ಆಹಾರ ಮತ್ತು ಆಚಾರ ಇವುಗಳ ಕುರಿತು ಅದ್ವಿತೀಯ ಸಂಶೋಧನೆ ಮಾಡುವ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ
ಭಾರತೀಯ ಖಾದ್ಯಸಂಸ್ಕೃತಿಯಲ್ಲಿ ಸಕ್ಕರೆಗೆ ಅಸಾಧಾರಣ ಮಹತ್ವವನ್ನು ನೀಡಲಾಗಿದೆ. ಹಿಂದಿನ ಕಾಲದಲ್ಲಿ ಸಕ್ಕರೆ ತಯಾರಿಸಲು ಉಪಯೋಗಿಸುತ್ತಿದ್ದ ಪದ್ಧತಿ ಮತ್ತು ಈಗಿರುವ ಪದ್ಧತಿಯಲ್ಲಿ ತುಂಬಾ ವ್ಯತ್ಯಾಸವಿದೆ. ತದ್ವಿರುದ್ಧ ಬೆಲ್ಲವನ್ನು ಬಹಳ ಹಿಂದಿನ ಕಾಲದಿಂದಲೂ ಭಾರತೀಯರು ಉಪಯೋಗಿಸುತ್ತಿದ್ದಾರೆ; ಆದರೆ ಬೆಲ್ಲವನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಯಾಗಿದೆ. ‘ಮಾನವನು ಆಧುನಿಕ ಜೀವನಪದ್ಧತಿಯ ಹೆಸರಿನಲ್ಲಿ ತನಗೆ ಎಷ್ಟು ಹಾನಿ ಮಾಡಿಕೊಂಡಿದ್ದಾನೆ, ಎಂಬುದು ನಿಮಗೆ ಮುಂದೆ ನೀಡಿರುವ ತುಲನಾತ್ಮಕ ಅಧ್ಯಯನದಿಂದ ಅರಿವಾಗಬಹುದು.
೧. ಸಕ್ಕರೆಯ ತಯಾರಿಕೆ ಪ್ರಕ್ರಿಯೆ ಮತ್ತು ಅದರ ದುಷ್ಪರಿಣಾಮ
‘ಹಿಂದಿನ ಕಾಲದಲ್ಲಿ ಸಕ್ಕರೆಯನ್ನು ತಯಾರಿಸಲು ಕಬ್ಬಿನ ರಸವನ್ನು ತೆಗೆದು ಅದನ್ನು ಮಣ್ಣಿನ ಪಾತ್ರೆಯಲ್ಲಿ ತುಂಬಿಸಿ ಬಿಸಿಲಿನಲ್ಲಿ ಒಣಗಿಸಲಾಗುತ್ತಿತ್ತು ಹಾಗೂ ಅದರಲ್ಲಿನ ನೀರಿನ ಅಂಶವನ್ನು ತೆಗೆಯಲಾಗುತಿತ್ತು. ಇಂದು ಸಕ್ಕರೆಯ ಶುದ್ಧೀಕರಣದ ಹೆಸರಿನಲ್ಲಿ ಅನೇಕ ಪ್ರಕ್ರಿಯೆಗಳನ್ನು ಮಾಡಿ ಅದರಲ್ಲಿ ರಾಸಾಯನಿಕಗಳನ್ನು ಉಪಯೋಗಿಸಿ ಅದರಲ್ಲಿರುವ ಜೀವನಸತ್ವಗಳನ್ನು ವರ್ಜಿಸಲಾಗುತ್ತದೆ ಮತ್ತು ಸಕ್ಕರೆಯಲ್ಲಿ ಕೇವಲ ‘ಸುಕ್ರೋಸ್ (Sucrose) ಎಂಬ ಹೆಸರಿನ ಘಟಕವನ್ನು ಇಡಲಾಗುತ್ತದೆ. ಅದರಿಂದಾಗಿ ಸಕ್ಕರೆಯು ಹೆಚ್ಚು ಹಾನಿಕರ ವಾಗುತ್ತದೆ.
