ಬೇಸಿಗೆಯಲ್ಲಿ ಈ ಮುಂದಿನಂತೆ ಆರೋಗ್ಯವನ್ನು ಕಾಪಾಡಿಕೊಳ್ಳಿ !
ಮಾವಿನ ಹಣ್ಣಿನ ಸಿಹಿ ಪಾನಕ, ಲಿಂಬು ಶರಬತ್, ಜೀರಿಗೆಯ ಕಷಾಯ, ಎಳನೀರು, ಹಣ್ಣುಗಳ ರಸ, ಹಾಲು ಹಾಕಿ ಮಾಡಿದ ಅಕ್ಕಿಯ ಪಾಯಸ, ಗುಲ್ಕಂದ ಇತ್ಯಾದಿ ತಂಪು ಹಾಗೂ ದ್ರವ ಪದಾರ್ಥಗಳಲ್ಲಿ ಇವುಗಳಲ್ಲಿ ಯಾವುದು ಸಾಧ್ಯವಿದೆಯೋ ಅಥವಾ ದೊರಕಿದೆಯೋ, ಆ ಆಹಾರವನ್ನು ಉಪಯೋಗಿಸಬೇಕು. ಇದರಿಂದ ಸೂರ್ಯನ ಪ್ರಖರ ಉಷ್ಣತೆಯಿಂದ ಶರೀರವನ್ನು ರಕ್ಷಿಸಿಕೊಳ್ಳಲು ಸಹಾಯವಾಗುತ್ತದೆ.