2 ಲಕ್ಷಕ್ಕೂ ಹೆಚ್ಚು ಬ್ರಿಟಿಷ್ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಶೇ. 87 ರಷ್ಟು ಆರೋಪಿಗಳು ಪಾಕಿಸ್ತಾನಿ ಮುಸಲ್ಮಾನರು!
ದೇಶದ 149 ನಗರಗಳಲ್ಲಿ ಮುಸಲ್ಮಾನರ ಗ್ಯಾಂಗ್ ಗಳು ಸಕ್ರಿಯ!

ಲಂಡನ್ (ಬ್ರಿಟನ್) – ದೇಶದಲ್ಲಿ ವರ್ಷಗಳಿಂದ ನಡೆಯುತ್ತಿರುವ ‘ಗ್ರೂಮಿಂಗ್ ಗ್ಯಾಂಗ್’ (ಸಣ್ಣ ಹೆಣ್ಣುಮಕ್ಕಳು ಅಥವಾ ಯುವತಿಯರನ್ನು ಜಾಲಕ್ಕೆ ಸಿಲುಕಿಸಿ ಅವರ ಲೈಂಗಿಕ ಶೋಷಣೆ ಮಾಡುವ ಗ್ಯಾಂಗ್) ಸಮಸ್ಯೆಯ ಕುರಿತು ವರದಿಯೊಂದನ್ನು ಪ್ರಕಟಿಸಲಾಗಿದೆ. 219 ಪುಟಗಳ ‘ರೆಪ್ ಗ್ಯಾಂಗ್ ಇನ್ ಕ್ವೈರಿ ರಿಪೋರ್ಟ್’ ಎಂಬ ಈ ವರದಿಯ ಪ್ರಕಾರ, ಬ್ರಿಟನ್ ನಲ್ಲಿ ಕನಿಷ್ಠ 2 ಲಕ್ಷ 50 ಸಾವಿರ ಶ್ವೇತವರ್ಣೀಯ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆದಿದೆ. ದೇಶದ ವಿವಿಧ ನಗರಗಳಲ್ಲಿ ಕೆಲವು ಸಂಘಟಿತ ಗ್ಯಾಂಗ್ ಗಳು ಅಸುರಕ್ಷಿತ ಮತ್ತು ಅಪ್ರಾಪ್ತ ಹೆಣ್ಣುಮಕ್ಕಳನ್ನು ಗುರಿಯಾಗಿಸುತ್ತಿದ್ದವು ಎಂದು ಈ ವರದಿಯಲ್ಲಿ ಹೇಳಲಾಗಿದೆ. ಈ ಗ್ಯಾಂಗ್ ಗಳಲ್ಲಿ ಶೇ. 87 ರಷ್ಟು ಪಾಕಿಸ್ತಾನಿ ಮುಸಲ್ಮಾನ್ ಪುರುಷರಿದ್ದರು ಮತ್ತು ಅವರು ಪ್ರಮುಖವಾಗಿ ‘ಶ್ವೇತವರ್ಣೀಯ’ ಬ್ರಿಟಿಷ್ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡಿದ್ದರು.
1. ಹೆಣ್ಣುಮಕ್ಕಳನ್ನು ಆರಂಭದಲ್ಲಿ ಸ್ನೇಹ, ಪ್ರೀತಿ, ಉಡುಗೊರೆಗಳು, ಮದ್ಯ, ಸಿಗರೇಟ್ ಮತ್ತು ಮಾದಕ ಪದಾರ್ಥಗಳ ಆಮಿಷ ಒಡ್ಡಿ ಜಾಲಕ್ಕೆ ಸಿಲುಕಿಸಲಾಗುತ್ತಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
2. 11 ರಿಂದ 13 ವರ್ಷದ ಹೆಣ್ಣುಮಕ್ಕಳನ್ನು ಶಾಲೆಗಳ ಹೊರಗಿನಿಂದ, ಆಶ್ರಯ ತಾಣಗಳಿಂದ ಮತ್ತು ರಸ್ತೆಗಳಿಂದ ಟ್ಯಾಕ್ಸಿಗಳಲ್ಲಿ ಕರೆದೊಯ್ಯಲಾಗುತ್ತಿತ್ತು. ತದನಂತರ ಅವರನ್ನು ಮನೆಗಳು, ಫ್ಲ್ಯಾಟ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಕರೆದೊಯ್ದು, ಹಲವು ಪುರುಷರು ಸೇರಿ ಅವರ ಮೇಲೆ ಪದೇ ಪದೇ ಬಲಾತ್ಕಾರ ಎಸಗುತ್ತಿದ್ದರು.
