ಮಹಿಳೆಯರಿಗೆ ಸ್ವರಕ್ಷಣೆಗಾಗಿ ಆಯುಧವನ್ನು ಇಟ್ಟುಕೊಳ್ಳುವ ಕಾನೂನು ಬೇಕು !

ಥಿರುವೆಲ್ಲೂರು (ತಮಿಳುನಾಡು) ಎಂಬಲ್ಲಿ ೨೪ ವರ್ಷದ ನರಾಧಮನು ೧೯ ವರ್ಷದ ಯುವತಿಯ ಮೇಲೆ ಬಲಾತ್ಕಾರ ಮಾಡಲು ಪ್ರಯತ್ನಿಸಿದಾಗ ಆ ಯುವತಿಯು ತನ್ನ ರಕ್ಷಣೆಗಾಗಿ ಚೂರಿಯಿಂದ ಆತನ ಕುತ್ತಿಗೆಯ ಮೇಲೆ ಹಲ್ಲೆ ಮಾಡಿ ಕೊಂದಳು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳಿಗೆ ಸೃಷ್ಟಿಯ ಉತ್ಪತ್ತಿ, ವಿಶ್ವದ ರಚನೆ, ಸಪ್ತಲೋಕ, ಸಪ್ತಪಾತಾಳ, ಮಂತ್ರಶಾಸ್ತ್ರ, ಜ್ಯೋತಿಷ್ಯಶಾಸ್ತ್ರ ಇತ್ಯಾದಿಗಳ ವಿಷಯದಲ್ಲಿ ತಿಳಿಯಿತು ಅದು ಆಧುನಿಕ ವಿಜ್ಞಾನಿಗಳಿಗೆ ಇನ್ನು ಒಂದು ಕಣದಷ್ಟು ತಿಳಿದಿಲ್ಲ

ಪಾಕಿಸ್ತಾನವು ನಡೆಸಿದ ‘ಶಾಹೀನ್ -೩’ ಎಂಬ ಕ್ಷಿಪಣಿ ಪರೀಕ್ಷಣೆಯಲ್ಲಿ ಪಾಕಿಸ್ತಾನದ ನಾಗರಿಕರಿಗೆ ಗಾಯ !

ಪಾಕಿಸ್ತಾನವು ತನ್ನ ಬ್ಯಾಲೆಸ್ಟಿಕ್ ಕ್ಷಿಪಣಿ ‘ಶಾಹೀನ – ೩’ ಇದನ್ನು ಜನವರಿ ೨೦ ರಂದು ಪರೀಕ್ಷಣೆ ಮಾಡಿತು. ಆದರೆ ಇದರಲ್ಲಿ ಪಾಕಿಸ್ತಾನದ ನಾಗರಿಕರು ಗಾಯಗೊಂಡಿದ್ದಾರೆ. ಈ ಪರೀಕ್ಷಣೆಯನ್ನು ಬಲುಚಿಸ್ತಾನದ ಡೆರಾ ಗಾಝಿ ಖಾನ್‌ನಲ್ಲಿ ನಡೆಸಲಾಗಿತ್ತು. ಆಗ ಡೆರಾ ಬುಗ್ತಿ ಎಂಬಲ್ಲಿನ ವಸತಿ ಪ್ರದೇಶದಲ್ಲಿ ಈ ಕ್ಷಿಪಣಿಯು ಬಿದ್ದ ಕಾರಣ ಮನೆಗಳಿಗೆ ಹಾನಿಯುಂಟಾಯಿತು ಮತ್ತು ಅನೇಕ ನಾಗರಿಕರು ಗಾಯಗೊಂಡರು.

ರಾಜ್ಯ ಸರಕಾರವು ಅನ್ವಯಿಸಿದ ಗೋಹತ್ಯೆ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದ ಉಚ್ಚ ನ್ಯಾಯಾಲಯ

ಕರ್ನಾಟಕ ಉಚ್ಚ ನ್ಯಾಯಾಲಯವು ಕರ್ನಾಟಕ ಸರಕಾರವು ಅನ್ವಯಗೊಳಿಸಿದ ಗೋಹತ್ಯಾ ನಿಷೇಧಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿದೆ ಎಂದು ನಿರ್ಧರಿಸಿದೆ. ನ್ಯಾಯಾಲಯದ ಈ ನಿರ್ಣಯದಿಂದ ನಿಷೇಧದ ಕಾರ್ಯಾಚರಣೆಯನ್ನು ಮಾಡಿಕೊಳ್ಳಲು ಸರಕಾರಕ್ಕೆ ಉಂಟಾಗಿದ್ದ ಅಡಚಣೆಯು ಸಹ ದೂರವಾಗಿದೆ.

