ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಹಿಂದೂಯೇತರರು ಪ್ರವೇಶಿಸುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ ! – ತಿರುಮಲ ತಿರುಪತಿ ದೇವಸ್ಥಾನಮ್

‘ತಿರುಮಲ ತಿರುಪತಿ ದೇವಸ್ಥಾನಮ್’ನ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿಯವರು ‘ಜಗತ್ತಿನಾದ್ಯಂತದ ಸಾವಿರಾರು ಭಕ್ತರು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ದರ್ಶನಕ್ಕಾಗಿ ಬರುತ್ತಾರೆ. ಈ ಭಕ್ತರಲ್ಲಿ ಇತರ ಧರ್ಮದವರೂ ಇರುತ್ತಾರೆ. ಆದ್ದರಿಂದ ಪ್ರತಿಯೊಬ್ಬರ ‘ಡಿಕ್ಲೆರೇಶನ್ ಆಫ್ ಫೇಥ್ ಅಂಡ್ ಬಿಲೀಫ್’ ಬರೆಯಲು ಸಾಧ್ಯವಿಲ್ಲ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಿರುವಾಗ ಹೇಳಿಕೆ ನೀಡಿದರು.

ಮೈಸರ್ಖಾನ (ಪಂಜಾಬ್) ನಲ್ಲಿರುವ ಪ್ರಾಚೀನ ಮಾತಾ ದೇವಸ್ಥಾನದಲ್ಲಿ ಮತಾಂಧರಿಂದ ನಮಾಜು ಪಠಣ

ಮೈಸರ್ಖಾನಾದಲ್ಲಿನ ಪ್ರಾಚೀನ ಮಾತಾ ದೇವಸ್ಥಾನ (ಮಾಲ್ವ ಪ್ರಾಂತ್ ಸಭಾ ಮತ್ತು ಸಂಸ್ಕೃತ ಕಾಲೇಜು ಒಳಾಂಗಣ)ದಲ್ಲಿ ಕೆಲವು ದಿನಗಳ ಹಿಂದೆ ಗ್ರಾಮದ ೨೫೦ ರಿಂದ ೩೦೦ ಮತಾಂಧರು ದೊಡ್ಡ ಸಮಾರಂಭವನ್ನು ಆಯೋಜಿಸುತ್ತಾ ನಮಾಜು ಪಠಣ ಮಾಡಿದರು.

ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ

ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕಾಗಿ ಡೆಮಾಕ್ರಟಿಕ್ ಪಕ್ಷವು ೧೪ ಭಾರತೀಯ ಭಾಷೆಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡಿದೆ. ಈ ಎಲ್ಲಾ ಜಾಹೀರಾತುಗಳು ಡಿಜಿಟಲ್ ರೂಪದಲ್ಲಿವೆ. ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯು ನವೆಂಬರ್ ೩ ರಂದು ನಡೆಯಲಿದ್ದು ಜೊ ಬಾಯಡೆನ್ ಇವರು ಡೆಮಾಕ್ರಟಿಕ್ ಪಕ್ಷದ ಹಾಗೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಆಂಧ್ರಪ್ರದೇಶದಲ್ಲಿ ದೇವಸ್ಥಾನಗಳ ಮೇಲೆ ಹೆಚ್ಚುತ್ತಿರುವ ದಾಳಿ, ಟ್ವಿಟರ್‌ನಲ್ಲಿ ಧರ್ಮಾಭಿಮಾನಿಗಳಿಂದ `#AndhraTemplesInDanger’ ಟ್ರೆಂಡ್

ಕಳೆದ ಕೆಲವು ದಿನಗಳಲ್ಲಿ ಆಂಧ್ರಪ್ರದೇಶದ ದೇವಸ್ಥಾನಗಳ ಮೇಲಾಗುವ ದಾಳಿಯ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ವಿಜಯವಾಡಾದ ಶ್ರೀ ಕನಕದುರ್ಗ ದೇವಸ್ಥಾನದಿಂದ ಬೆಳ್ಳಿಯ ೩ ಸಿಂಹಗಳ ವಿಗ್ರಹಗಳನ್ನು ಕಳವು ಮಾಡಲಾಗಿದ್ದು, ಗೋದಾವರಿ ಜಿಲ್ಲೆಯ ಅಂತರ್ವೇದಿಯಲ್ಲಿರುವ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಪ್ರಾಚೀನ ರಥವನ್ನು ಸುಡಲಾಯಿತು.