ಅ. ನಾವು ಪೇಟೆಯಿಂದ ತರುವ ಸಕ್ಕರೆಯು ನೈಸರ್ಗಿಕವಾಗಿರುವುದಿಲ್ಲ. ಸಕ್ಕರೆಯನ್ನು ತಯಾರಿಸುವಾಗ ಮುಖ್ಯವಾಗಿ ಕಬ್ಬಿನ ರಸಕ್ಕೆ ರಾಸಾಯನಿಕ ಪ್ರಕ್ರಿಯೆ ಮಾಡಲಾಗುತ್ತದೆ. ಅದರಲ್ಲಿ ‘ಸಲ್ಫರ್ ಡೈಆಕ್ಸೈಡ್, ‘ಫಾಸ್ಫೋರಿಕ್ ಆಸಿಡ್, ‘ಕ್ಯಾಲ್ಶಿಯಮ್ ಹೈಡ್ರಾಕ್ಸೈಡ್ ಮತ್ತು ‘ಆಕ್ಟಿವೇಟೆಡ್ ಕಾರ್ಬನ್ ಈ ರಾಸಾಯನಿಕಗಳನ್ನು ಉಪಯೋಗಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಸಕ್ಕರೆಯ ಇತರ ಘಟಕದ್ರವ್ಯಗಳನ್ನು ತೆಗೆದು ‘ಸುಕ್ರೋಸ್ ಹೆಸರಿನ ಸಕ್ಕರೆಯ ಅಂಶವನ್ನು ಮಾತ್ರ ಇಡಲಾಗುತ್ತದೆ.
ಆ. ಇಂತಹ ಸ್ವರೂಪದ ಸಕ್ಕರೆಯು ಮಾನವನ ಆರೋಗ್ಯಕ್ಕೆ ಹಾನಿಕರವಾಗಿರುತ್ತದೆ. ಅದನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಿದರೆ ಬೊಜ್ಜು ಬರುವುದು, ಹೃದ್ರೋಗಗಳಂತಹ ಕಾಯಿಲೆಗಳು ಬರಬಹುದು.
ಇ. ಸಕ್ಕರೆಯಲ್ಲಿರುವ ‘ಸುಕ್ರೋಸ್ ಈ ಘಟಕವು ಶರೀರಕ್ಕೆ ತುಂಬಾ ಹಾನಿಯನ್ನುಂಟು ಮಾಡುತ್ತದೆ. ಈ ಘಟಕವು ಶರೀರದೊಳಗೆ ಹೋದಾಗ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವು ಅನಿರೀಕ್ಷಿತವಾಗಿ ಹೆಚ್ಚಾಗುತ್ತದೆ. ಆದ್ದರಿಂದ ಮಧುಮೇಹದ ತೊಂದರೆ ಇರುವವರು ಈ ಸಕ್ಕರೆಯನ್ನು ವರ್ಜಿಸಬೇಕಾಗುತ್ತದೆ.
ಈ. ಸಕ್ಕರೆಯನ್ನು ತಯಾರಿಸಿದ ನಂತರವೂ ಸಕ್ಕರೆಯನ್ನು ಶುದ್ಧೀಕರಿಸಲು ಉಪಯೋಗಿಸುವ ವಿವಿಧ ರಾಸಾಯನಿಕಗಳು ಅಂಶರೂಪದಲ್ಲಿ ಸಕ್ಕರೆಯಲ್ಲಿರುತ್ತವೆ. ಅವುಗಳಿಂದ ಶರೀರದ ಮೇಲೆ ದುಷ್ಪರಿಣಾಮಗಳಾಗುತ್ತವೆ.