ಮತಾಂಧರು ಸ್ವಾಧೀನ ಪಡಿಸಿಕೊಂಡಿದ್ದ ವಿದಿಶಾ (ಮಧ್ಯಪ್ರದೇಶ) ಇಲ್ಲಿನ ಪರಮಾರ ವಂಶದ ಪ್ರಾಚೀನ ರಾಜಮಹಲನ್ನು ತೆರವುಗೊಳಿಸಿದ ಆಡಳಿತ!

ಇಲ್ಲಿಂದ ೭೦ ಕಿ.ಮೀ. ದೂರದಲ್ಲಿರುವ ಉದಯಪುರ ನಗರದಲ್ಲಿ ೧ ಸಾವಿರ ವರ್ಷ ಪುರಾತನವಾಗಿರುವ ಪರಮಾರ ವಂಶದ ರಾಜಮಹಲ (ಅರಮನೆ) ಇದರ ಮೇಲೆ ಕಾಝಿ ಸಯ್ಯದ ಇರಫಾನ ಅಲಿ ಇವರು ಇದು ಖಾಸಗಿ ಆಸ್ತಿ ಎಂದು ಫಲಕವನ್ನು ಹಾಕಿದ್ದರು. ತಹಶೀಲ್ದಾರರ ಆದೇಶದ ನಂತರ ಆಡಳಿತವು ಅದನ್ನು ತೆರವುಗೊಳಿಸಿದೆ ಹಾಗೂ ೫ ಸಾವಿರ ರೂ. ದಂಡವನ್ನು ಸಹ ವಸೂಲಿ ಮಾಡಲಾಯಿತು. ಈ ಸ್ಥಳದಲ್ಲಿ ಅಲಿ ಇವರಿಂದ ಮದರಸಾವನ್ನು ನಡೆಸಲಾಗುತ್ತಿತ್ತು.

ಕುತುಬ ಮಿನಾರ್ ಅನ್ನು ಕುತುಬುದ್ದೀನ್ ಐಬಕ್ ನು ಕಟ್ಟಿದ್ದನೆಂದು ಪಠ್ಯಪುಸ್ತಕಗಳಿಂದ ಕಲಿಸುವ ಎನ್.ಸಿ.ಈ.ಆರ್.ಟಿ.ಯ ಬಳಿ ಅದರ ವಿಷಯದಲ್ಲಿ ಯಾವುದೇ ಪುರಾವೆಗಳಿಲ್ಲ !

ಎನ್.ಸಿ.ಈ.ಆರ್.ಟಿ ಯ ಇತಿಹಾಸದ ಪುಸ್ತಕದಲ್ಲಿ ಮೊಗಲರು ಯುದ್ಧದಲ್ಲಿ ಭಗ್ನಗೊಳಿಸಿದ ಹಿಂದೂಗಳ ದೇವಸ್ಥಾನಗಳನ್ನು ನಂತರ ಬಾದಶಾಹ ಶಹಾಜಹಾನ ಮತ್ತು ಔರಂಗಜೇಬ ಇವರು ದುರುಸ್ತಿಗೊಳಿಸಿದರು ಎಂಬ ಯಾವುದೇ ಪುರಾವೆಗಳಿಲ್ಲದ ಇತಿಹಾಸವನ್ನು ಕಲಿಸಲಾಗುತ್ತಿದೆ ಎಂದು ಬೆಳಕಿಗೆ ಬಂದಿದೆ. ಈಗ ಎನ್.ಸಿ.ಈ. ಆರ್. ಟಿ ಯ ಇನ್ನೂ ಒಂದು ಸುಳ್ಳುಕೋರತನವು ಮಾಹಿತಿ ಹಕ್ಕು ಅಧಿಕಾರದಿಂದ ಬೆಳಕಿಗೆ ಬಂದಿದೆ.

ಲಕ್ಷ್ಮಣಪುರಿ (ಉತ್ತರಪ್ರದೇಶ)ದಲ್ಲಿ ದೇವಸ್ಥಾನದ ಅರ್ಚಕರನ್ನು ಹತ್ಯೆಗೈದು ಲೂಟಿ !