ನೇಪಾಳದ ಹಿತಕ್ಕಾಗಿ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಿ ! – ಕಮಲ ಥಾಪಾ, ಮಾಜಿ ಉಪ ಪ್ರಧಾನಿ

ನೇಪಾಳದ ಹಿತದೃಷ್ಟಿಯಿಂದ ನೇಪಾಳವನ್ನು ಮತ್ತೊಮ್ಮೆ ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು, ಎಂದು ನೇಪಾಳದ ‘ರಾಷ್ಟ್ರೀಯ ಪ್ರಜಾತಂತ್ರ ಪಕ್ಷ’ ದ ನಾಯಕ ಮತ್ತು ನೇಪಾಳದ ಮಾಜಿ ಉಪ ಪ್ರಧಾನಿ ಕಮಲ್ ಥಾಪಾ ಇವರು ಸೆಪ್ಟೆಂಬರ್ ೧೯ ರಂದು ನಡೆದ ‘ಸಂವಿಧಾನ ದಿನಾಚರಣೆಯ’ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.

ಕೊರೋನಾದ ಎರಡನೇ ಅಲೆಯ ಸಂಕೇತದಿಂದ ಬ್ರಿಟನ್‌ನಲ್ಲಿ ಮತ್ತೆ ಸಂಚಾರ ನಿಷೇಧ ಜಾರಿಗೊಳಿಸಲಾಗಿದೆ

ಕೊರೋನಾ ಸೋಂಕು ತಡೆಗಟ್ಟದಿದ್ದರೆ, ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು. ನಾವು ದೊಡ್ಡ ಪ್ರಮಾಣದ ನಿರ್ಬಂಧಗಳನ್ನು ವಿಧಿಸುವ ಹಕ್ಕನ್ನು ಕಾಯ್ದಿರಿಸಿದ್ದೇವೆ. ಜೀವನಶೈಲಿಯ ಬದಲಾವಣೆ ಮತ್ತು ಹೊಸ ಕ್ರಮಗಳನ್ನು ಜಾರಿಗೊಳಿಸಿದರೆ, ಕಟ್ಟುನಿಟ್ಟಾದ ನಿರ್ಬಂಧ ಹೇರುವ ಸನ್ನಿವೇ? ಬರುವುದಿಲ್ಲ. ಇದನ್ನು ‘ಅಸೋಸಿಯೇಟೆಡ್ ಪ್ರೆಸ್’ ವರದಿ ಮಾಡಿದೆ.

ಡೋಕ್ಲಾಮ್‌ನ ನಿಯಂತ್ರಣರೇಖೆಯ ಮೇಲೆ ಚೀನಾದಿಂದ ೩ ವಿಮಾನ ನಿಲ್ದಾಣಗಳು ಮತ್ತು ವಾಯುದಳದ ೫ ಸಂರಕ್ಷಣಾ ಕೇಂದ್ರ ನಿರ್ಮಾಣ

೨೦೧೭ ರಲ್ಲಿ ಡೋಕ್ಲಾಮ್‌ನಲ್ಲಿ ಚೀನಾ ಮತ್ತು ಭಾರತದ ಸೈನ್ಯಗಳ ಮುಖಾಮುಖಿಯಾಗಿತ್ತು. ಅಂದಿನಿಂದ ಚೀನಾವು ಪ್ರತ್ಯಕ್ಷವಾಗಿ ನಿಯಂತ್ರಣ ರೇಖೆಯ ಬಳಿ ಮೂರು ವಿಮಾನ ನಿಲ್ದಾಣಗಳು, ವಾಯುಪಡೆಯ ೫ ಶಾಶ್ವತ ರಕ್ಷಣಾ ನೆಲೆಗಳು ಮತ್ತು ೫ ಹೆಲಿಪೋರ್ಟ್‌ಗಳು (ಹೆಲಿಕಾಪ್ಟರ್‌ಗಳನ್ನು ಇಳಿಸಲು ನಿರ್ಮಿಸಿದ ಸ್ಥಳ) ಸೇರಿದಂತೆ ಕನಿಷ್ಠ ೧೩ ಹೊಸ ಮಿಲಿಟರಿ ನೆಲೆಗಳನ್ನು ನಿರ್ಮಿಸಲು ಪ್ರಾರಂಭಿಸಿದೆ.

