ಜೆರುಸಲೇಮ್ – ಇಸ್ರೇಲ್‌ನ ಪ್ರಧಾನಿ ಬೆಂಜಾಮಿನ ನೆತನ್ಯಾಹುನ ೨೯ ವರ್ಷದ ಮಗ ಯಾಯರನು ಟ್ವೀಟ್ ಮೂಲಕ ಶ್ರೀ ದುರ್ಗಾದೇವಿಯ ವಿಡಂಬನಾತ್ಮಕ ಚಿತ್ರ ಪ್ರಸಾರ ಮಾಡಿ ದೇವಿಯ ಅವಮಾನ ಮಾಡಿದ್ದನು. ಇದಕ್ಕೆ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರು ತೀವ್ರವಾಗಿ ಆಕ್ಷೇಪಿಸುತ್ತ ಈ ಚಿತ್ರವನ್ನು ಕೂಡಲೇ ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಅದಕ್ಕೆ ಯಾಯರನು ಈ ವಿಡಂಬನಾತ್ಮಕ ಚಿತ್ರವನ್ನು ತೆಗೆದು ಹಾಕಿ ಭಾರತೀಯರಲ್ಲಿ ಕ್ಷಮೆ ಯಾಚನೆ ಮಾಡಿದನು.
On Sunday, the 29-year-old Yair, posted a picture of the Hindu goddess Durga with an objectional caption https://t.co/QIT5Kn4BHM #BenjaminNetanyahu #Israel
— The Hindu (@the_hindu) July 28, 2020
I’ve tweeted a meme from a satirical page, critizing political figures in Israel. I didn’t realize the meme also portrayed an image conected to the majestic Hindu faith. As soon as I realised it from comments of our Indian friends, I have removed the tweet. I apologize>>
— Yair Netanyahu 🇮🇱 (@YairNetanyahu) July 27, 2020
ಯಾಯರನು ಟ್ವೀಟ್ ಮಾಡಿದ ಶ್ರೀ ದುರ್ಗಾದೇವಿಯ ಚಿತ್ರದಲ್ಲಿ ದೇವಿಯ ಮುಖದ ಬದಲಾಗಿ ಲಿಯೆಟ್ ಬೆನ್ ಎರಿಯ ಮುಖವನ್ನು ಹಾಕಿದ್ದ. ಎರಿ ಬೆಂಜಾಮಿನ ನೇತನ್ಯಾಹುವಿನ ಮೇಲೆ ನಡೆಯುತ್ತಿರುವ ಭ್ರಷ್ಟಾಚಾರದ ಖಟ್ಲೆಯ ನ್ಯಾಯವಾದಿಯಾಗಿದ್ದಾರೆ. ಯಾಯರನು, ‘ನಾನು ಈ ಚಿತ್ರವನ್ನು ಜಾಲತಾಣದಿಂದ ತೆಗೆದುಕೊಂಡಿದ್ದೆ. ಈ ಚಿತ್ರದಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗುತ್ತದೆ ಎಂಬುದು ನನಗೆ ಗೊತ್ತಿರಲಿಲ್ಲ. ಇದರ ಬಗ್ಗೆ ನನಗೆ ಭಾರತೀಯ ಸ್ನೇಹಿತರಿಂದ ಪ್ರತಿಕ್ರಿಯೆ ಬಂದಾಗ ತಿಳಿಯಿತು. ತದನಂತರ ನಾನು ಆ ಚಿತ್ರವನ್ನು ಕೂಡಲೇ ತೆಗೆದು ಕ್ಷಮೆ ಯಾಚನೆ ಮಾಡಿದೆ ಎಂದು ಹೇಳಿದ್ದಾನೆ.