ಇಲ್ಲಿನ ಶಿವಪುರಿ ಊರಿನಲ್ಲಿರುವ ಐತಿಹಾಸಿಕ ರಣಬಾಬಾ ಮಹಾದೇವ ದೇವಸ್ಥಾನದಲ್ಲಿ ೧೯ ಜನವರಿಯ ರಾತ್ರಿ ಅಪರಿಚಿತರು ಲೂಟಿ ಮಾಡಿ ಅಲ್ಲಿನ ೮೦ ವರ್ಷದ ಬಾಬಾ ಫಕೀರೆ ದಾಸ ಇವರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಇಲ್ಲಿನ ಅರ್ಪಣೆ ಪೆಟ್ಟಿಗೆಯಲ್ಲಿರುವ ಹಣವನ್ನು ಕದ್ದು ಪಲಾಯನ ಮಾಡಿದ್ದಾರೆ ಹಾಗೂ ೩ ಘಂಟೆಗಳು ಹಾಗೂ ದೇವಸ್ಥಾನದಲ್ಲಿರುವ ಧಾನ್ಯವನ್ನೂ ಸಹ ಕಳ್ಳರೂ ಕದ್ದೊಯ್ದಿದ್ದಾರೆ.

ಗುಜರಾತ ಸರಕಾರದಿಂದ `ಡ್ರಾಗನ್ ಫ್ರೂಟ್’ ಹಣ್ಣಿಗೆ `ಕಮಲಮ್’ ಎಂದು ನಾಮಕರಣ !

ಗುಜರಾತನ ಭಾಜಪ ಸರಕಾರವು `ಡ್ರಾಗನ್ ಫ್ರೂಟ್’ ಎಂದು ಪ್ರಸಿದ್ಧವಾಗಿರುವ ಹಣ್ಣಿಗೆ `ಕಮಲಮ್’ ನಾಮಕರಣ ಮಾಡಿದೆ. ಈ ಹಣ್ಣಿಗೆ ಡ್ರಾಗನ್ ಎಂಬ ಶಬ್ದವನ್ನು ಉಪಯೋಗಿಸುವುದು ಯೋಗ್ಯವಲ್ಲ. ಡ್ರಾಗನ್ ಹಣ್ಣು ಕಮಲದಂತೆ ಕಾಣುತ್ತದೆ. ಹಾಗಾಗಿ ಈ ಹಣ್ಣಿಗೆ ಸಂಸ್ಕೃತ ಭಾಷೆಗನುಸಾರ `ಕಮಲಮ್’ ಎಂದು ಹೆಸರು ನೀಡಲಾಗಿದೆ. ಈ ಮಾಹಿತಿಯನ್ನು ಮುಖ್ಯಮಂತ್ರಿ ವಿಜಯ ರೂಪಾಣಿ ಇವರು ನೀಡಿದ್ದಾರೆ.

ಸರ್ವೋಚ್ಚ ನ್ಯಾಯಾಲಯವು ಮರಾಠಾ ಮೀಸಲಾತಿಯ ಆಲಿಕೆಯನ್ನು ೫ ಫೆಬ್ರವರಿ ತನಕ ಮುಂದೂಡಿದೆ

ಮರಾಠಾ ಮೀಸಲಾತಿಯ ಪ್ರಕರಣದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಸಂವಿಧಾನ(ಖಂಡ) ಪೀಠದೆದುರು 20 ಜನವರಿಯಂದು ಅಂತಿಮ ಆಲಿಕೆಯು ಪ್ರಾರಂಭವಾಗಲಿತ್ತು; ಆದರೆ ನ್ಯಾಯಾಲಯವು ಆಲಿಕೆಗೆ ಸ್ಥಗಿತಿಯನ್ನು ನೀಡಿದೆ. ಈಗ ಈ ಪ್ರಕರಣದ ಬಗ್ಗೆ 5 ಫೆಬ್ರವರಿಯಂದು ಆಲಿಕೆಯಾಗಲಿದೆ.

ಕರ್ನಾಟಕದ ಭಾಜಪ ಸರಕಾರವು ಗೋರಕ್ಷಕರ ಮೇಲಿನ ಅಪರಾಧಗಳನ್ನು ಹಿಂಪಡೆಯಲಿದೆ !

ರಾಜ್ಯದಲ್ಲಿ ಗೋರಕ್ಷಣೆಯನ್ನು ಮಾಡುವಾಗ ಗೋರಕ್ಷಕರ ವಿರುದ್ಧ ನೊಂದಾಯಿಸಲಾಗಿರುವ ಅಪರಾಧಗಳನ್ನು ಹಿಂಪಡೆಯುವ ನಿರ್ಣಯವನ್ನು ರಾಜ್ಯದ ಭಾಜಪ ಸರಕಾರವು ತೆಗೆದುಕೊಂಡಿದೆ. ರಾಜ್ಯದ ಪಶುಪಾಲನ ಮಂತ್ರಿ ಪ್ರಭು ಚೌಹಾನ ಇವರು ಈ ಮಾಹಿತಿಯನ್ನು ನೀಡಿದ್ದಾರೆ.