ಕಾಂಗ್ರೆಸ್ ನಾಯಕರ ನಿಜ ಸ್ವರೂಪವನ್ನು ತಿಳಿಯಿರಿ !

೧. ಇಂತಹವರಿಗೆ ಉಗ್ರ ಶಿಕ್ಷೆ ವಿಧಿಸಿರಿ !

ಮಹಾರಾಷ್ಟ್ರದ ಮಾಲೇಗಾವದಲ್ಲಿಯ ಸಾಮಾನ್ಯ ಆಸ್ಪತ್ರೆಗೆ ಚಿಕಿತ್ಸೆಗೆಂದು ತಂದಿದ್ದ ರೋಗಿಯು ಮೃತಪಟ್ಟಿದ್ದರಿಂದ ರೋಗಿಯ ಸಂಬಂಧಿಕರು ಸಮುದಾಯದವರೊಂದಿಗೆ ಸೇರಿ ಆಸ್ಪತ್ರೆಯನ್ನು ಧ್ವಂಸ ಮಾಡಿದರು. ‘ಪ್ರತಿಯೊಬ್ಬ ರೋಗಿಗೆ ಕೊರೋನಾದ ರೋಗಿ ಎಂದು ತಿಳಿದೇ ಚಿಕಿತ್ಸೆ ನೀಡುತ್ತಾರೆ’, ಎಂದು ಆಕ್ಷೇಪಿಸಿ ಧ್ವಂಸ ಮಾಡಲಾಯಿತು.

೨. ಸೌದಿ ಅರೇಬಿಯಾದಲ್ಲಿಯ ಮೌಲಾನಾನ ಹಿಂದೂದ್ವೇಷವನ್ನು ತಿಳಿಯಿರಿ !

‘ಮುಸಲ್ಮಾನರ ವಿರುದ್ಧ (ತಥಾಕಥಿತ) ದ್ವೇಷ ಹಬ್ಬಿಸುವ ಮತ್ತು ಅಪರಾಧಗಳನ್ನು ಎಸಗುವ ಹಿಂದುತ್ವದ ಬೆಂಬಲಿಗರನ್ನು ಕೊಲ್ಲಿ ದೇಶಗಳಿಂದ ಗಡಿಪಾರು ಮಾಡಬೇಕು, ಎಂದು ಸೌದಿ ಅರೇಬಿಯಾದಲ್ಲಿಯ ಮೌಲಾನಾ ಶೇಖ ಅಬಿದಿ ಜಹರಾನಿ ಇವರು ಆಗ್ರಹಿಸಿದ್ದಾರೆ.

೩. ಕಾಂಗ್ರೆಸ್ ನಾಯಕರ ನಿಜ ಸ್ವರೂಪವನ್ನು ತಿಳಿಯಿರಿ !

ಹರಿಯಾಣಾದಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ಮುಖ್ಯಕಾರ್ಯದರ್ಶಿಗಳಾದ ಶ್ರವಣ ರಾವ ಇವರನ್ನು ಮದ್ಯದ ಕಳ್ಳಸಾಗಾಣಿಕೆ ಮಾಡಿದ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರ ವಾಹನದ ಮೇಲೆ ಅಗತ್ಯ ಸೇವೆಯ ಪಾಸ್ ಅಂಟಿಸಲಾಗಿತ್ತು. ಅಂದರೆ ಅವರು ಈ ಪಾಸ್‌ನ ಆಧಾರದಲ್ಲಿ ಮದ್ಯದ ಸಾಗಾಣಿಕೆ ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.

೪. ಈ ಕುರಿತು ‘ಜಾತ್ಯತೀತ’ ಮಾಧ್ಯಮಗಳು ಸುಮ್ಮನೇಕೆ ?

‘ರಿಪಬ್ಲಿಕ್ ಟಿ.ವಿ.’ಯ ಸಂಪಾದಕ ಅರ್ಣವ ಗೋಸ್ವಾಮಿ ಮತ್ತು ಅವರ ಪತ್ನಿ ಸಾಮಿಯಾ ಗೋಸ್ವಾಮಿ ಮೇಲೆ ೨೨ ಏಪ್ರಿಲ್ ನಡುರಾತ್ರಿ ಇಬ್ಬರು ಹಲ್ಲೆ ಮಾಡಿದರು. ಪೊಲೀಸರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.

೫. ತೆಲಂಗಾಣ ಸರಕಾರದ ಅರಾಜಕತೆಯನ್ನು ತಿಳಿಯಿರಿ !

ದೇವಸ್ಥಾನದ ಆಡಳಿತ ಮಂಡಳಿಯು ನೀಡಿದ ದೂರಿನ ಬಳಿಕ ತೆಲಂಗಾಣದ ಚಿತ್ತೂರಿನಲ್ಲಿ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನದ ವಿಶ್ರಾಂತಿಗೃಹವನ್ನು ಪ್ರತ್ಯೇಕಿಕರಣಕ್ಕಾಗಿ ಬಳಸುವ ಬಗೆಗಿನ ಸರಕಾರದ ನಿರ್ಣಯವನ್ನು ವಿರೋಧಿಸುವ ಧರ್ಮಪ್ರೇಮಿ ಶ್ರೀ. ವಿಷ್ಣುವರ್ಧನ ರೆಡ್ಡಿ ಇವರನ್ನು ಬಂಧಿಸಲಾಯಿತು.

೬. ಕಾಂಗ್ರೆಸ್ಸಿನ ರಾಜ್ಯದಲ್ಲಿ ಹಿಂದೂಗಳ ಸಾಧೂ-ಸಂತರು ಅಸುರಕ್ಷಿತರು !

ಪಂಜಾಬದ ಹೋಶಿಯಾರಪೂರದಲ್ಲಿಯ ಮಿಶ್ರಾ ಕುಟಿರ ಆಶ್ರಮದ ಸ್ವಾಮಿ ಪುಷ್ಪಿಂದರ ಸ್ವರೂಪ ಇವರ ಮೇಲೆ ಇಬ್ಬರು ಸಮಾಜಕಂಟಕರು ಚೂರಿಯಿಂದ ಹಲ್ಲೆ ಮಾಡಿದರು. ಅವರು ಸ್ವಾಮಿಗಳ ಕೈಕಾಲುಗಳನ್ನು ಕಟ್ಟಿದರು ಮತ್ತು ಆಶ್ರಮದಲ್ಲಿಯ ೫೦ ಸಾವಿರ ರೂಪಾಯಿಗಳ ನಗದು ಹಣ ಮತ್ತು ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪಲಾಯನ ಮಾಡಿದರು.

೭. ಹಿಂದೂ ರಾಷ್ಟ್ರದ ಆವಶ್ಯಕತೆಯನ್ನು ತಿಳಿಯಿರಿ !

ಝಾರಖಂಡದ ಜಮಶೇದಪೂರದಲ್ಲಿ ಪೊಲೀಸರು ಹಣ್ಣುಗಳ ಮಾರಾಟ ಮಾಡುವ ೨ ಅಂಗಡಿಗಳಲ್ಲಿ ‘ವಿಶ್ವ ಹಿಂದೂ ಪರಿಷತ್ ಬೆಂಬಲಿತ ‘ಹಿಂದೂ ಹಣ್ಣಿನ ಅಂಗಡಿ’ ಎಂಬ ಫಲಕವನ್ನು ಹಾಕಿದ್ದರಿಂದ ಈ ಅಂಗಡಿಗಳ ಮೇಲಿನ ಈ ಫಲಕಗಳನ್ನು ತೆಗೆದರು ಮತ್ತು ಅಪರಾಧ ದಾಖಲಿಸಿದರು.