ಬಿಜನೌರ್ (ಉತ್ತರಪ್ರದೇಶ) ಇಲ್ಲಿ ಬಕರಿ ಈದ್‌ನ ಸಮಯದಲ್ಲಿ ಹಿಂಸಾಚಾರ ಮಾಡುವ ಸಂಚನ್ನು ರೂಪಿಸಿದ ನ್ಯಾಯವಾದಿ ಜಾವೇದ ಸಿದ್ಧಕಿಯ ಬಂಧನ

ಬಿಜನೌರ್ (ಉತ್ತರಪ್ರದೇಶ) – ಬಕರಿ ಈದ್‌ನ ಸಮಯದಲ್ಲಿ ಹಿಂಸಾಚಾರ ಮಾಡುವ ಸಂಚನ್ನು ರೂಪಿಸಿದ ನ್ಯಾಯವಾದಿ ಜಾವೇದ ಸಿದ್ಧಿಕಿಯನ್ನು ಪೊಲೀಸರು ಅಲಿಗಡ್‌ದಿಂದ ಇತ್ತೀಚೆಗೆ ಬಂಧಿಸಿದ್ದಾರೆ. ಆತನಿಂದ ಒಂದು ಪಿಸ್ತೂಲು, ೧೬೨ ಮದ್ದುಗುಂಡುಗಳು ಹಾಗೂ ಕೆಲವು ಅಕ್ಷೇಪಾರ್ಹ ಕರಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಬಕರಿ ಈದ್‌ನ ಸಮಯದಲ್ಲಿ ಹಿಂಸಾಚಾರ ಮಾಡಲು ಆತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಇತರ ಜಿಹಾದಿ ಸಂಘಟನೆಗಳ ಮಾಧ್ಯಮದಿಂದ ಪ್ರಚೋದನಕಾರಿ ಕರಪತ್ರಗಳನ್ನು ಹಂಚುತ್ತಿದ್ದ. ಸಿಎಎ ಕಾಯ್ದೆಯ ಸಮಯದಲ್ಲಾದ ಹಿಂಸಾಚಾರದಲ್ಲಿ ಆತನ ಕೈವಾಡವಿತ್ತು ಎಂದು ಪೊಲೀಸರ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ.