ರಾಮಮಂದಿರ ಆಗುತ್ತಿದ್ದಂತೆ ದೇಶದಿಂದ ಕೊರೋನಾ ಓಡಿ ಹೋಗುವುದು ! – ಭಾಜಪದ ಶಾಸಕಿ ಜಸಕೌರ ಮೀನಾ

ಜಸಕೌರ ಮೀನಾ

ನವ ದೆಹಲಿ – ನಾವು ಆಧ್ಯಾತ್ಮಿಕ ಶಕ್ತಿಯನ್ನು ಪೂಜಿಸುವವರಾಗಿದ್ದೇವೆ. ನಾವು ಆಧ್ಯಾತ್ಮಿಕ ಶಕ್ತಿಯನುಸಾರವೇ ಮಾರ್ಗಕ್ರಮಣ ಮಾಡುತ್ತೇವೆ. ಅಯೋಧ್ಯೆಯಲ್ಲಿ ರಾಮಮಂದಿರ ಆಗುತ್ತಿದ್ದಂತೆ ಕೊರೋನಾ ದೇಶದಿಂದ ಓಡಿ ಹೋಗಲಿದೆ, ಎಂದು ದೌಸಾ ಲೋಕಸಭೆ ಚುನಾವಣಾ ಕ್ಷೇತ್ರದ ಭಾಜಪದ ಸಂಸದೆ ಜಸಕೌರ್ ಮೀನಾರವರು ಹೇಳಿಕೆಯನ್ನು ನೀಡಿದ್ದಾರೆ.

ಈ ಹಿಂದೆ ಮಧ್ಯಪ್ರದೇಶದ ವಿಧಾನಸಭಾ ಅಧ್ಯಕ್ಷ ರಾಮೇಶ್ವರ ಶರ್ಮಾ ಇವರೂ ‘ದೇಶದಲ್ಲಿ ರಾಮಮಂದಿರದ ಕೆಲಸ ಆರಂಭವಾಗುತ್ತಿದ್ದಂತೆ ಕೊರೋನಾ ಮಹಾಮಾರಿ ನಾಶವಾಗಲಿದೆ. ನಾವು ನಿಯಮಗಳನ್ನು ಪಾಲಿಸುವುದರೊಂದಿಗೆ ನಾಮಸ್ಮರಣೆಯನ್ನೂ ಮಾಡುತ್ತೇವೆ’, ಎಂದು ಹೇಳಿದ್ದರು. ಅಯೋಧ್ಯೆಯಲ್ಲಿ ಆಗಸ್ಟ್ ೫ ರಂದು ಪ್ರಧಾನಿ ಮೋದಿಯವರು ರಾಮಮಂದಿರದ ಭೂಮಿ ಪೂಜೆಯನ್ನು ಮಾಡಲಿದ್ದು ನಂತರ ರಾಮಮಂದಿರದ ನಿರ್ಮಾಣ ಕಾರ್ಯ ಆರಂಭವಾಗಲಿದೆ.