3. ಅನೇಕ ಸಂತ್ರಸ್ತ ಹೆಣ್ಣುಮಕ್ಕಳನ್ನು ಬೇರೆ ಬೇರೆ ನಗರಗಳಿಗೆ ಕರೆದೊಯ್ದು ಮಾರಾಟ ಮಾಡಲಾಯಿತು, ಅವರ ವೀಡಿಯೊಗಳನ್ನು ಮಾಡಲಾಯಿತು ಮತ್ತು ಅವರಿಗೆ ಬೆದರಿಕೆ ಹಾಕಿ ನಿರಂತರ ಭಯದ ವಾತಾವರಣದಲ್ಲಿ ಇರಿಸಲಾಗಿತ್ತು ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
4. ವರದಿಯ ಪ್ರಕಾರ ಪೊಲೀಸ್, ಸಾಮಾಜಿಕ ಸಂಸ್ಥೆಗಳು, ಶಾಲೆಗಳು, ಆಸ್ಪತ್ರೆಗಳು ಮತ್ತು ಸ್ಥಳೀಯ ಸರಕಾರಿ ಆಡಳಿತಕ್ಕೆ ಪದೇ ಪದೇ ಅಪಾಯದ ಮುನ್ಸೂಚನೆಗಳು ತಲುಪಿದ್ದವು; ಆದರೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವರ್ಣಭೇದ ನೀತಿಯ ಆರೋಪ ಎದುರಿಸಬೇಕಾಗಬಹುದು ಎಂಬ ಭಯ, ರಾಜಕೀಯ ಒತ್ತಡ ಮತ್ತು ಸಾಂಸ್ಥಿಕ ವೈಫಲ್ಯದಿಂದಾಗಿ ಅಪರಾಧಿಗಳನ್ನು ಹಲವು ವರ್ಷಗಳ ಕಾಲ ಮುಕ್ತವಾಗಿ ಬಿಡಲಾಗಿತ್ತು. ಇದರಿಂದಾಗಿ ಸಾವಿರಾರು ಹೆಣ್ಣುಮಕ್ಕಳು ನಿರಂತರವಾಗಿ ಲೈಂಗಿಕ ಶೋಷಣೆಗೆ ಬಲಿಯಾಗುತ್ತಲೇ ಬಂದರು. (ಮಾನವೀಯತೆ, ಮಹಿಳಾ ವಿಮೋಚನೆಯ ಡೋಲು ಬಾರಿಸುವ ಬ್ರಿಟನ್ ನ ಸಾಮಾಜಿಕ ಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬುದು ಇದರಿಂದಲೇ ಕಂಡುಬರುತ್ತದೆ!)
5. ಈ ‘ರೆಪ್ ಗ್ಯಾಂಗ್ ಇನ್ ಕ್ವೈರಿ ರಿಪೋರ್ಟ್’ ಅನ್ನು ಬ್ರಿಟನ್ ನ ಗ್ರೇಟ್ ಯಾರ್ ಮೌತ್ ನ ಸಂಸದ ರೂಪರ್ಟ್ ಲೋವ್ ಅವರ ನೇತೃತ್ವದ ಸ್ವತಂತ್ರ ತನಿಖಾ ಸಮಿತಿಯು ಸಿದ್ಧಪಡಿಸಿದೆ.
