಾರೆ.

೨. ವ್ಯವಸ್ಥಿತವಾಗಿರುವುದು

ಅ. ಸಾತ್ತ್ವಿಕ ಉತ್ಪಾದನೆಗಳಿಗೆ ಸಂಬಂಧಿಸಿದ ಸೇವೆಯನ್ನು ಮಾಡುವಾಗ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಅವರು ವ್ಯವಸ್ಥಿತವಾಗಿ ಇಡುತ್ತಾರೆ.

ಆ. ಅವರು ಊಟದ ಪದಾರ್ಥಗಳನ್ನು ವ್ಯವಸ್ಥಿತವಾಗಿ ಬಡಿಸಿಕೊಳ್ಳುತ್ತಾರೆ. ಹಾಗೆಯೇ ಯಾವಾಗಲೂ ವ್ಯವಸ್ಥಿತವಾಗಿ ಕುಳಿತುಕೊಳ್ಳುತ್ತಾರೆ.

೩. ಜಿಗುಟುತನದಿಂದ ಕಲಿಸುವುದು

‘ಒಮ್ಮೆ ನಾನು ಅವರಿಗೆ ಸೇವೆಯಲ್ಲಿ ಸಹಾಯ ಮಾಡಲು ಹೋಗಿದ್ದಾಗ, ನನಗೆ ಕುಂಕುಮವನ್ನು ‘ಪ್ಯಾಕ್ ಮಾಡಲು ಬರುತ್ತಿರಲಿಲ್ಲ. ಆಗ ಅವರು ನನಗೆ ನಮ್ರತೆಯಿಂದ ಮೇಲಿಂದ ಮೇಲೆ ಮಾಡಿ ತೋರಿಸಿ ಕಲಿಸಿದರು.

೪. ನಮ್ರತೆಯಿಂದ ತಪ್ಪುಗಳನ್ನು ಹೇಳುವುದು

ನಮ್ಮಿಂದ ಸ್ವಚ್ಛತೆಯ ವಿಷಯದಲ್ಲಿ ತಪ್ಪುಗಳು ಆಗುತ್ತಿರುತ್ತವೆ. ಪೂ. ಮಾಮಾರವರು ನಮಗೆ ನಮ್ಮ ತಪ್ಪುಗಳನ್ನು ನಮ್ರತೆಯಿಂದ ಹೇಳುತ್ತಾರೆ. ಆ ಸಮಯದಲ್ಲಿ ನಮ್ಮಿಂದಾದ ತಪ್ಪುಗಳನ್ನು ತಕ್ಷಣವೇ ಒಪ್ಪಿಕೊಳ್ಳುತ್ತೇವೆ ಮತ್ತು ನಮ್ಮಿಂದ ಆ ತಪ್ಪಿನಿಂದ ಕಲಿಯುವ ದೃಷ್ಟಿಯಿಂದ ಪ್ರಯತ್ನಗಳಾಗುತ್ತವೆ. ಮರುದಿನ ಆ ಕೃತಿಯನ್ನು ಮಾಡುವಾಗ ತಪ್ಪುಗಳನ್ನು ತಿದ್ದಿಕೊಂಡು ಯೋಗ್ಯ ಕೃತಿಯನ್ನು ಮಾಡಲು ನಾವು ವಿಚಾರ ಮಾಡುತ್ತೇವೆ.

೫. ಪೂ. ಕರ್ವೆಮಾಮಾರವರ ಬಗ್ಗೆ ಬಂದ ಅನುಭೂತಿ

೫ ಅ. ಸುಗಂಧ ಬರುವುದು : ‘ಪೂ. ಕರ್ವೆಮಾಮಾ ಸಾತ್ತ್ವಿಕ ಉತ್ಪಾದನೆಗಳಿಗೆ ಸಂಬಂಧಿಸಿದ ಸೇವೆಯನ್ನು ಮಾಡುವಾಗ ಅವರು ಕುಳಿತುಕೊಳ್ಳುವ ಸ್ಥಳದಲ್ಲಿ ನಮಗೆ ಸುಗಂಧ ಬರುತ್ತದೆ ಮತ್ತು ಚೈತನ್ಯದ ಅರಿವಾಗುತ್ತದೆ.

