‘ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಭಾರತವು ಪಾಕಿಸ್ತಾನದೊಂದಿಗೂ ಚರ್ಚಿಸಬೇಕು !'(ಅಂತೆ) – ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರಕ್ಕೆ ಪಾಕಿಸ್ತಾನದೊಂದಿಗೆ ಏನು ಸಂಬಂಧವಿದೆ ? ಇಂತಹ ಬೇಡಿಕೆಗಳನ್ನು ಮಾಡುವ ಮೆಹಬೂಬಾ ಮುಫ್ತಿಯಂತಹ ಪಾಕಿಸ್ತಾನಪ್ರಿಯರನ್ನು ಭಾರತದಿಂದ ಗಡಿಪಾರು ಮಾಡಿ ಪಾಕಿಸ್ತಾನಕ್ಕೆ ಕಳುಹಿಸಬೇಕು. ಅಲ್ಲದೆ, ದೇಶದ್ರೋಹೀ ಕೃತ್ಯ ಎಸಗಿದ ಮೇರೆಗೆ ಅವರ ಪಕ್ಷವನ್ನು ನಿಷೇಧಿಸಬೇಕು !

ವಲಸಾಡ (ಗುಜರಾತ) ನಲ್ಲಿ, ಕಟುಕರಿಂದ ಗೋರಕ್ಷಕನ ಮೇಲೆ ವಾಹನ ಓಡಿಸಿ ಹತ್ಯೆ !

ಧರ್ಮಪುರ-ವಲಸಾಡ ರಸ್ತೆಯಲ್ಲಿ ಟೆಂಪೊದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಕಟುಕರು ೨೯ ವರ್ಷದ ಹಾರ್ದಿಕ ಕಂಸಾರಾ ಇವರ ಮೇಲೆ ವಾಹನ ಓಡಿಸಿ ಹತ್ಯೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ೧೦ ಜನರನ್ನು ಪೊಲೀಸರು ಬಂಧಿಸಿದ್ದಾರೆ. ಹಾರ್ದಿಕ ಕಂಸಾರಾ ಇವರು ಅಕ್ರಮವಾಗಿ ಗೋಸಾಗಾಟವನ್ನು ತಡೆಯಲು ಯತ್ನಿಸುತ್ತಿದ್ದಾಗ ಅವರನ್ನು ಹತ್ಯೆ ಮಾಡಲಾಯಿತು.

ಕೊರೊನಾ ಬಿಕ್ಕಟ್ಟಿನಿಂದಾಗಿ ಈ ವರ್ಷ ಅಮರನಾಥ ಯಾತ್ರೆ ರದ್ದು !

ಕೊರೊನಾದ ಎರಡನೇ ಅಲೆಯ ಪರಿಣಾಮದಿಂದ ಈ ವರ್ಷವೂ ಕಾಶ್ಮೀರದ ಅಮರನಾಥ ಯಾತ್ರೆ ರದ್ದುಗೊಳಿಸಲು ನಿರ್ಧಾರವನ್ನು ಉಪರಾಜ್ಯಪಾಲ ಮನೋಜ ಸಿನ್ಹಾ ಇವರು ತೆಗೆದುಕೊಂಡಿದ್ದಾರೆ. ‘ಜನರ ಆರೋಗ್ಯಕ್ಕೆ ಆದ್ಯತೆ ನೀಡಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’, ಎಂದು ಸಿನ್ಹಾ ರವರು ಹೇಳಿದರು

ಶ್ರೀ ರಾಮ ಮಂದಿರ ಹೆಸರಿನಲ್ಲಿ ನಕಲಿ ಜಾಲತಾಣವನ್ನು ತಯಾರಿಸಿ ಅದರಿಂದ ಲಕ್ಷಗಟ್ಟಲೆ ದೇಣಿಗೆ(ಚಂದಾ)ಯನ್ನು ಸಂಗ್ರಹಿಸಿದ ಐವರ ಬಂಧನ

