ನಿಮಗೆ ಕಾರ್ಯಕ್ರಮ ಇಷ್ಟವಾಗದಿದ್ದರೆ, ಕಾದಂಬರಿಯನ್ನು ಓದಿ ! – ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ’ಕ್ಕೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ

‘ಸುದರ್ಶನ್ ನ್ಯೂಸ್’ನಲ್ಲಿ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮದ ಪ್ರಕರಣ

ನವ ದೆಹಲಿ – ನಿಮಗೆ ಕಾರ್ಯಕ್ರಮ ಇಷ್ಟವಾಗದಿದ್ದರೆ, ಅದನ್ನು ವೀಕ್ಷಿಸಬೇಡಿ. ಯಾವುದಾದರೂ ಕಾದಂಬರಿಯನ್ನು ಓದಿ, ಎಂದು ಹೇಳುತ್ತಾ ಸರ್ವೋಚ್ಚ ನ್ಯಾಯಾಲಯವು ‘ಸುದರ್ಶನ್ ನ್ಯೂಸ್’ನ ‘ಯು.ಪಿ.ಎಸ್.ಸಿ. ಜಿಹಾದ್’ ಕಾರ್ಯಕ್ರಮದಲ್ಲಿನ ಅರ್ಜಿಯ ಆಲಿಕೆಯ ಸಮಯದಲ್ಲಿ ‘ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಪೀಠ’ದ ಪರ ವಕೀಲರಿಗೆ ಚಾಟಿ ಬೀಸಿದೆ. ಜಾಮಿಯಾ ಪರ ವಕಾಲತ್ತು ಮಾಡಿದ ವಕೀಲ ಶಾದಾನ್ ಫರಸತ್ ಇವರು, ‘ಜನರನ್ನು ಮುಸಲ್ಮಾನರ ವಿರುದ್ಧ ಪ್ರಚೋದಿಸಲಾಗುತ್ತಿದೆ, ಅವರನ್ನು ‘ಅಸ್ತನಿತಲೆ ನಿಖಾರೆ’ ಎಂದೂ ಕರೆಯಲಾಗುತ್ತದೆ’ ಎಂದು ಹೇಳಿದರು. ಈ ಬಗ್ಗೆ ನ್ಯಾಯಾಲಯವು ಈ ಮೇಲಿನ ಶಬ್ದಗಳಲ್ಲಿ ಚಾಟಿ ಬೀಸಿದೆ.

೧. ಈ ಸಮಯದಲ್ಲಿ ನ್ಯಾಯಾಲಯವು ಸುದರ್ಶನ್ ನ್ಯೂಸ್‌ನ ಪ್ರತಿಜ್ಞಾಪತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ, ‘ನೀವು ಕಾರ್ಯಕ್ರಮದಲ್ಲಿ ಏನು ಬದಲಾಯಿಸುವಿರಿ ?, ಎಂದು ನಾವು ಕೇಳಿದ್ದೆವು. ಯಾವ ಸುದ್ದಿವಾಹಿನಿಯು ಏನು ತೋರಿಸುತ್ತದೆ, ಎಂಬುದನ್ನು ಕೇಳಿರಲಿಲ್ಲ’ ಎಂದು ಹೇಳಿತು.

೨. ಸುದರ್ಶನ್ ನ್ಯೂಸ್‌ನ ನ್ಯಾಯವಾದಿಗಳಾದ ವಿಷ್ಣು ಶಂಕರ ಜೈನ್ ಇವರು ೨೦೦೮ ರಲ್ಲಿ ಎನ್.ಡಿ.ಟಿ.ವಿ.’ಯು ‘ಹಿಂದೂ ಭಯೋತ್ಪಾದನೆ’ ಮತ್ತು ‘ಕೇಸರಿ ಭಯೋತ್ಪಾದನೆ’ ಪದಗಳನ್ನು ಬಳಸಿತ್ತು; ಆದರೆ, ಅದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’, ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಈ ಬಗ್ಗೆ ನ್ಯಾಯಾಲಯವು ಮೇಲಿನ ಹೇಳಿಕೆ ನೀಡಿದೆ.