೫ ಆ. ಭಾವಜಾಗೃತಿಯಾಗುವುದು : ಅವರ ಕೋಣೆಯಲ್ಲಿ ಪರಾತ್ಪರ ಗುರುದೇವರ ಛಾಯಾಚಿತ್ರವಿದೆ. ಅದನ್ನು ನೋಡಿದಾಗ ‘ಅಲ್ಲಿ ಪ್ರತ್ಯಕ್ಷ ಗುರುದೇವರೇ ಇದ್ದಾರೆ ಎಂಬ ಭಾವ ಮೂಡುತ್ತದೆ. ಪೂ. ಮಾಮಾರವರ ಗುರುಪಾದುಕೆಗಳನ್ನು ಪೂಜಿಸುವಾಗ ಅವರು ಭಾವದ ಕ್ಷಣವನ್ನು ಅಂತರ್ಮನಸ್ಸಿನಲ್ಲಿ ಅನುಭವಿಸುತ್ತಿರುವ ಅರಿವಾಗುತ್ತದೆ. ಅದೇ ಸಮಯದಲ್ಲಿ ಅವರ ಮುಖವನ್ನು ನೋಡಿದಾಗ ಸಾಧಕರಿಗೆ ಭಾವಜಾಗೃತಿಯಾಗುತ್ತದೆ.

‘ಹೇ ಗುರುದೇವಾ, ನೀವು ನಮಗೆ ಪೂ. ಕರ್ವೆ ಮಾಮಾರವರ ಒಡನಾಟದಲ್ಲಿರಲು ಅವಕಾಶವನ್ನು ನೀಡಿದ್ದೀರಿ, ಹಾಗೂ ಪೂ. ಸಂತರ ವಿಷಯದಲ್ಲಿ ಬರೆಯುವ ಯೋಗ್ಯತೆ ಇಲ್ಲದಿರುವಾಗಲೂ ಅವರ ವಿಷಯದಲ್ಲಿ ಬರೆಸಿಕೊಂಡಿದ್ದೀರಿ. ಗುರುದೇವರೇ, ನಿಮ್ಮ ಮತ್ತು ಪೂ. ಕರ್ವೆಮಾಮಾರವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !

ಕು. ಪ್ರಿಯಾಂಕಾ ಹಿರೇಮಠ, ಮಂಗಳೂರು

೧. ಪರಿಪೂರ್ಣಸೇವೆಯನ್ನು ಮಾಡುವುದು

ಪೂ. ಮಾಮಾನವರೊಂದಿಗೆ ಸೇವೆಯನ್ನು ಮಾಡುವಾಗ ನಮ್ಮಲ್ಲಿ ಉತ್ಸಾಹವು ಜಾಗೃತವಾಗುತ್ತದೆ ಮತ್ತು ಅವರಲ್ಲಿನ ಸೇವೆಯ ತಳಮಳ, ಆನಂದ ಭಾವ ಮತ್ತು ಸೇವೆಯನ್ನು ಪರಿಪೂರ್ಣ ಮಾಡುವುದು, ಸಮಯಮಿತಿಯನ್ನು ಹಾಕಿಕೊಂಡು ಸೇವೆ ಮಾಡುವುದು ಈ ರೀತಿ ಅನೇಕ (ಹಲವಾರು) ಗುಣಗಳು ಕಲಿಯಲು ಸಿಗುತ್ತವೆ.  ಸೇವೆಯನ್ನು ಮಾಡುವಾಗ ಹೆಚ್ಚು ಫಲನಿಷ್ಪತ್ತಿ ಇರುತ್ತದೆ ಮತ್ತು ಸರಿಯದ ಸಮಯಕ್ಕೆ ಸೇವೆ ಮುಗಿಯವುದು ಮತ್ತು ಅದಕ್ಕೂ ಮೀರಿ ಸೇವೆ ಮಾಡುವುದು ಕೂಡ ಗಮನಕ್ಕೆ ಬರುತ್ತದೆ.