೨. ಸಕ್ಕರೆಯ ಕಾರ್ಖಾನೆಗಳ ವಿಷಯದಲ್ಲಿ ಬಂದಿರುವ ಅನುಭವ
೨೦೧೨ ರಿಂದ ೨೦೧೩ ಇಸವಿ ಈ ಅವಧಿಯಲ್ಲಿ ನಾನು ನನ್ನ ೧೧ ನೆಯ ಮತ್ತು ೧೨ ನೆಯ ತರಗತಿಯ ಶಿಕ್ಷಣಕ್ಕಾಗಿ ಕೊಲ್ಹಾಪುರದಲ್ಲಿ ವಾಸಿಸುತ್ತಿದ್ದೆನು. ಆಗ ನನಗೆ ರಜೆಯಲ್ಲಿ ಕೊಂಕಣಕ್ಕೆ ಬರಲು ಸುಮಾರು ೩ ಗಂಟೆ ಪ್ರವಾಸ ಮಾಡಬೇಕಾಗುತ್ತಿತ್ತು. ಈ ಪ್ರವಾಸದ ನಡುವೆ ಒಂದು ಸ್ಥಳದಲ್ಲಿ ಸಕ್ಕರೆಯ ಕಾರ್ಖಾನೆ ಇತ್ತು. ಅದು ತುಂಬಾ ಜನಸಂದಣಿ ಇರುವ ಪ್ರದೇಶವಾಗಿದ್ದ ಕಾರಣ ಬಸ್‌ನವರು ಕೂಡ ಅಲ್ಲಿ ನಿಯಮಿತವಾಗಿ ನಿಲ್ಲಿಸುತ್ತಿದ್ದರು; ಆದರೆ ನನ್ನ ಮನಸ್ಸಿನಲ್ಲಿ ಯಾವಾಗಲೂ ‘ಬಸ್ ಅಲ್ಲಿ ನಿಲ್ಲಿಸಬಾರದು ಎನ್ನುವ ವಿಚಾರ ಬರುತ್ತಿತ್ತು. ಆಗ ‘ನನಗೆ ಹಾಗೇಕೆ ಅನಿಸುತ್ತದೆ ?, ಎಂದು ನನ್ನ ಮನಸ್ಸಿನಲ್ಲಿ ಪ್ರಶ್ನೆ ಉತ್ಪನ್ನವಾಗುತ್ತಿತ್ತು. ‘ಕಾರ್ಖಾನೆಯಲ್ಲಿ ಉಪಯೋಗಿಸುವ ರಾಸಾಯನಿಗಳಿಂದ ಅಲ್ಲಿನ ವಾತಾವರಣದಲ್ಲಿ ನಕಾರಾತ್ಮಕತೆ ಸಂಗ್ರಹವಾಗಿರುತ್ತದೆ. ಆ ನಕಾರಾತ್ಮಕ ಸ್ಪಂದನಗಳಿಂದ ಸುತ್ತ ಮುತ್ತಲಿನ ವಾತಾವರಣದ ಮೇಲೆಯೂ ಪರಿಣಾಮವಾಗುತ್ತದೆ. ಆದ್ದರಿಂದ ‘ಆ ಪರಿಸರದಲ್ಲಿ ನಿಲ್ಲಬಾರದು, ಎಂದು ಅನಿಸುತ್ತದೆ, ಎಂಬುದು ಅದರ ಹಿಂದಿನ ಕಾರಣವಿರಬಹುದು.