ನಿಮಗೆ ಕಾರ್ಯಕ್ರಮ ಇಷ್ಟವಾಗದಿದ್ದರೆ, ಕಾದಂಬರಿಯನ್ನು ಓದಿ ! – ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ’ಕ್ಕೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ

ನಿಮಗೆ ಕಾರ್ಯಕ್ರಮ ಇಷ್ಟವಾಗದಿದ್ದರೆ, ಅದನ್ನು ವೀಕ್ಷಿಸಬೇಡಿ. ಯಾವುದಾದರೂ ಕಾದಂಬರಿಯನ್ನು ಓದಿ, ಎಂದು ಹೇಳುತ್ತಾ ಸರ್ವೋಚ್ಚ ನ್ಯಾಯಾಲಯವು ‘ಸುದರ್ಶನ್ ನ್ಯೂಸ್’ನ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮದಲ್ಲಿನ ಅರ್ಜಿಯ ಆಲಿಕೆಯ ಸಮಯದಲ್ಲಿ ‘ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಪೀಠ’ದ ಪರ ವಕೀಲರಿಗೆ ಚಾಟಿ ಬೀಸಿದೆ.

ಜಗತ್ತನ್ನು ಕರೋನಾದ ಕಂದಕಕ್ಕೆ ತಳ್ಳಿರುವ ವುಹಾನ್‌ನಲ್ಲಿನ ಎಲ್ಲ ವಹಿವಾಟುಗಳು ಮೊದಲಿನಂತೆಯೇ ಮುಂದುವರೆದಿದೆ

ಜಗತ್ತನ್ನು ಕರೋನಾದ ಕಂದಕಕ್ಕೆ ತಳ್ಳಿರುವ ಚೀನಾದ ನಗರವಾದ ವುಹಾನ್‌ನಲ್ಲಿನ ಎಲ್ಲಾ ವಹಿವಾಟುಗಳು ಸಾಮಾನ್ಯ ಸ್ಥಿತಿಗೆ ಮರಳಿದೆ. ವುಹಾನ್‌ನಲ್ಲಿ ಶಾಲೆಗಳು, ಕಾಲೇಜುಗಳು ಮತ್ತು ‘ನೈಟ್‌ಕ್ಲಬ್’ಗಳೂ ಸಹ ಆರಂಭವಾಗಿವೆ. ವಿಶೇಷವೆಂದರೆ ಇಲ್ಲಿ ಯಾವುದೇ ನಾಗರಿಕರು ‘ಮಾಸ್ಕ್’ ಧರಿಸುವುದಿಲ್ಲ ಮತ್ತು ಸಾಮಾಜಿಕ ಅಂತರವನ್ನೂ ಪಾಲಿಸುತ್ತಿಲ್ಲ.

ಯಾವುದನ್ನು ‘ತಾಜ್ ಮಹಲ್’ ಎಂದು ಕರೆಯುತ್ತಾರೆ ಅದು ಶಿವನ ದೇವಸ್ಥಾನವಾದ ‘ತೇಜೋಮಹಾಲಯ’ವಾಗಿದೆ ! – ಪುರಿ ಪೀಠದ ಶಂಕರಾಚಾರ್ಯ ನಿಶ್ಚಲಾನಂದ ಸರಸ್ವತಿ

ಇತ್ತೀಚಿನ ದಿನಗಳಲ್ಲಿ ನೀವು ಯಾವುದನ್ನು ‘ತಾಜ್ ಮಹಲ್’ ಎಂದೂ ಕರೆಯುತ್ತೀರಿ, ಅದರ ಹಿಂದಿನ ಹೆಸರು ‘ತೇಜೋಮಹಾಲಯ’ವಾಗಿದೆ. ಹಿಂದೆ ಅಲ್ಲಿ ಶಿವನ ದೇವಸ್ಥಾನವಿತ್ತು. ಅಲ್ಲಿ ಶಿವನನ್ನು ಸ್ಥಾಪಿಸಲಾಗಿತ್ತು. ಜೈಪುರದ ರಾಜಮನೆತನದವರಲ್ಲಿ ಇದರ ಸಂಪೂರ್ಣ ಇತಿಹಾಸವು ಸುರಕ್ಷಿತವಾಗಿದೆ.