ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿತು

ನ್ಯೂಯಾರ್ಕ್ (ಅಮೆರಿಕ) – ಯಾವ ದೇಶದ ಹಾಲಿ ರಕ್ಷಣಾ ಸಚಿವರು ಬಹಿರಂಗವಾಗಿ ಭಯೋತ್ಪಾದಕರಿಗೆ ಆಶ್ರಯ ನೀಡುವುದು, ತರಬೇತಿ ನೀಡುವುದು ಮತ್ತು ಅವರನ್ನು ಬಳಸಿಕೊಳ್ಳುವುದು ದೇಶದ ಅಧಿಕೃತ ನೀತಿ ಎಂದು ಹೇಳುತ್ತಾರೋ, ಅದೇ ದೇಶ ಇಂದು ತನ್ನನ್ನು ತಾನೇ ಭಯೋತ್ಪಾದನೆಯ ಬಲಿಪಶು ಎಂದು ಕರೆದುಕೊಳ್ಳುತ್ತಿದೆ. ಇದು ಪಾಕಿಸ್ತಾನ ಮಾತ್ರ ತೋರಿಸಬಲ್ಲ ವಿರೋಧಾಭಾಸವಾಗಿದೆ. ಈ ದೇಶವು ‘ಫ್ರಾಂಕೆನ್‌ಸ್ಟೈನ್’ನ (ತಾನೇ ಸೃಷ್ಟಿಸಿದ ಅರಾಜಕತೆಯ ಬಲಿಪಶುವಾದ) ಜೀವಂತ ಉದಾಹರಣೆಯಾಗಿದೆ, ಅಂದರೆ ತಾನು ಸೃಷ್ಟಿಸಿದ ವಸ್ತುವೇ ತನ್ನ ವಿನಾಶಕ್ಕೆ ಕಾರಣವಾಗಿದೆ, ಎಂದು ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಪಾಕಿಸ್ತಾನಕ್ಕೆ ತರಾಟೆಗೆ ತೆಗೆದುಕೊಂಡಿತು. ವಿಶ್ವಸಂಸ್ಥೆಯಲ್ಲಿ ಭಾರತದ ಕಾರ್ಯದರ್ಶಿ ಅನುಪಮಾ ಸಿಂಗ್ ಅವರು ಪರಿಷತ್ತಿನ 62ನೇ ಅಧಿವೇಶನದಲ್ಲಿ ಮಾತನಾಡುತ್ತಾ ಪಾಕಿಸ್ತಾನದ ಎಲ್ಲಾ ಹಕ್ಕುನಿರಾಕರಣೆಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.
ಈ ಸಮಯದಲ್ಲಿ ಪಾಕಿಸ್ತಾನ ಮತ್ತು ‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋಆಪರೇಷನ್’ ಎಂಬ ಇಸ್ಲಾಮಿ ದೇಶಗಳ ಸಂಘಟನೆಯಿಂದ ಜಮ್ಮು-ಕಾಶ್ಮೀರದ ವಿಷಯದಲ್ಲಿ ಮಾಡಲಾದ ಎಲ್ಲಾ ಆರೋಪಗಳನ್ನು ಭಾರತ ತಿರಸ್ಕರಿಸಿತು. ಅನುಪಮಾ ಸಿಂಗ್ ಅವರು ಪಾಕಿಸ್ತಾನದ ಆರೋಪಗಳು ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ಹೇಳಿದರು. ದೇಶೀಯ ವೈಫಲ್ಯಗಳನ್ನು ಮುಚ್ಚಿಡಲು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸಲು ಪಾಕಿಸ್ತಾನ ಈ ಅಪಪ್ರಚಾರ ಮಾಡುತ್ತಿದೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಯಾವಾಗಲೂ ಹಾಗೆಯೇ ಇರುತ್ತದೆ.
60 ವರ್ಷ ಹಳೆಯ ‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ’ ಈಗ ಕಾಲಬಾಹ್ಯ!ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಕುರಿತು ಭಾರತದ ನಿಲುವನ್ನು ಸ್ಪಷ್ಟಪಡಿಸುವಾಗ ಅನುಪಮಾ ಸಿಂಗ್ ಅವರು, ಭಯೋತ್ಪಾದನೆ ಮತ್ತು ಸಹಕಾರ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಯಾವ ದೇಶವು ಭಯೋತ್ಪಾದನೆಯನ್ನು ರಫ್ತು ಮಾಡುತ್ತದೆಯೋ, ಆ ದೇಶವು ಸ್ನೇಹ ಮತ್ತು ಸದ್ಭಾವನೆಯ ಆಧಾರದ ಮೇಲಿನ ಒಪ್ಪಂದದ ಲಾಭವನ್ನು ಕೇಳಲು ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ಸಹಕಾರ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. 1960 ರಲ್ಲಿ ನಡೆದ ಈ ಒಪ್ಪಂದವನ್ನು ಶಾಶ್ವತವಾಗಿ ಪಡೆದ ಹಕ್ಕು ಎಂದು ಪರಿಗಣಿಸಲು ಸಾಧ್ಯವಿಲ್ಲ. ಕಳೆದ 6 ದಶಕಗಳಲ್ಲಿ ಜಾಗತಿಕ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಆದ್ದರಿಂದ ಯಾವುದೇ ತಾಂತ್ರಿಕ ಒಪ್ಪಂದವನ್ನು ಕಾಲದ ಚೌಕಟ್ಟಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ. |
ಪಾಕಿಸ್ತಾನದ ವ್ಯಂಗ್ಯ ಟೀಕೆ : ಭಾರತದ ತಕ್ಕ ಪ್ರತ್ಯುತ್ತರ!
ರೆಪ್ ಗ್ಯಾಂಗ್ ಇನ್ ಕ್ವೈರಿ ರಿಪೋರ್ಟ್’ನಲ್ಲಿ ಬ್ರಿಟನ್ ನಲ್ಲಿ ವರ್ಷಗಳಿಂದ ನಡೆಯುತ್ತಿರುವ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳ ಬಹಿರಂಗ!
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack
ಇಸ್ರೇಲ್ನ ಲೆಬನಾನ್ ಮೇಲಿನ ಕಾರ್ಯಾಚರಣೆಯಿಂದ ಅಮೆರಿಕ-ಇರಾನ್ ಮಾತುಕತೆ ಸ್ಥಗಿತ : US Iran Talks
ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಬೇಡಿ! : Trump Vs Lula
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದದ ಮಧ್ಯವರ್ತಿಯಾಗಿ ಶ್ರೇಯಸ್ಸು ಪಡೆದ ಪಾಕಿಸ್ತಾನ ! : US Iran Peace Deal