೩. ಬೆಲ್ಲದ ತಯಾರಿ ಪ್ರಕ್ರಿಯೆ ಮತ್ತು ಬೆಲ್ಲದಿಂದಾಗುವ ಲಾಭಗಳು
ಅ. ಬೆಲ್ಲವನ್ನು ನೈಸರ್ಗಿಕ ಪದ್ಧತಿಯಿಂದ ತಯಾರಿಸಲಾಗುತ್ತದೆ. ಬೆಲ್ಲವನ್ನು ತಯಾರಿಸಲು ಕಬ್ಬಿನ ರಸವನ್ನು ಕುದಿಸಿ ಇಂಗಿಸ ಲಾಗುತ್ತದೆ ಮತ್ತು ಅದರಲ್ಲಿರುವ ನೀರಿನ ಅಂಶವನ್ನು ತೆಗೆಯಲಾಗುತ್ತದೆ. ಅದನ್ನು ತಣಿಸಿದಾಗ ನಮಗೆ ಸಿದ್ಧವಾದ ಬೆಲ್ಲ ಸಿಗುತ್ತದೆ. ಇತ್ತೀಚೆಗೆ ಬೆಲ್ಲ ತಯಾರಿಸುವ ಪ್ರಕ್ರಿಯೆಯಲ್ಲಿಯೂ ಬೆಲ್ಲದ ಬಣ್ಣ ಹೆಚ್ಚು ಗಾಢವಾಗಬಾರದೆಂದು, ಅದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ‘ಹೈಡ್ರೋಸಫ್ಫೈಡ್ ಈ ರಾಸಾಯನಿಕವನ್ನು ಉಪಯೋಗಿಸಲಾಗುತ್ತದೆ. ಸಾವಯವ (ಆರ್ಗಾನಿಕ್) ಬೆಲ್ಲವು (ಮಣ್ಣಿನ ಬಣ್ಣದ ಬೆಲ್ಲ) ಇದಕ್ಕೆ ಒಂದು ಉತ್ತಮವಾದ ಪರ್ಯಾಯವಾಗಿದೆ. ಸಾವಯವ ಬೆಲ್ಲವನ್ನು ಗುರುತಿಸುವುದು ಸಹ ಸುಲಭವಿರುತ್ತದೆ. ರಾಸಾಯನಿಕ ಬೆಲ್ಲಕ್ಕಿಂತ ಅದರ ಬಣ್ಣವು ಗಾಢವಾಗಿರುತ್ತದೆ.
ಆ. ಬೆಲ್ಲದಲ್ಲಿ ಸಕ್ಕರೆಯ ಜೊತೆಗೆ ಇತರ ಪೋಷಕಾಂಶಗಳು ಕೂಡ ಇರುತ್ತವೆ. ಆದ್ದರಿಂದ ಬೆಲ್ಲವು ಆರೋಗ್ಯದಾಯಕವಾಗಿರುತ್ತದೆ.
ಇ. ಆಹಾರದ ಜೊತೆಗೆ ಬೆಲ್ಲವನ್ನು ಸೇವಿಸುವುದರಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ. ಬೆಲ್ಲವು ಜೀರ್ಣಶಕ್ತಿ ಹೆಚ್ಚಿಸುತ್ತದೆ.
ಈ. ಬೆಲ್ಲ ಶರೀರದಲ್ಲಿ ತಕ್ಷಣ ಮಿಶ್ರಣವಾಗುವುದಿಲ್ಲ. ಆದ್ದರಿಂದ ಮಧುಮೇಹ ಇರುವವರಿಗೆಲ್ಲ ಅದರಿಂದ ಉಪಕಾರವಾಗಬಹುದು; ಆದರೆ ಅದರಲ್ಲಿಯೂ ಸಕ್ಕರೆ ಇರುವುದರಿಂದ ಅದನ್ನು ಮಿತ ವಾಗಿ ಸೇವಿಸುವುದು ಅಪೇಕ್ಷಿತವಿದೆ.
೪. ಸಕ್ಕರೆ ಮತ್ತು ಬೆಲ್ಲವನ್ನು ಹಾಕಿ ಗೋದಿಯ ಪಾಯಸ ಮಾಡುವಾಗ ಅರಿವಾದ ವ್ಯತ್ಯಾಸ
– ಶ್ರೀ. ಋತ್ವಿಜ ಢವಣ (‘ಹೊಟೇಲ್ ಮೆನೇಜ್‌ಮೆಂಟ್’ ಕಲಿತಿರುವ ಮಾಜಿ ವಿದ್ಯಾರ್ಥಿ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ರಾಮನಾಥಿ, ಗೋವಾ. (೨೫.೯.೨೦೨೦)