ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ

ಒಬ್ಬ ಮುಸ್ಲಿಂ ವಿದ್ಯಾರ್ಥಿಯ ತಾಯಿಯ ಬಂಧನ

ಕೃಷ್ಣೈನ ಹಬ್ರಾಘಾಟ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.

ಗೌಹಟಿ (ಅಸ್ಸಾಂ) – ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಶಾಲೆಯೊಂದರಲ್ಲಿ 9ನೇ ತರಗತಿಯ 5 ಮುಸ್ಲಿಂ ವಿದ್ಯಾರ್ಥಿಗಳು ಗೋಮಾಂಸ ತಂದು ಇಬ್ಬರು ಹಿಂದೂ ವಿದ್ಯಾರ್ಥಿಗಳಿಗೆ ಆ ಮಾಂಸವನ್ನು ಬಲವಂತವಾಗಿ ತಿನ್ನಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಪೊಲೀಸರಲ್ಲಿ ದೂರು ದಾಖಲಿಸಲಾಗಿದೆ. ಈ ಘಟನೆಯು ಕೃಷ್ಣೈನ ಹಬ್ರಘಾಟ್ ಉನ್ನತ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ. ಪೊಲೀಸರು ಒಬ್ಬ ವಿದ್ಯಾರ್ಥಿಯ ತಾಯಿ ನೂರ್ ಸಾಹಿದಾ ಬೇಗಂ ಅವರನ್ನು ಬಂಧಿಸಿದ್ದಾರೆ. 2011ರ ಜನಗಣತಿಯ ಪ್ರಕಾರ ಇಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 57 ಮತ್ತು ಹಿಂದೂಗಳ ಜನಸಂಖ್ಯೆ ಶೇ 34 ರಷ್ಟಿದೆ.

ಮುಸ್ಲಿಂ ವಿದ್ಯಾರ್ಥಿಗಳು ಚಮಚದಲ್ಲಿ ಗೋಮಾಂಸದ ತುಂಡುಗಳನ್ನು ತೆಗೆದುಕೊಂಡು ಅದನ್ನು ಹಿಂದೂ ವಿದ್ಯಾರ್ಥಿಗಳ ಬಾಯಿಯ ಹತ್ತಿರ ಕೊಂಡೊಯ್ದು ಬಲವಂತವಾಗಿ ತಿನ್ನಿಸಲು ಪ್ರಯತ್ನಿಸಿದರು; ಆದರೆ ಅದು ಏನು ಎಂಬುದು ಹಿಂದೂ ವಿದ್ಯಾರ್ಥಿಗಳಿಗೆ ತಿಳಿದಿತ್ತು. ಆದ್ದರಿಂದ ಅವರು ಚಮಚವನ್ನು ತಳ್ಳಿಹಾಕಿದರು ಮತ್ತು ಗೋಮಾಂಸ ನೆಲದ ಮೇಲೆ ಬಿದ್ದಿತು. ವಿದ್ಯಾರ್ಥಿಗಳು ಆ ಮಾಂಸವನ್ನು ಕಾಲಿನಿಂದ ತುಳಿದು ಅಲ್ಲಿಂದ ಹೊರಟುಹೋದರು.

