ಕೊರೋನಾದಿಂದಾಗಿ ಮೃತಪಟ್ಟವರ ಸಂಖ್ಯೆಯಲ್ಲಿ ಭಾರತವು ಜಗತ್ತಿನ ೫ ಸ್ಥಾನದಲ್ಲಿದೆ

ನವ ದೆಹಲಿ – ಕಳೆದ ಕೆಲವು ದಿನಗಳಿಂದ ಪ್ರತಿದಿನ ೫೦ ಸಾವಿರಕ್ಕಿಂತಲೂ ಹೆಚ್ಚು ರೋಗಿಗಳು ಪತ್ತೆಯಾಗುತ್ತಿದ್ದಾರೆ. ಕಳೆದ ೨೪ ಗಂಟೆಗಳಲ್ಲಿ ದೇಶದಲ್ಲಿ ೫೫ ಸಾವಿರದ ೭೯ ಹೊಸ ರೋಗಿಗಳು ಪತ್ತೆಯಾಗಿದ್ದು ೭೭೯ ರೋಗಿಗಳು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೊರೋನಾ ಪೀಡಿತ ರೋಗಿಗಳ ಸಂಖ್ಯೆ ೧೬ ಲಕ್ಷದ ೮೭೧ ರಷ್ಟಿದ್ದರೆ, ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ೩೫ ಸಾವಿರದ ೭೪೭ ರಷ್ಟಿದೆ. ಈ ಮೂಲಕ ಕೊರೋನಾದಿಂದ ಮೃತಪಟ್ಟ ರೋಗಿಗಳ ಸಂಖ್ಯೆಯಲ್ಲಿ ಇಟಲಿಯನ್ನು ಹಿಂದಿಕ್ಕಿ ಭಾರತವು ಜಗತ್ತಿನ ೫ ನೇ ಸ್ಥಾನಕ್ಕೆ ತಲುಪಿದೆ. ಇಟಲಿಯಲ್ಲಿ ಇಲ್ಲಿಯವರೆಗೆ ಕೊರೋನಾದಿಂದ ೩೫ ಸಾವಿರದ ೧೩೨ ರೋಗಿಗಳು ಮೃತಪಟ್ಟಿದ್ದಾರೆ. ಈ ಅನುಕ್ರಮದಲ್ಲಿ ಅಮೇರಿಕಾ (೧ ಲಕ್ಷದ ೫೨ ಸಾವಿರದ ೭೦), ಬ್ರಾಝಿಲ್ (೯೧ ಸಾವಿರದ ೨೬೩), ಬ್ರಿಟನ್ (೪೬ ಸಾವಿರದ ೮೪) ಹಾಗೂ ಮೆಕ್ಸಿಕೋ (೪೬ ಸಾವಿರ) ಮತ್ತು ತದನಂತರ ಭಾರತದ ಸ್ಥಾನ ಇದೆ.
ಆರೋಗ್ಯ ಸಚಿವಾಲಯದ ಮಾಹಿತಿಗನುಸಾರ ಜೂನ್ ೩೦ ರ ತನಕ ದೇಶದಲ್ಲಿ ೫ ಲಕ್ಷ ೬೬ ಸಾವಿರದ ೮೪೦ ಇಷ್ಟು ಕೊರೋನಾ ರೋಗಿಗಳ ಸಂಖ್ಯೆ ಇತ್ತು. ಜುಲೈ ತಿಂಗಳಲ್ಲಿ ಅತೀಹೆಚ್ಚು ಸಿಕ್ಕಿದೆ. ಜುಲೈ ತಿಂಗಳಲ್ಲಿ ಸರಿಸುಮಾರು ೧೦ ಲಕ್ಷ ಹೊಸ ರೋಗಿಗಳು ಪತ್ತೆಯಾಗಿದ್ದಾರೆ.