ಅಯೋಧ್ಯೆಯ ಶ್ರೀ ರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ರಾಮ ಮಂದಿರಕ್ಕಾಗಿ ನಕಲಿ ಜಾಲತಾಣವನ್ನು ನಿರ್ಮಿಸಿ ದೇಣಿಗೆಯನ್ನು ಸಂಗ್ರಹಿಸಿದ ಐದು ಜನರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಅವರು ರಾಮಭಕ್ತರಿಂದ ಈ ಜಾಲತಾಣದ ಮಾಧ್ಯಮದಿಂದ ಲಕ್ಷಾಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ವಲಸಾಡ (ಗುಜರಾತ) ನಲ್ಲಿ, ಜೈನ ಹುಡುಗಿಯನ್ನು ಪ್ರೀತಿಯ ಬಲೆಗೆ ಬೀಳಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ ವಿವಾಹಿತ ಮತಾಂಧ !

೧೯ ವರ್ಷದ ಜೈನ ಧರ್ಮೀಯ ಯುವತಿಯನ್ನು ಪ್ರೀತಿಯ ಜಾಲದಲ್ಲಿ ಸಿಲುಕಿಸಿ ನಂತರ ಅಪಹರಿಸಿ ಆಕೆಯನ್ನು ಲೈಂಗಿಕವಾಗಿ ಶೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಮ್ರಾನ್ ಅನ್ಸಾರಿಯನ್ನು ಬಂಧಿಸಿದ್ದಾರೆ.

ಹಿಂದೂ ಯುವಕನನ್ನು ಮದುವೆಯಾಗಿದ್ದರಿಂದ ಮುಸಲ್ಮಾನ ಹುಡುಗಿಗೆ ಸಂಬಂಧಿಕರಿಂದ ಥಳಿತ !

ರರಿಯಾ ಗ್ರಾಮದಲ್ಲಿ ಹಿಂದೂ ಯುವಕನನ್ನು ವಿವಾಹವಾಗಿದ್ದ ಮುಸಲ್ಮಾನ ಯುವತಿಯನ್ನು ಸಂಬಂಧಿಕರು ಥಳಿಸಿದ್ದಾರೆ. ಜೊತೆಗೆ ಅವಳ ತಲೆಯ ಕೂದಲನ್ನು ಸಂಪೂರ್ಣವಾಗಿ ಕತ್ತರಿಸಿ ಅವಳನ್ನು ಸಂಪೂರ್ಣ ಹಳ್ಳಿಯಲ್ಲಿ ಮೆರವಣಿಗೆಯನ್ನು ತೆಗೆಯಲಾಯಿತು. ಈ ಮಾಹಿತಿ ದೊರೆತ ಕೂಡಲೇ ಪೊಲೀಸರು ಗ್ರಾಮಕ್ಕೆ ತೆರಳಿ ಬಾಲಕಿಯನ್ನು ಬಿಡುಗಡೆ ಮಾಡಿ ೮ ಜನರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ ಮತ್ತು ೫ ಜನರನ್ನು ಬಂಧಿಸಲಾಗಿದೆ.

‘ಓಂ’ ಎಂದು ಉಚ್ಚರಿಸಿದರೆ ಯೋಗ ಶಕ್ತಿಶಾಲಿ ಆಗುವುದಿಲ್ಲ !'(ವಂತೆ) – ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಗ್ವಿ

‘ಓಂ’ ಉಚ್ಚರಿಸಿದರೆ ಯೋಗವು ಶಕ್ತಿಶಾಲಿ ಆಗುವುದಿಲ್ಲ ಮತ್ತು ಅಲ್ಲಾಹನ ಹೆಸರನ್ನು ತೆಗೆದುಕೊಳ್ಳುವುದರಿಂದ ಯೋಗದ ಶಕ್ತಿ ಕಡಿಮೆ ಆಗುವುದಿಲ್ಲ’, ಎಂದು ಕಾಂಗ್ರೆಸ್ ಮುಖಂಡ ಮತ್ತು ನ್ಯಾಯವಾದಿ ಅಭಿಷೇಕ ಮನು ಸಿಂಗ್ವಿ ಟ್ವೀಟ್ ಮಾಡಿದ್ದಾರೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಯೋಗವೊಂದೇ ಆಶಾಕಿರಣ ! – ಪ್ರಧಾನಿ ನರೇಂದ್ರ ಮೋದಿ

ಕೊರೋನಾದ ಈ ಕಷ್ಟದ ಸಮಯದಲ್ಲಿ ಜನರಲ್ಲಿ ಯೋಗದ ಬಗ್ಗೆ ಆಸಕ್ತಿ ಹುಟ್ಟಿದೆ. ಆದ್ದರಿಂದ ಜನರಲ್ಲಿ ಕೊರೊನಾದ ವಿರುದ್ಧ ಹೋರಾಡುವ ವಿಶ್ವಾಸವನ್ನು ಹೆಚ್ಚಿಸಿದೆ. ಯೋಗದ ಬಗ್ಗೆ ಪ್ರಪಂಚದಾದ್ಯಂತ ಸಂಶೋಧನೆ ನಡೆಯುತ್ತಿದೆ. ರೋಗನಿರೋಧಕ ವ್ಯವಸ್ಥೆಯ ಮೇಲೆ ಯೋಗದಿಂದಾಗುವ ಸಕಾರಾತ್ಮಕ ಪರಿಣಾಮಗಳ ಬಗ್ಗೆಯೂ ಸಂಶೋಧನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಿವಾನ್ (ಬಿಹಾರ)ನಲ್ಲಿ ಮಸೀದಿಯಲ್ಲಿ ಸ್ಫೋಟಗೊಂಡ ಬಾಂಬ್‍ನಿಂದ ಇಬ್ಬರಿಗೆ ಗಾಯ !

ಜುಡಕನ್ ಗ್ರಾಮದ ಮಸೀದಿಯ ಹಿಂದೆ ನಡೆದ ಬಾಂಬ್ ಸ್ಫೋಟದಲ್ಲಿ ತಂದೆ ಮತ್ತು ಮಗ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿನೋದ್ ಮಾಂಝಿ ಮತ್ತು ಅವರ ೩ ವರ್ಷದ ಮಗ ಸತ್ಯಂ ಕುಮಾರ್ ಎಂದು ಗುರುತಿಸಲಾಗಿದೆ. ಸ್ಫೋಟದ ಶಬ್ದದಿಂದ ಗ್ರಾಮಸ್ಥರು ಇಲ್ಲಿ ಜಮಾಯಿಸಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಯುರ್ವೇದ ಔಷಧಿಗಳಿಂದ ೭ ದಿನಗಳಲ್ಲಿ ಗುಣಮುಖರಾಗುತ್ತಿರುವ ಕೊರೋನಾ ರೋಗಿಗಳು ! – ಸಂಶೋಧಕರ ಸಂಶೋಧನೆ

ಈ ತಂಡ ನಡೆಸಿದ ತನಿಖೆಯಲ್ಲಿ, ‘ಆಯುಷ್ – 64’ ಎಂಬ ಔಷಧವು ಕೊರೋನಾದ ಪ್ರಾಥಮಿಕ ಲಕ್ಷಣಗಳನ್ನು ಹೊಂದಿರುವವರ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಈ ಔಷಧಿ ಪ್ರಾಥಮಿಕ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ೭ ದಿನಗಳಲ್ಲಿ ಗುಣಪಡಿಸಿತು. ಈ ನಿಟ್ಟಿನಲ್ಲಿ ಈವರೆಗೆ ೧೨೨ ರೋಗಿಗಳನ್ನು ಅಧ್ಯಯನ ಮಾಡಲಾಗಿದೆ.