‘ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಭಾರತವು ಪಾಕಿಸ್ತಾನದೊಂದಿಗೂ ಚರ್ಚಿಸಬೇಕು !'(ಅಂತೆ) – ಮೆಹಬೂಬಾ ಮುಫ್ತಿ

ಜಮ್ಮು ಮತ್ತು ಕಾಶ್ಮೀರಕ್ಕೆ ಪಾಕಿಸ್ತಾನದೊಂದಿಗೆ ಏನು ಸಂಬಂಧವಿದೆ ? ಇಂತಹ ಬೇಡಿಕೆಗಳನ್ನು ಮಾಡುವ ಮೆಹಬೂಬಾ ಮುಫ್ತಿಯಂತಹ ಪಾಕಿಸ್ತಾನಪ್ರಿಯರನ್ನು ಭಾರತದಿಂದ ಗಡಿಪಾರು ಮಾಡಿ ಪಾಕಿಸ್ತಾನಕ್ಕೆ ಕಳುಹಿಸಬೇಕು. ಅಲ್ಲದೆ, ದೇಶದ್ರೋಹೀ ಕೃತ್ಯ ಎಸಗಿದ ಮೇರೆಗೆ ಅವರ ಪಕ್ಷವನ್ನು ನಿಷೇಧಿಸಬೇಕು !

ಮೆಹಬೂಬಾ ಮುಫ್ತಿ

ಶ್ರೀನಗರ : ಕೇಂದ್ರ ಸರಕಾರವು ತಾಲಿಬಾನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಜಮ್ಮು ಕಾಶ್ಮೀರದಲ್ಲಿ ಇರುವವರೊಂದಿಗೆಲ್ಲ ಚರ್ಚೆ ಮಾಡಬೇಕು ಹಾಗೂ ಪಾಕಿಸ್ತಾನದೊಂದಿಗೂ ಚರ್ಚೆ ನಡೆಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಒತ್ತಾಯಿಸಿದ್ದಾರೆ. ಜಮ್ಮು ಕಾಶ್ಮೀರದ ಎಲ್ಲ ಪಕ್ಷದ ಮುಖಂಡರನ್ನು ಸಭೆಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಜಮ್ಮು – ಕಾಶ್ಮೀರದಲ್ಲಿ ಗುಪಕಾರ ಗುಂಪಿನ ನಾಯಕರೊಂದಿಗೆ ಸಭೆಯನ್ನು ಮಾಡಿದ ನಂತರ ಮೆಹಬೂಬಾ ಮುಫ್ತಿಯವರು ಈ ಮೇಲಿನ ಬೇಡಿಕೆಯನ್ನು ಮಂಡಿಸಿದರು. ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಸರಕಾರದ ಯೋಜನೆಯು ಈ ಸಭೆಯಲ್ಲಿ ಮಂಡಿಸಲ್ಪಡಲಿದೆ.