6. ವರದಿಯ ಪ್ರಕಾರ, ಈ ಗ್ಯಾಂಗ್ ಗಳಲ್ಲಿ ಪಾಕಿಸ್ತಾನಿ ಮುಸಲ್ಮಾನ ಪುರುಷರ ಸಂಖ್ಯೆಯು ಅತ್ಯಧಿಕವಾಗಿತ್ತು. ಇದರೊಂದಿಗೆ ಕೆಲವು ಪ್ರಕರಣಗಳಲ್ಲಿ ಸೋಮಾಲಿ, ಸಿರಿಯನ್, ಇರಾನಿ ಮತ್ತು ಟರ್ಕಿ ದೇಶಗಳ ಮುಸಲ್ಮಾನ ಪುರುಷರ ಹೆಸರುಗಳೂ ಮುಂಚೂಣಿಗೆ ಬಂದಿವೆ. ‘ಗ್ರೂಮಿಂಗ್ ಗ್ಯಾಂಗ್’ನಲ್ಲಿ ಭಾಗಿಯಾಗಿರುವ ಮುಸಲ್ಮಾನ ಪುರುಷರ ನಿಜವಾದ ಸಂಖ್ಯೆ ಶೇ. 95 ರಷ್ಟಿರಬಹುದು ಎಂದು ಈ ವರದಿಯಲ್ಲಿ ಹೇಳಲಾಗಿದೆ.
7. ಬ್ರಿಟನ್ ನಲ್ಲಿ ಸುಮಾರು 2002 ರ ಸುಮಾರಿಗೆ ಮೊದಲ ಬಾರಿಗೆ ‘ಗ್ರೂಮಿಂಗ್ ಗ್ಯಾಂಗ್’ಗೆ ಸಂಬಂಧಿಸಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆ ಸಮಯದಲ್ಲಿ ಪಾಕಿಸ್ತಾನಿ ಮೂಲದ ಪುರುಷರ ಮೇಲೆ ಅಪ್ರಾಪ್ತ ಹೆಣ್ಣುಮಕ್ಕಳ ಲೈಂಗಿಕ ಶೋಷಣೆಯ ಆರೋಪಗಳು ಕೇಳಿಬಂದಿದ್ದವು.
8. ‘ಗ್ರೂಮಿಂಗ್ ಗ್ಯಾಂಗ್’ಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಮರುಪರಿಶೀಲಿಸಬೇಕು ಮತ್ತು ಎಂದಿಗೂ ನ್ಯಾಯಾಲಯದ ಮೆಟ್ಟಿಲೇರದ ಅಪರಾಧಿಗಳ ವಿರುದ್ಧ ಮತ್ತೊಮ್ಮೆ ತನಿಖೆ ನಡೆಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಇದರೊಂದಿಗೆ ಪೊಲೀಸ್, ಸಾಮಾಜಿಕ ಸೇವಾ ಸಂಸ್ಥೆಗಳು, ಶಾಲೆಗಳು ಮತ್ತು ಆರೋಗ್ಯ ಇಲಾಖೆಯ ಪಾತ್ರದ ಕುರಿತು ಸ್ವತಂತ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ.
ಪಾಕಿಸ್ತಾನದ ವ್ಯಂಗ್ಯ ಟೀಕೆ : ಭಾರತದ ತಕ್ಕ ಪ್ರತ್ಯುತ್ತರ!
ಭಯೋತ್ಪಾದನೆ ಸೃಷ್ಟಿಸುವ ಪಾಕಿಸ್ತಾನ ತನ್ನನ್ನು ತಾನೇ ಭಯೋತ್ಪಾದನೆಯ ಬಲಿಪಶು ಎಂದು ಕರೆದುಕೊಳ್ಳುತ್ತಿದೆ! : India Slams Pakistan
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack
ಇಸ್ರೇಲ್ನ ಲೆಬನಾನ್ ಮೇಲಿನ ಕಾರ್ಯಾಚರಣೆಯಿಂದ ಅಮೆರಿಕ-ಇರಾನ್ ಮಾತುಕತೆ ಸ್ಥಗಿತ : US Iran Talks
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!