೩. ‘ನಾವು ಪ್ರಸಾರಕ್ಕಾಗಿ ಕಾರ್ಯಕ್ರಮದ ಸಂಹಿತೆಯ ಪಾಲನೆಯನ್ನು ಮಾಡುವೆವು’, ಎಂದು ಹೇಳುತ್ತಾ ‘ಯು.ಪಿ.ಎಸ್.ಸಿ. ಜಿಹಾದ್’ನ ಪ್ರಸಾರ ಮಾಡಲು ಅನುಮತಿ ಕೋರಿದೆ. ಈ ಸಮಯದಲ್ಲಿ ನ್ಯಾಯಾಲಯವು ಕಾರ್ಯಕ್ರಮದ ಎಲ್ಲ ಭಾಗಗಳನ್ನು ವೀಕ್ಷಿಸುವ ಮನವಿಯನ್ನು ತಿರಸ್ಕರಿಸಿತು. ನ್ಯಾಯಾಲಯವು, ‘೭೦೦ ಪುಟಗಳ ಪುಸ್ತಕದ ವಿರುದ್ಧ ಅರ್ಜಿಯಿದ್ದರೆ, ನ್ಯಾಯಾಧೀಶರು ಪೂರ್ಣ ಪುಸ್ತಕವನ್ನು ಓದಬೇಕು’ ಎಂದು ಯುಕ್ತಿವಾದವನ್ನು ನ್ಯಾಯವಾದಿಗಳು ವಾದಿಸಲು ಸಾಧ್ಯವಿಲ್ಲ’ ಎಂದು ಹೇಳಿದೆ.

೪. ಸುದರ್ಶನ್ ನ್ಯೂಸ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರತಿಜ್ಞಾಪತ್ರದಲ್ಲಿ, ವೆಬ್ ಆಧಾರಿತ ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸುವ ಅವಶ್ಯಕತೆಯಿದೆ ಎಂದು ಹೇಳಿದೆ. ಅದರಲ್ಲಿ ವೆಬ್ ನಿಯತಕಾಲಿಕೆಗಳು, ವೆಬ್ ಚಾನೆಲ್‌ಗಳು-ಪತ್ರಿಕೆಗಳನ್ನು ಸಹ ಒಳಗೊಂಡಿದೆ. ಡಿಜಿಟಲ್ ಮೀಡಿಯಾ ‘ಸ್ಪೆಕ್ಟ್ರಮ್’ ಮತ್ತು ಇಂಟರ್‌ನೆಟ್ ಅನ್ನು ಬಳಸಲಾಗುತ್ತದೆ. ಅದು ಸಾರ್ವಜನಿಕ ಆಸ್ತಿಯಾಗಿದೆ. ಪ್ರಸ್ತುತ ಮೀಡಿಯಾ ವಿಸ್ತರಿಸಿದೆ. ಅನಗತ್ಯ ವೀಡಿಯೊಗಳು ಮತ್ತು ದಾರಿತಪ್ಪಿಸುವ ಸುದ್ದಿಗಳನ್ನು ತೋರಿಸಲಾಗುತ್ತಿದೆ, ಇದು ಜನರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಾರ್ಗಸೂಚಿಗಳು ಮತ್ತು ನಿಯಮಗಳು ಹಾಕುವುದು ಅಗತ್ಯವಿದೆ ಎಂದು ಹೇಳಿದೆ.

‘ಆಪ್‌ಇಂಡಿಯಾ’, ‘ಇಂಡಿಕ್ ಕಲೆಕ್ಟಿವ್ ಟ್ರಸ್ಟ್’ ಮತ್ತು ‘ಅಪ್‌ವರ್ಡ್’ನಿಂದ ಮಧ್ಯಸ್ಥಿಕೆ ಅರ್ಜಿ ಸಲ್ಲಿಸಿದೆ

“ಯು.ಪಿ.ಎಸ್.ಸಿ. ಜಿಹಾದ್’ನ ಪ್ರಸಾರದ ಮೇಲಿನ ತಡೆಹಿಡಿಯುವ ಬಗ್ಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಅರ್ಜಿಯಲ್ಲಿ ‘ಆಪ್‌ಇಂಡಿಯಾ’, ‘ಇಂಡಿಕ್ ಕಲೆಕ್ಟೀವ್ ಟ್ರಸ್ಟ’ ಹಾಗೂ ‘ಅಪ್‌ವರ್ಡ್’ ಇವರು ಮಧ್ಯಸ್ಥಿಕೆಗಾಗಿ ಅರ್ಜಿಯನ್ನು ಸಲ್ಲಿಸಿದೆ.