೨. ಪೂ. ಮಾಮಾರಿಂದ ವ್ಯವಸ್ಥಿತ ಗುಣವು ಕಲಿಯಲು ಸಿಗುತ್ತದೆ.

೩. ವೈಯಕ್ತಿಕ ಸ್ತರದಲ್ಲಿ ವಸ್ತುಗಳು ಚೀಲದಲ್ಲಿ ಅಚ್ಚುಕಟ್ಟಾಗಿರುತ್ತವೆ. (ವ್ಯವಸ್ಥಿತವಾಗಿರುತ್ತವೆ.)

೪.  ಅವರು ಕುಂಕುಮದ ಸೇವೆಯನ್ನು ಮಾಡುತ್ತಿರುವಾಗ ಅಲ್ಲಿರುವ ಎಲ್ಲ ವಸ್ತುಗಳು ಅಚ್ಚುಕಟ್ಟಾಗಿರುತ್ತವೆ.

೫. ಊಟ ಮಾಡುವಾಗ ಪದಾರ್ಥಗಳನ್ನು ಸರಿಯಾಗಿ (ವ್ಯವಸ್ಥಿತವಾಗಿ) ಬಡಿಸಿಕೊಳ್ಳುತ್ತಾರೆ. ಅವರು ಕುಳಿತುಕೊಳ್ಳುವಾಗ ವ್ಯವಸ್ಥಿತವಾಗಿ ಕುಳಿತುಕೊಳ್ಳುವುದು ಕಾಣಿಸುತ್ತದೆ.

೬. ಪೂ. ಮಾಮಾರಿಂದ ಸ್ವಯಂಶಿಸ್ತು ಕಲಿಯಲು ಸಿಗುವುದು

ಅ. ಪೂ. ಮಾಮಾನವರ ಏಳುವ ಮತ್ತು ಮಲಗುವ ಸಮಯವು ಯಾವಾಗಲೂ ನಿಶ್ಚಿತವಿರುತ್ತದೆ.

ಆ. ಅವರ ವೈಯಕ್ತಿಕ ಸೇವೆಗಳು (ಉದಾ. ಬಟ್ಟೆ ತೊಳೆಯುವುದು ಇತ್ಯಾದಿ) ಪ್ರತಿದಿನ ಆಯೋಜಿಸಿದ ಮತ್ತು ಸಮಯಕ್ಕೆ ಆಗುತ್ತಿರುತ್ತದೆ.

೬. ಮಕ್ಕಳೊಂದಿಗೆ ಪೂ. ಮಾಮಾನವರ ವರ್ತನೆ ಹಾಗೂ ಇತರ ಸಮಯದಲ್ಲಿ ಅವರ ವರ್ತನೆಯಲ್ಲಿ ಕಲಿಯಲು ಸಿಕ್ಕಿರುವ ಅಂಶಗಳು

ಒಮ್ಮೆ ಪೂ. ಮಾಮನವರೊಂದಿಗೆ ಚಿ. ಗುರುದಾಸನು ಕುಳಿತಾಗ ಅವನೊಂದಿಗೆ ಮಕ್ಕಳಂತೆಯೇ ಮುಗ್ಧತೆಯಿಂದ ಮಾತನಾಡುತ್ತಿದ್ದರು.

೭. ಪೂ. ಮಾಮನವರು ಪಾದುಕೆಗಳ ಪೂಜೆಯನ್ನು ಮಾಡುವಾಗ ಇತರ ಸತ್ಸಂಗಗಳಲ್ಲಿ ಭಾವದ ಕ್ಷಣಗಳನ್ನು ಸ್ವತಃ ಅಂತರ್ಮನಸ್ಸಿನಿಂದ ಅರಿವು ಮಾಡುವುದು ಗಮನಕ್ಕೆ ಬರುತ್ತದೆ. ಆ ಸಮಯಗಳಲ್ಲಿ ಅವರ ಮುಖವನ್ನು ನೋಡಿ ಸಾಧಕರಿಗೆ ಭಾವಜಾಗೃತಿಯಾಗುತ್ತದೆ.

