ಶ್ರೀರಾಮ ಜನ್ಮಭೂಮಿ ನಿರ್ಮಾಣ ಸಮಿತಿಯ ಅಧ್ಯಕ್ಷರ ಹೇಳಿಕೆ

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರಿಗೆ 7 ತಲೆಮಾರುಗಳವರೆಗೆ ಶಾಪ ತಟ್ಟಲಿದೆ, ಎಂದು ‘ಶ್ರೀರಾಮ ಜನ್ಮಭೂಮಿ ನಿರ್ಮಾಣ ಸಮಿತಿ’ಯ ಅಧ್ಯಕ್ಷರು ಮತ್ತು ಮಾಜಿ ಐಎಎಸ್ ಅಧಿಕಾರಿ ನೃಪೇಂದ್ರ ಮಿಶ್ರಾ ಅವರು ತಮ್ಮ ಪ್ರತಿಕ್ರಿಯೆಯಲ್ಲಿ ವ್ಯಕ್ತಪಡಿಸಿದ್ದಾರೆ. ಅವರು ಒಂದು ಸಂದರ್ಶನದಲ್ಲಿ ಮಾತನಾಡುತ್ತಿದ್ದರು. ಅವರು ಮುಂದೆ ಹೇಳುತ್ತಾ, ಚಂಪತ್ ರಾಯ್ ಅವರು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಮುಖ್ಯಸ್ಥರಾಗಿದ್ದಾರೆ. ಚಂಪತ್ ರಾಯ್ ಅವರ ನಿಷ್ಠೆಯ ಬಗ್ಗೆ ನಾನು ಪ್ರಶ್ನೆ ಎತ್ತುವುದಿಲ್ಲ. ಅವರು ಕಳೆದ 35 ವರ್ಷಗಳಿಂದ ಮಂದಿರ ಆಂದೋಲನದೊಂದಿಗೆ ಬೆಸೆದುಕೊಂಡಿದ್ದಾರೆ; ಆದರೆ ಮೇಲ್ವಿಚಾರಣೆಯಲ್ಲಿ ಕೊರತೆಯಾಗಿದೆ ಎಂದು ಹೇಳಿದರು.
ನೃಪೇಂದ್ರ ಮಿಶ್ರಾ ಅವರು ಸಂದರ್ಶನದಲ್ಲಿ ಮಂಡಿಸಿದ ಪ್ರಮುಖ ಅಂಶಗಳು
1. ಈ ಹಿಂದೆ ಎದುರಾದ ಭೂಮಿ ಖರೀದಿಯ ವಿವಾದಕ್ಕಿಂತ ದಾನದ ಕಳ್ಳತನದ ಪ್ರಕರಣವು ಹೆಚ್ಚು ಗಂಭೀರ ಮತ್ತು ಸವಾಲಿನದ್ದಾಗಿದೆ. ಭೂಮಿ ಖರೀದಿಯ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು 3 ಸದಸ್ಯರ ಸಮಿತಿಯನ್ನು ರಚಿಸಲಾಗಿತ್ತು. ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗಬಹುದು ಎಂಬುದು ಆ ಘಟನೆಯಿಂದ ತಿಳಿಯಿತು.
2. ನಿರ್ವಹಣೆಯು 2 ಭಾಗಗಳನ್ನು ಹೊಂದಿರುತ್ತದೆ, ನಿಷ್ಠೆ ಮತ್ತು ಮೇಲ್ವಿಚಾರಣೆ. ಮೊದಲ ಭಾಗವು ಸಿಬ್ಬಂದಿಯ ನಿಷ್ಠೆಯ ಮೇಲೆ ನಂಬಿಕೆ ಇಡುವುದು. ಎರಡನೇ ಭಾಗವು ಸಿಬ್ಬಂದಿಯ ಮೇಲೆ ಮೇಲ್ವಿಚಾರಣೆ ಮಾಡುವುದು. ನಿಷ್ಠೆ ಮತ್ತು ಮೇಲ್ವಿಚಾರಣೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚಂಪತ್ ರಾಯ್ ಅವರಲ್ಲಿ ನಿಷ್ಠೆಯ ಕೊರತೆಯಿಲ್ಲ, ಆದರೆ ಮೇಲ್ವಿಚಾರಣೆಯಲ್ಲಿ ಕೊರತೆಯಾಗಿದೆ.
3. ದೇಣಿಗೆಯಲ್ಲಿ ಕಳ್ಳತನ ಯಾವಾಗಲಿಂದ ನಡೆಯುತ್ತಿದೆ ಎಂದು ಅಂದಾಜಿಸುವುದು ಕಷ್ಟ. ದಾನದ ಕಳ್ಳತನದ ಸುದ್ದಿಯ ನಂತರ ಬೇರೆ ಮಾಹಿತಿಯನ್ನು ಸಂಗ್ರಹಿಸಲಾಯಿತು. ಕಳೆದ 3 ವರ್ಷಗಳಲ್ಲಿ ಪ್ರತಿ ತಿಂಗಳು ಎಷ್ಟು ಹಣ ಬಂದಿದೆ ಎಂಬ ಮಾಹಿತಿಯನ್ನು ಕಲೆಹಾಕಿದಾಗ, ಕೆಲವು ಬಾರಿ 4 ಕೋಟಿ, ಇನ್ನು ಕೆಲವು ಬಾರಿ 10 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಬಂದಿರುವುದು ಕಂಡುಬಂತು. ಭಕ್ತರು ದಾನದ ಪೆಟ್ಟಿಗೆಯಲ್ಲಿ ಉಂಗುರಗಳನ್ನೂ ಹಾಕಿದ್ದಾರೆ. ಕಿವಿಯೋಲೆಗಳು ಮತ್ತು ಚಿನ್ನದ ಬಳೆಗಳನ್ನೂ ಸಹ ದಾನದ ಪೆಟ್ಟಿಗೆಯಲ್ಲಿ ಹಾಕಲಾಗಿದೆ, ಆದರೆ ಅವುಗಳಿಗೆ ಯಾವುದೇ ರಸೀದಿ ಇಲ್ಲ.
4. ದಾನದ ವಿಷಯದಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. ಪ್ರತಿದಿನದ ಲೆಕ್ಕಪತ್ರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿರಬೇಕು. ಮಾರ್ಗಸೂಚಿಗಳಲ್ಲಿ “ಜೇಬು ಇಲ್ಲದ ಬಟ್ಟೆಗಳನ್ನು ಧರಿಸಬೇಕು” ಎಂದು ನಮೂದಿಸಲಾಗಿದೆ. ಪ್ರವೇಶಿಸುವಾಗ ಮತ್ತು ಹೊರಬರುವಾಗ ಸಂಪೂರ್ಣ ತಪಾಸಣೆ ನಡೆಯಬೇಕು. ಜನರು ಜೇಬಿನಲ್ಲಿ ನೋಟುಗಳ ಬಂಡಲ್ ಇಟ್ಟುಕೊಂಡು ಹೊರಗೆ ಬಂದಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ. ಮಾರ್ಗಸೂಚಿಗಳು ಉತ್ತಮವಾಗಿವೆ, ಆದರೆ ಅವುಗಳ ಅನುಷ್ಠಾನದಲ್ಲಿ ಕೊರತೆಯಾಗಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