ಡೋಕ್ಲಾಮ್‌ನ ನಿಯಂತ್ರಣರೇಖೆಯ ಮೇಲೆ ಚೀನಾದಿಂದ ೩ ವಿಮಾನ ನಿಲ್ದಾಣಗಳು ಮತ್ತು ವಾಯುದಳದ ೫ ಸಂರಕ್ಷಣಾ ಕೇಂದ್ರ ನಿರ್ಮಾಣ

ಚಿನಾದ ಯುದ್ಧ ಸಿದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಭಾರತವು ಆಕ್ರಮಣಕಾರಿ ನಿಲುವನ್ನು ಅವಲಂಬಿಸುವುದು ಅಗತ್ಯವಿದೆ !

ಗುವಾಹಟಿ (ಅಸ್ಸಾಂ) – ೨೦೧೭ ರಲ್ಲಿ ಡೋಕ್ಲಾಮ್‌ನಲ್ಲಿ ಚೀನಾ ಮತ್ತು ಭಾರತದ ಸೈನ್ಯಗಳ ಮುಖಾಮುಖಿಯಾಗಿತ್ತು. ಅಂದಿನಿಂದ ಚೀನಾವು ಪ್ರತ್ಯಕ್ಷವಾಗಿ ನಿಯಂತ್ರಣ ರೇಖೆಯ ಬಳಿ ಮೂರು ವಿಮಾನ ನಿಲ್ದಾಣಗಳು, ವಾಯುಪಡೆಯ ೫ ಶಾಶ್ವತ ರಕ್ಷಣಾ ನೆಲೆಗಳು ಮತ್ತು ೫ ಹೆಲಿಪೋರ್ಟ್‌ಗಳು (ಹೆಲಿಕಾಪ್ಟರ್‌ಗಳನ್ನು ಇಳಿಸಲು ನಿರ್ಮಿಸಿದ ಸ್ಥಳ) ಸೇರಿದಂತೆ ಕನಿಷ್ಠ ೧೩ ಹೊಸ ಮಿಲಿಟರಿ ನೆಲೆಗಳನ್ನು ನಿರ್ಮಿಸಲು ಪ್ರಾರಂಭಿಸಿದೆ. ಡೋಕ್ಲಾಮ್ ಸಂಘರ್ಷದ ನಂತರದ ಕಳೆದ ಮೂರು ವರ್ಷಗಳಲ್ಲಿ ಚೀನಾ ವಿಮಾನ ನಿಲ್ದಾಣಗಳು ಮತ್ತು ಹೆಲಿಪೋರ್ಟ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ, ಎಂದು ಜಾಗತಿಕ ಭದ್ರತಾ ಸಲಹಾ ಸಂಸ್ಥೆಯಾದ ‘ಸ್ಟ್ರಾಟ್‌ಫೋರ್’ ವರದಿಯಲ್ಲಿ ಹೇಳಿದೆ. ಭದ್ರತಾ ತಜ್ಞ ಸಿಮ್ ಟ್ಯಾಕ್ ಸಿದ್ಧಪಡಿಸಿದು ಈ ವರದಿಯನ್ನು ಸೆಪ್ಟೆಂಬರ್ ೨೨ ರಂದು ಬಿಡುಗಡೆ ಮಾಡಲಾಯಿತು.

ಈ ವರದಿಯಲ್ಲಿ,

೧. ಪೂರ್ವ ಲಡಾಖ್‌ನಲ್ಲಿ ಮೇ ಪೂರ್ವಾರ್ಧದಲ್ಲಿ ಭಾರತ ಮತ್ತು ಚೀನಾದ ಸೈನ್ಯಗಳು ಪರಸ್ಪರ ಮುಖಾಮುಖಿಯಾಗಿ ನಿಂತಿದ್ದವು. ನಂತರ ೫ ರ ಪೈಕಿ ೪ ಹೆಲಿಪೋರ್ಟ್‌ಗಳ ನಿರ್ಮಾಣ ಪ್ರಾರಂಭಿಸಿತು.

೨. ಭವಿಷ್ಯದಲ್ಲಿ ಚೀನಾ ತನ್ನ ಸೈನ್ಯ ಸಾಮರ್ಥ್ಯಗಳನ್ನು ಹೆಚ್ಚಿಸಲು ರಕ್ಷಣಾ ನೆಲೆಗಳನ್ನು ನಿರ್ಮಿಸಲು ಪ್ರಾರಂಭಿಸಿದೆ ಹಾಗೂ ಇದು ದೀರ್ಘಕಾಲೀನ ಪ್ರಾದೇಶಿಕ ಉದ್ವಿಗ್ನತೆಗೆ ಕಾರಣವಾಗಲಿದೆ ಎಂದು ಹೇಳಲಾಗಿದೆ.