ಅನುಭೂತಿ

೧. ಕರ್ವೆಮಾಮಾನವರು ಕುಂಕುಮದ ಸೇವೆಯನ್ನು ಮಾಡುತ್ತಾರೆ. ಅವರು ಕುಳಿತಿರುವ ಸ್ಥಳದಲ್ಲಿ ನಮಗೆ ಸುಗಂಧದ ಪರಿಮಳವು ಬರುತ್ತದೆ ಮತ್ತು ಚೈತನ್ಯದ ಅರಿವಾಗುತ್ತದೆ.

೨. ಪೂ. ಮಾಮಾನವರು ಉಪಾಯ ಮಾಡುವಾಗ ನಮಗೂ ನಾಮಜಪದ ಅರಿವಾಗುತ್ತಿರುತ್ತದೆ.

೩. ಪೂ. ಮಾಮಾನವರ ಕೋಣೆಯಲ್ಲಿ ಸ್ವಚ್ಛತೆಯನ್ನು ಮಾಡಲು ಹೋದಾಗ ಅಲ್ಲಿ ಸುಗಂಧ ಬರುತ್ತದೆ ಮತ್ತು ಕೋಣೆಯಲ್ಲಿ ಶಾಂತವೆನಿಸುತ್ತದೆ. ಅವರ ಕೋಣೆಯಲ್ಲಿ ಪ.ಪೂ. ಗುರುದೇವರ ಛಾಯಾಚಿತ್ರವಿದೆ. ಅದನ್ನು ನೋಡಿದರೆ ಇಲ್ಲಿ ಪ್ರತ್ಯಕ್ಷ ಗುರುದೇವರೇ ಇದ್ದಾರೆ, ಎಂಬ ಭಾವವು ನಿರ್ಮಾಣವಾಗುತ್ತದೆ.

೪. ಕೋಣೆ ಸ್ವಚ್ಛತೆಯ ಸಂದರ್ಭದಲ್ಲಿ ನಮ್ಮಿಂದ ತಪ್ಪುಗಳಾಗುತ್ತಿದ್ದವು ಅದನ್ನು ಪೂ. ಮಾಮಾನವರು ನಮ್ರತೆಯಿಂದ ಹೇಳುತ್ತಾರೆ. ಆಗ ನಮಗೆ ಆ ತಪ್ಪಿನಿಂದ ಏನು ಕಲಿಯುಲು ಸಿಕ್ಕಿತು, ಎಂಬ ವಿಚಾರ ಬರುತ್ತದೆ. ಮರುದಿನ ಆ ಕೃತಿಯನ್ನು ಮಾಡುವಾಗ ತಪ್ಪನ್ನು ಸರಿಪಡಿಸಿ ಯೋಗ್ಯ ಕೃತಿಯನ್ನು ಮಾಡುವ ವಿಚಾರ ಬರುತ್ತದೆ.

೫. ಪೂ. ಮಾಮನವರನ್ನು ನೋಡುವಾಗ ಆನಂದವೆನಿಸುತ್ತದೆ.

(ಅಲ್ಲದೇ ಪೂಜ್ಯ ಮಾಮವರೊಂದಿಗಿರುವ ಅವಕಾಶ ಸಿಕ್ಕಿದ್ದಕ್ಕಾಗಿ ಗುರುದೇವರ ಚರಣಗಳಲ್ಲಿ ಹಾಗೂ ಪೂಜನೀಯ ಮಾಮನವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು)

