ದತ್ತನ ಗುರುಗಳು
ಶ್ರೀಮದ್ಭಾಗವತದ ಹನ್ನೊಂದನೆಯ ಸ್ಕಂದದಲ್ಲಿಯದು ಮತ್ತು ಅವಧೂತರ ಸಂವಾದವಿದೆ. ಇದರಲ್ಲಿ ಅವಧೂತರು ‘ತಾವು ಯಾವ ಗುರುಗಳನ್ನು ಮಾಡಿಕೊಂಡರು ಮತ್ತು ಅವರಿಂದ ಏನು ಕಲಿತರು, ಎನ್ನುವುದನ್ನು ಹೇಳಿದ್ದಾರೆ. ಅವಧೂತ ಹೇಳುತ್ತಾನೆ, ಜಗತ್ತಿನಲ್ಲಿರುವ ಪ್ರತಿಯೊಂದು ವಿಷಯವೂ ಗುರುವಾಗಿದೆ; ಏಕೆಂದರೆ ಪ್ರತಿಯೊಂದು ವಿಷಯದಿಂದಲೂ ಏನಾದರೊಂದು ಕಲಿಯಲು ಸಿಗುತ್ತದೆ.