ಶಾಲಾ ಆಡಳಿತ ಮಂಡಳಿಯಿಂದ ಮಕ್ಕಳಿಗೆ ಶಾಂತರಾಗಿರಲು ಮನವಿ

ಹಿಂದೂ ವಿದ್ಯಾರ್ಥಿಗಳು ಶಿಕ್ಷಕರಿಗೆ ಈ ವಿಷಯ ತಿಳಿಸಿದಾಗ ಈ ಘಟನೆ ಬೆಳಕಿಗೆ ಬಂದಿತು; ಆದರೆ ಶಾಲಾ ಆಡಳಿತ ಮಂಡಳಿಯು ಈ ಘಟನೆಯನ್ನು ಮುಚ್ಚಿಹಾಕಲು ಯತ್ನಿಸಿತು ಮತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಯಾರೊಂದಿಗೂ ಮಾತನಾಡಬೇಡಿ ಎಂದು ಸೂಚಿಸಿತು. (ಮತಾಂಧ ಮುಸ್ಲಿಮರ ವಿಷಯದಲ್ಲಿ ಇಂತಹ ಮಣಿಯುವ ನಿಲುವಿನಿಂದಾಗಿಯೇ ಅವರ ಉದ್ಧಟತನ ಇನ್ನಷ್ಟು ಹೆಚ್ಚಾಗುತ್ತದೆ! – ಸಂಪಾದಕರು) ಸಂತ್ರಸ್ತ ವಿದ್ಯಾರ್ಥಿಗಳು ಮನೆಗೆ ತಲುಪಿ ತಮ್ಮ ಕುಟುಂಬದವರಿಗೆ ಸಂಪೂರ್ಣ ಮಾಹಿತಿ ನೀಡಿದಾಗ ಈ ಘಟನೆ ಎಲ್ಲರ ಮುಂದೆ ಬಂದಿತು. ಇದರ ನಂತರ ಆಕ್ರೋಶಗೊಂಡ ಪೋಷಕರು ಮತ್ತು ಸ್ಥಳೀಯ ಜನರು ಶಾಲೆಗೆ ತಲುಪಿ ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದರು.

ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ತಿಳಿಹೇಳಿ, ಅವರು ಇಂತಹ ಕೃತ್ಯವನ್ನು ಮತ್ತೊಮ್ಮೆ ಮಾಡುವುದಿಲ್ಲ ಎಂದು ಅವರಿಂದ ಲಿಖಿತ ಭರವಸೆ ಪಡೆದುಕೊಂಡಿದ್ದು, ಪ್ರಕರಣ ದೊಡ್ಡದಾಗದಿರಲಿ ಎಂದು ಮೊದಲ ತಪ್ಪು ಎಂದು ಭಾವಿಸಿ ಅವರಿಗೆ ಕ್ಷಮೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ವಿದ್ಯಾರ್ಥಿಗಳು ಕೇವಲ ಶಾಖಾಹಾರಿ ಭೋಜನವನ್ನೇ ತರಬೇಕು! – ಜಿಲ್ಲಾಧಿಕಾರಿಗಳ ಸೂಚನೆ

ಗೋಲ್ಪಾರಾದ ಜಿಲ್ಲಾಧಿಕಾರಿ ಪ್ರದೀಪ್ ತಿಮುಂಗ್ ಮತ್ತು ಪೊಲೀಸ್ ಅಧೀಕ್ಷಕ ನಬನೀತ್ ಮಹಂತಾ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ಪರಿಶೀಲನೆ ನಡೆಸಲು ಶಾಲೆಗೆ ಭೇಟಿ ನೀಡಿದರು. ವಿದ್ಯಾರ್ಥಿಗಳು ಶಾಖಾಹಾರಿ ಭೋಜನವನ್ನು ತರಬೇಕು, ಅದರಲ್ಲಿ ಮೊಟ್ಟೆ ಇರಬಹುದು; ಆದರೆ ಬೇರೆ ಯಾವುದೇ ಮಾಂಸಾಹಾರಿ ಪದಾರ್ಥಗಳನ್ನು ತರಬಾರದು ಎಂದು ಜಿಲ್ಲಾಧಿಕಾರಿಗಳು ಶಾಲೆಗಳಿಗೆ ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಮುಸ್ಲಿಂ ಮಕ್ಕಳಲ್ಲಿ ಇಂತಹ ಧೈರ್ಯ ಬರುತ್ತದೆ ಎಂದರೆ ಅವರಿಗೆ ಹಾಗೆಯೇ ಕಲಿಸಲಾಗುತ್ತಿದೆ ಎಂದರ್ಥ. ಇವರೇ ಮುಂದೆ ದೊಡ್ಡವರಾಗಿ ಜಿಹಾದ್ ಮಾಡುತ್ತಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ! ಇಂತಹ ಘಟನೆಗಳ ಬಗ್ಗೆ ಜಾತ್ಯತೀತವಾದಿಗಳು, ಪ್ರಗತಿ(ಅಧೋಗತಿ)ಪರರು ಎಂದು ಕರೆದುಕೊಳ್ಳುವವರು ಬಾಯಿ ಬಿಡುವುದಿಲ್ಲ ಎಂಬುದನ್ನು ಗಮನಿಸಿ!