ವಿಶಾಖಾಪಟ್ಟಣಂದಲ್ಲಿ ವಿಷಾನಿಲ ಸೋರಿಕೆ ಪ್ರಕರಣ

ಒಂದೆಡೆ ದೇಶ ಕೊರೋನಾ ರೋಗಾಣುದೊಂದಿಗೆ ಹೋರಾಡುತ್ತಿರುವಾಗ ‘ಭೋಪಾಲ್ ಅನಿಲ ದುರಂತ’ವನ್ನು ನೆನಪಿಸುವ ಗಂಭೀರ ಘಟನೆ ವಿಶಾಖಾಪಟ್ಟಣಮ್‌ದಲ್ಲಿ ಘಟಿಸಿದೆ. ಅಲ್ಲಿ ೧೧ ಜನರು ಮೃತಪಟ್ಟಿದ್ದು ಅನೇಕರ ಆರೋಗ್ಯದ ಸ್ಥಿತಿ ಗಂಭೀರವಾಗಿದೆ. ೧೯೮೪ ರಲ್ಲಿ ನಡೆದ ‘ಭೋಪಾಲ್ ಅನಿಲ ದುರಂತ’ದ ದೋಷಿಗಳಿಗೆ ಶಿಕ್ಷೆಯಾಗದ ಕಾರಣ ಅದರಲ್ಲಿ ಮೃತಪಟ್ಟ ೨೦ ಸಾವಿರ ಜನರಿಗೆ ಹಾಗೂ ಸ್ಥಳಾಂತಗೊಂಡಿದ್ದ ೫ ಲಕ್ಷ ಜನರಿಗೆ ಇದು ವರೆಗೂ ನಿಜವಾದ ನ್ಯಾಯ ದೊರಕಿಲ್ಲ. ಇದೇ ಪರಿಸ್ಥಿತಿ ಪುನಃ ಉದ್ಭವಿಸಬಾರದೆಂದು ಸರಕಾರವು ವಿಶಾಖಾಪಟ್ಟಣಮ್‌ದಲ್ಲಿ ದೋಷಿಗಳ ಮೇಲೆ ತಕ್ಷಣವೇ ಕಠಿಣ ಕ್ರಮಕೈಗೊಳ್ಳಬೇಕು. ಅದೇ ರೀತಿ ಇಂತಹ ಪರಿಸ್ಥಿತಿಯು ದೇಶದ ಇತರೆಡೆ ಉದ್ಭವಿಸಬಾರದೆಂದು ಘಾತಕ- ವಿಷಾನಿಲ ಬಳಸುವ ಯೋಜನೆಗಳನ್ನು ತಕ್ಷಣವೇ ಪರಿಶೀಲಿಸಿ ಅದರ ಸಮೀಕ್ಷೆ ನಡೆಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಹಾಗೂ ಕೇಂದ್ರ ಸರಕಾರಗಳ ಬಳಿ ಆಗ್ರಹಿಸಿದೆ.
ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ನೀಡಿದ ಪತ್ರಿಕಾಪ್ರಕಟಣೆಯಲ್ಲಿ ಮುಂದಿನಂತೆ ಹೇಳಿದ್ದಾರೆ

1. ಅನಿಲ ಸೋರಿಕೆಯಾಗಲು ಸಂಬಂಧಪಟ್ಟ ಕಂಪನಿಯಷ್ಟೇ ಅಲ್ಲದೇ ಅಲ್ಲಿ ಸುರಕ್ಷತೆಯನ್ನು ಕಠಿಣವಾಗಿ ಪಾಲಿಸದಿರುವ ಪರಿಸರ ಇಲಾಖೆ ಹಾಗೂ ಇತರ ಸಂಬಂಧಿತ ಸರಕಾರಿ ಇಲಾಖೆಗಳು ಜವಾಬ್ದಾರವಾಗಿವೆ. ಆದುದರಿಂದ ದೋಷಿ ಕಂಪನಿಗಳೊಂದಿಗೆ ಸರಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆಯೂ ಕಠಿಣ ಕ್ರಮಕೈಗೊಳ್ಳಬೇಕು.
2. ಪರಿಸರಕ್ಕೆ ಮಾರಕವಾಗಿರುವ ಘನತ್ಯಾಜ್ಯ, ಜೈವಿಕ ತ್ಯಾಜ್ಯ ಮತ್ತು ಅಕ್ರಮ ಕಸಾಯಿಖಾನೆ ಇವುಗಳ ಬಗ್ಗೆ ಪರಿಸರ ಇಲಾಖೆಗಳು ಅಕ್ಷಮ್ಯ ದುರ್ಲಕ್ಷ ಮಾಡುತ್ತಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ಅನೇಕ ಪ್ರಕರಣಗಳಲ್ಲಿ ಅನುಭವಿಸಿದೆ. ಇಂತಹ ಭ್ರಷ್ಟ ಹಾಗೂ ಕರ್ತವ್ಯಲೋಪ ಮಾಡುವ ಸರಕಾರಿ ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳಬೇಕು ಎಂಬುದಕ್ಕಾಗಿ ಸಮಿತಿಯು ‘ಸುರಾಜ್ಯ ಅಭಿಯಾನ’ದ ಅಂತರ್ಗತ ಕೆಲವೊಮ್ಮೆ ರಾಷ್ಟ್ರೀಯ ಹಸಿರು ಪ್ರಾಧಿಕರಣದೆದುರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿ ಕೆಲವೊಮ್ಮೆ ಸರಕಾರದ ಬಳಿ ದೂರು ನೀಡಿ ಇನ್ನು ಕೆಲವೊಮ್ಮೆ ಆಂದೋಲನ ಮಾಡಿ ಹೋರಾಡಿದೆ. ಸಮಿತಿಯ ಈ ‘ಸುರಾಜ್ಯ ಅಭಿಯಾನ’ದಲ್ಲಿ ಜನರು ಪಾಲ್ಗೊಳ್ಳಬೇಕು, ಎಂದು ಸಮಿತಿಯು ಈ ನಿಮಿತ್ತ ಪುನಃ ಕರೆ ನೀಡುತ್ತಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