ಕೊರೊನಾ ಬಿಕ್ಕಟ್ಟಿನಿಂದಾಗಿ ಈ ವರ್ಷ ಅಮರನಾಥ ಯಾತ್ರೆ ರದ್ದು !

ಯಾತ್ರೆ ರದ್ದಾದರೂ ಶಿವ ಭಕ್ತರು ಮನಸ್ಸಿನಲ್ಲಿಯೇ ಅಮರನಾಥನ ದರ್ಶನ ಪಡೆಯಬೇಕು ಮತ್ತು ನಾಮಜಪ ಮಾಡುತ್ತಾ ಸಾಧನೆ ಮಾಡಬೇಕು !

ಜಮ್ಮು – ಕೊರೊನಾದ ಎರಡನೇ ಅಲೆಯ ಪರಿಣಾಮದಿಂದ ಈ ವರ್ಷವೂ ಕಾಶ್ಮೀರದ ಅಮರನಾಥ ಯಾತ್ರೆ ರದ್ದುಗೊಳಿಸಲು ನಿರ್ಧಾರವನ್ನು ಉಪರಾಜ್ಯಪಾಲ ಮನೋಜ ಸಿನ್ಹಾ ಇವರು ತೆಗೆದುಕೊಂಡಿದ್ದಾರೆ. ‘ಜನರ ಆರೋಗ್ಯಕ್ಕೆ ಆದ್ಯತೆ ನೀಡಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’, ಎಂದು ಸಿನ್ಹಾ ರವರು ಹೇಳಿದರು. ಕಳೆದ ವರ್ಷದಂತೆ, ಈ ವರ್ಷವೂ ಸಹ, ಕೇವಲ ಛಡಿ ಯಾತ್ರೆ ನಡೆಸಿ ಅಮರನಾಥರ ಸಾಂಪ್ರದಾಯಿಕ ಪೂಜೆಯನ್ನು ಮಾಡಲಾಗುವುದು. ಅಲ್ಲದೆ, ಶ್ರೀ ಅಮರನಾಥ ಆರತಿ ನೇರ ಪ್ರಸಾರ ಮಾಡಲಾಗುವುದು. ಯಾತ್ರೆಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಮುಂಚಿತವಾಗಿ, ಶ್ರೀ ಅಮರನಾಥ ಶ್ರೈನ್ ಬೋರ್ಡ್ ಜೂನ್ ೨೮ ರಿಂದ ಯಾತ್ರೆಯನ್ನು ಪ್ರಾರಂಭಿಸಲು ನಿರ್ಧರಿಸಿತ್ತು.