
ಉತ್ತರ 24 ಪರಗಣ (ಬಂಗಾಳ) – ಇಲ್ಲಿನ ಬಾಂಗ್ಲಾದೇಶ ಗಡಿಯಲ್ಲಿರುವ ಹಕೀಂಪುರ ಚೆಕ್‌ಪೋಸ್ಟ್‌ಗೆ ಪ್ರತಿದಿನ 200 ರಿಂದ 300 ಬಾಂಗ್ಲಾದೇಶಿ ವಲಸಿಗರು ಮರಳಿ ಬಾಂಗ್ಲಾದೇಶಕ್ಕೆ ಹೋಗಲು ತಲುಪುತ್ತಿದ್ದಾರೆ. ಇವರನ್ನು ನೇರವಾಗಿ ಗಡಿಯಾಚೆಗೆ ಕಳುಹಿಸುವ ಬದಲು, ಗಡಿ ಭದ್ರತಾ ಪಡೆ (ಬಿಎಸ್ಎಫ್) ಇವರ ಬಯೋಮೆಟ್ರಿಕ್ ಮತ್ತು ಇತರ ಗುರುತಿನ ಚೀಟಿಗಳನ್ನು ಪಡೆದುಕೊಂಡು ಬಂಗಾಳದಲ್ಲಿ ನಿರ್ಮಿಸಲಾದ ತಾತ್ಕಾಲಿಕ ಆಶ್ರಯ ತಾಣಗಳಲ್ಲಿರಿಸುತ್ತಿದೆ. ಅನೇಕ ಜನರ ಬಳಿ ಭಾರತೀಯ ದಾಖಲೆಗಳಿವೆ; ಆದರೆ ಬಾಂಗ್ಲಾದೇಶದ ಗುರುತಿನ ಚೀಟಿಗಳಿಲ್ಲ.
ಬಾಂಗ್ಲಾದೇಶಿ ವಲಸಿಗರು ಮೊದಲ ಬಾರಿಗೆ ಸ್ವತಃ ಗುರುತು ಪರಿಶೀಲನೆಗಾಗಿ ಬರುತ್ತಿದ್ದಾರೆ!
ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿ, “ಅಕ್ರಮ ವಲಸಿಗರನ್ನು ಹುಡುಕುವ ಅಗತ್ಯವಿಲ್ಲದ ಇಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಇದೇ ಮೊದಲ ಬಾರಿಯಾಗಿದೆ. ಜನರು ಸ್ವತಃ ಪರಿಶೀಲನೆ ನಡೆಸಲು ಮತ್ತು ಗುರುತನ್ನು ನೋಂದಾಯಿಸಲು ಚೆಕ್‌ಪೋಸ್ಟ್‌ಗೆ ಬರುತ್ತಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ಜನರ ದೊಡ್ಡ ಸರತಿ ಸಾಲುಗಳು ಕಂಡುಬರುತ್ತಿದ್ದು, ಪರಿಶೀಲನೆಗೆ ಸಾಕಷ್ಟು ಸಮಯ ಹಿಡಿಯುತ್ತಿದೆ,” ಎಂದು ತಿಳಿಸಿದ್ದಾರೆ.
ಸ್ಥಳೀಯ ಸಂಘಟನೆ ‘ಭುಕಾ ಮಾನುಷೇರ್ ಅಧಿಕಾರ್ ಅಭಿಯಾನ’ದ ಅಧ್ಯಕ್ಷ ಮೋಹರ್ ಮಂಡಲ್ ಅವರ ಪ್ರಕಾರ, ಪರಿಶೀಲನೆಗಾಗಿ ಬಂದಿರುವ ಬಹುತೇಕ ಜನರು ಬಾಂಗ್ಲಾದೇಶದ 6 ಜಿಲ್ಲೆಗಳಿಗೆ ಸೇರಿದವರಾಗಿದ್ದು, ಇವರು ಕಾನೂನುಬಾಹಿರವಾಗಿ ಭಾರತಕ್ಕೆ ಬಂದಿದ್ದರು.
ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಬಂಗಾಳದಲ್ಲಿ 11 ಆಶ್ರಯ ತಾಣಗಳನ್ನು ನಿರ್ಮಿಸಲಾಗಿದೆ.
ರಾಜ್ಯ ಸರಕಾರದ ಪ್ರಕಾರ, ಈ 11 ಕೇಂದ್ರಗಳಲ್ಲಿ ಸದ್ಯಕ್ಕೆ ಸಾವಿರಕ್ಕಿಂತ ಕಡಿಮೆ ಜನರಿದ್ದಾರೆ. ಅಲ್ಲಿ ಆಹಾರ, ವೈದ್ಯರು ಮತ್ತು ಮಕ್ಕಳಿಗಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಬಾಂಗ್ಲಾದೇಶದಿಂದ ಜಾಗರೂಕತೆ ಹೆಚ್ಚಳ, ಗಡಿಯೊಳಗೆ ಬರದಂತೆ ತಡೆ
‘ಬಾಂಗ್ಲಾದೇಶ ಬಾರ್ಡರ್ ಗಾರ್ಡ್’ (ಬಿಜಿಬಿ), ಭಾರತದ ಗಡಿ ಭದ್ರತಾ ಪಡೆಯು ಅಕ್ರಮ ವಲಸಿಗರನ್ನು ತಮ್ಮ ದೇಶದ ಗಡಿಯೊಳಗೆ ತಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಕಳೆದ 24 ಗಂಟೆಗಳಲ್ಲಿ ಇಂತಹ 10 ಪ್ರಯತ್ನಗಳನ್ನು ತಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೇ 29 ರಂದು ಬಂಗಾಳದ ಸಂಸ್ಥೆಗಳು 386 ಶಂಕಿತ ಅಕ್ರಮ ವಲಸಿಗರನ್ನು ವಶಕ್ಕೆ ಪಡೆದಿರುವ ಸುದ್ದಿಯ ನಂತರ, ಬಾಂಗ್ಲಾದೇಶವು ಗಡಿಯಲ್ಲಿ ಗಸ್ತು ಮತ್ತು ಸೈನಿಕರ ಸಂಖ್ಯೆಯನ್ನು ಸಹ ಹೆಚ್ಚಿಸಿದೆ.
Singapore Blocks Anti-India Content: ಭಾರತೀಯರನ್ನು ಅಪಖ್ಯಾತಿಗೊಳಿಸುವ ಚೀನಿ ನಾಗರಿಕರ ಆನ್ ಲೈನ್ ಅಭಿಯಾನವನ್ನು ಬಯಲಿಗೆಳೆದ ಸಿಂಗಾಪುರ ಸರಕಾರ
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