ರಾಮಮಂದಿರ ಭೂಮಿಪೂಜೆಯ ಮುಹೂರ್ತವನ್ನು ಬೆಳಗಾವಿಯ ಪಂಡಿತ ವಿಜಯೇಂದ್ರ ಶರ್ಮಾ ಇವರು ತೆಗೆದರು

ಬೆಳಗಾವಿ – ಗೋವಾ ವೇಸನ ವಿದ್ಯಾ ವಿಹಾರ ವಿದ್ಯಾಲಯದ ಕುಲಪತಿ ವಿಜಯೇಂದ್ರ ಶರ್ಮಾ ಇವರು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿಪೂಜೆಯ ಮುಹೂರ್ತವನ್ನು ತೆಗೆದರು. ರಾಮಮಂದಿರ ನಿರ್ಮಾಣದ ಟ್ರಸ್ಟ್‌ನ ಅಧ್ಯಕ್ಷ ಪೂ. ಕಿಶೋರಜಿ ವ್ಯಾಸ ಇವರ ಆಜ್ಞೆಯಂತೆ ಈ ಮುಹೂರ್ತವನ್ನು ತೆಗೆದಿರುವ ಮಾಹಿತಿಯನ್ನು ಬೆಳಗಾವ ಲೈವ್ ಈ ವಾರ್ತಾವಾಹಿನಿಯಲ್ಲಿ ನೀಡಿದ ಸಂದರ್ಶನದಲ್ಲಿ ಹೇಳಿದರು.
ಪೇಶ್ವೆಯವರ ಮುಖ್ಯ ನಾಯಾಧೀಶರಾದ ರಾಮಶಾಸ್ತ್ರೀ ಪ್ರಭುಣೆ ಇವರ ವಂಶಜರು ನಮ್ಮ ಗುರುಗಳಾಗಿದ್ದು ಪೂರ್ವಜರು, ಋಷಿಮುನಿಗಳು, ಸಂತರ ಕೃಪಾಶೀರ್ವಾದದಿಂದ ನನಗೆ ಈ ಮುಹೂರ್ತವನ್ನು ತೆಗೆಯಲು ಸಾಧ್ಯವಾಯಿತು. ಈ ಹಿಂದೆ ಅನೇಕ ಗೌರವಾನ್ವಿತರು, ಜನಪ್ರತಿನಿಧಿಗಳು ಹಾಗೂ ಆಡಳಿತಾಧಿಕಾರಿಗಳು ಮುಹೂರ್ತವನ್ನು ತೆಗೆಯುವ ಅವಕಾಶವನ್ನು ನೀಡಿದ್ದರು ಎಂದು ಹೇಳಿದರು.