೬. ಮುಖದ ಮೇಲೆ ಭಾವಾವಸ್ಥೆಯ ಅರಿವಾಗುವುದು : ‘ಪೂ. ಕರ್ವೆ ಮಾಮಾರವರ ಮುಖದ ಮೇಲೆ ಭಾವಾವಸ್ಥೆಯ ಅರಿವಾಗುತ್ತದೆ. ‘ಅವರು ಗುರುದೇವರ ಅನುಸಂಧಾನದಲ್ಲಿದ್ದು ಸತತ ನಾಮಜಪವನ್ನು ಮಾಡುತ್ತಿದ್ದಾರೆ, ಎಂದು ನನಗೆ ಅನಿಸುತ್ತದೆ. ಅವರ ಮುಖದ ಮೇಲೆ ಚಿಕ್ಕ ಮಕ್ಕಳಂತೆ ಮಂದಹಾಸ ಇರುತ್ತದೆ, ಹಾಗೆಯೇ ಚೈತನ್ಯದ ಅರಿವಾಗುತ್ತದೆ. ನಾನು ಅವರೆಡೆಗೆ ನೋಡಿದಾಗ ನನಗೆ ಚೈತನ್ಯ ದೊರಕಿದ ಅರಿವಾಗುತ್ತದೆ. ಆಗ ನನ್ನ ಮನಸ್ಸಿನಲ್ಲಿರುವ ಅನಾವಶ್ಯಕ ವಿಚಾರಗಳ ಪ್ರಮಾಣಗಳು ಕಡಿಮೆಯಾಗುತ್ತವೆ ಮತ್ತು ನನ್ನ ಭಾವಜಾಗೃತಿಯಾಗುತ್ತದೆ.

ಹೇ ಗುರುದೇವಾ, ನಿಮ್ಮ ಕೃಪೆಯಿಂದಾಗಿ ನಮಗೆ ಪೂ. ಕರ್ವೆಮಾಮನವರ ಸಹವಾಸದಲ್ಲಿರುವ ಅವಕಾಶವನ್ನು ನೀಡಿರುವುದರಿಂದ ತಮ್ಮ ಚರಣಗಳಲ್ಲಿ ಮತ್ತು ಪೂಜನೀಯ ಕರ್ವೆಮಾಮಾನವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು. – ಪೂ. ಸಂತರ ಬಗ್ಗೆ ಬರೆಯುವ ಅರ್ಹತೆಯಿರದಿದ್ದರೂ ಅವಕಾಶವನ್ನು ನೀಡಿದ ಬಗ್ಗೆ ಅವರ ಚರಣಗಳಿಗೆ ಮತ್ತು ಭಗವಾನ ಶ್ರೀ ಕೃಷ್ಣನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. – ಕು. ಪ್ರಿಯಾಂಕಾ ಹಿರೇಮಠ, ಮಂಗಳೂರು

ಶ್ರೀ. ಆನಂದ ಗೌಡ, ಮಂಗಳೂರು

ನಾನು ೨೯.೮.೨೦೨೦ ರಂದು ಊರಿನಿಂದ ಮಂಗಳೂರು ಸೇವಾಕೇಂದ್ರಕ್ಕೆ ಬಂದ ದಿನವೇ ಪೂಜ್ಯ ಮಾಮಾನವರೂ ಆಶ್ರಮಕ್ಕೆ ಬಂದಿದ್ದರು. ಕೊರೋನಾ ದೃಷ್ಟಿಯಿಂದ ನಮ್ಮಿಬ್ಬರಿಗೂ ೧೧ ದಿನ ಕ್ವಾರಂಟೈನ್ ಇತ್ತು. ಈ ೧೧ ದಿನಗಳು ಗುರುಕೃಪೆಯಿಂದ ಪೂ. ಮಾಮಾರವರ ಕೋಣೆಯಲ್ಲಿ ನನಗೆ ಅವರಿಂದ ಕಲಿಯಲು ಸಿಕ್ಕಿತು. ಕ್ವಾರಂಟೈನ್ ಅಂದರೆ ಒಬ್ಬಂಟಿ ಇರುವ ಅನುಭವ (ಸಾಮಾನ್ಯವಾಗಿ) ಇರುತ್ತದೆ. ಆದರೆ ಸಂತರ ಚೈತನ್ಯದಿಂದ ನನಗೆ ಹನ್ನೊಂದು ದಿನಗಳು ಹೇಗೆ ಕಳೆದು ಹೋದವು ಎಂಬುವುದೇ ತಿಳಿಯಲಿಲ್ಲ.

೧. ಇತರರ ವಿಚಾರ ಮಾಡುವುದು

ಅ. ನನಗೆ ಜಿಲ್ಲೆಯ ಜವಾಬ್ದಾರಿಯಿರುವುದರಿಂದ ದಿನ ವಿಡೀ ದೂರವಾಣಿ ಕರೆಗಳಲ್ಲೇ ಸೇವೆ ಇರುತ್ತಿತ್ತು. ಇದರಿಂದ ಪೂಜ್ಯ ಮಾಮಾ ಅವರಿಗೆ ಸ್ವಲ್ಪವೂ ತನಗೆ ಅಡಚಣೆ ಆಗುತ್ತಿದೆ ಎಂಬ ವಿಚಾರವೇ ಬರಲಿಲ್ಲ. ತದ್ವಿರುದ್ಧ ನನಗೆ ಸೇವೆಯಲ್ಲಿ ಅಡಚಣೆಯಾಗಬಹುದೆಂದು ನಾನು ದೂರವಾಣಿಯಲ್ಲಿ ಇದ್ದಾಗ ಅವರಿಗೆ ಕರೆ ಬಂದರೆ ಅವರು ಸ್ನಾನಗೃಹಕ್ಕೆ ಹೋಗಿ ಮಾತನಾಡುತ್ತಿದ್ದರು. ಇದರಿಂದ ಸಂತರಲ್ಲಿ ಎಷ್ಟು ನಮ್ರತೆ ಇರುತ್ತದೆ ಎಂದು ಕಲಿಯಲು ಸಿಕ್ಕಿತು.

ಆ. ನನಗೆ ಸಂಚಾರವಾಣಿ ಚಾರ್ಜಿಂಗ್ ಕಡಿಮೆ ಇತ್ತೆಂದು ಚಾರ್ಜಿಂಗ್‌ಗೆ ಇಟ್ಟು ಸಂಚಾರಿವಾಣಿಯಲ್ಲಿ ಮಾತನಾಡುವಾಗ ನನಗೆ ಸಂಚಾರವಾಣಿ ಇಡಲು ಅಡಚಣೆಯಾಗಬಾರದೆಂದು ತಮ್ಮ ಸ್ಟೂಲ್‌ನ್ನು ಸಂಚಾರವಾಣಿ ಇಡಲು ಕೊಟ್ಟರು. ಅದರ ಎತ್ತರ ಕೂಡ ಕಡಿಮೆ ಆದಾಗ ತಮ್ಮ ಸೂಟಕೇಸ್ ಕೊಟ್ಟು ಅದರ ಮೇಲೆ ಇಡಲು ಹೇಳಿದರು. ಆಗ ನನಗೆ ಸಂಚಾರವಾಣಿ ಇಡಲು ಅನುಕೂಲವಾಯಿತು. ಪೂಜ್ಯ ಮಾಮಾ ಸತತ ಇತರರ ಬಗ್ಗೆ ವಿಚಾರ ಮಾಡುತ್ತಾರೆ ಎಂದು ಪ್ರತ್ಯಕ್ಷ ಅನುಭವಿಸಲು ಸಾಧ್ಯವಾಯಿತು.

೨. ಧ್ಯೇಯ ಇಟ್ಟು ಸೇವೆ ಮಾಡುವುದು

ಪೂ. ಮಾಮಾ ಕುಂಕುಮ ಸೇವೆ ಮಾಡುತ್ತಾರೆ. ಆಗ ಅವರು ಬೆಳಗ್ಗೆ ೯.೩೦ ರಿಂದ ೧೨.೩೦ ಕ್ಕೆ ಇಷ್ಟು ಕುಂಕುಮ ಸೇವೆಯಾಗಬೇಕೆಂದು ಗುರಿ ಇಟ್ಟುಕೊಂಡು ಸೇವೆ ಮಾಡುತ್ತಿದ್ದರು. ಎದುರಿಗೆ ಗಂಟೆ ನೋಡಲು ‘ವಾಚ್ ಇಟ್ಟುಕೊಳ್ಳುತ್ತಿದ್ದರು. ಸಂತ ಸಹವಾಸವನ್ನು ಕರುಣಿಸಿದ್ದಕ್ಕೆ ಗುರುಚರಣಗಳಲ್ಲಿ ಕೃತಜ್ಞತೆ ಅರ್ಪಿಸುತ್ತೇನೆ.  – ಶ್ರೀ. ಆನಂದ ಗೌಡ, ಮಂಗಳೂರು