ಮಣಿಪುರದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಮೂವರು ಸೈನಿಕರು ಹುತಾತ್ಮ

ಇಡೀ ದೇಶದಲ್ಲಿ ಭಯೋತ್ಪಾದನೆಯನ್ನು ಬಗ್ಗುಬಡಿಯಲು ಸರಕಾರವು ಕಠಿಣ ಕೃತಿ ಮಾಡುವುದು ಆವಶ್ಯಕ !

ಇಂಫಾಲ್ (ಮಣಿಪುರ) – ಮಣಿಪುರದ ಚಂದೆಲ ಜಿಲ್ಲೆಯ ಮ್ಯಾನ್ಮಾರ ಗಡಿಯ ಸಮಿಪದ ಪ್ರದೇಶದಲ್ಲಿ ಸ್ಥಳಿಯ ಪೀಪಲ್ಸ್ ಲಿಬರೇಶನ್ ಆರ್ಮಿಯ ಭಯೋತ್ಪಾದಕರು ಆಸಾಮ ರೈಫಲ್ ಸೈನಿಕರ ಮೇಲೆ ದಾಳಿ ಮಾಡಿದರು. ಇವರು ಮೊದಲು ಬಾಂಬ್ ಸ್ಪೋಟಿಸಿದರು. ನಂತರ ಗುಂಡು ಹಾರಿಸಿದರು. ಇದರಲ್ಲಿ ೩ ಸೈನಿಕರು ಹುತಾತ್ಮರಾದರೇ, ೬ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.