ಶ್ರೀಪಾದ ಶ್ರೀವಲ್ಲಭರಿಂದ ವಾಸ್ತವ್ಯದಿಂದ ಪಾವನಗೊಂಡ ಕುರವಪುರ

ರಾಯಚೂರಿನ ಅತ್ಯಂತ ಜಾಗೃತ ತೀರ್ಥಕ್ಷೇತ್ರವೆಂದರೆ ಕುರವಪುರ. ಶ್ರೀಪಾದ ಶ್ರೀವಲ್ಲಭರು ಕೃಷ್ಣಾ ನದಿಯ ಮಧ್ಯದಲ್ಲಿರುವ ನೈಸರ್ಗಿಕ ದ್ವೀಪದಲ್ಲಿ ೧೪ ವರ್ಷಗಳ ಕಾಲ ನೆಲೆಸಿದ್ದರು. ಅವರ ಅವತಾರಿಕಾರ್ಯ ಮುಗಿದ ನಂತರ ಅವರು ಅದೃಶ್ಯರಾದರು. ಶ್ರೀ ದತ್ತಾವತಾರಿ ಯೋಗಿರಾಜ ಶ್ರೀ ವಾಸುದೇವಾನಂದ ಸರಸ್ವತಿಯವರಿಗೆ (ಟೇಂಬೇಸ್ವಾಮಿ) ಶ್ರೀಕ್ಷೇತ್ರ ಕುರವಪುರದಲ್ಲಿಯೇ ‘ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ ಎಂಬ ಹದಿನೆಂಟು ಅಕ್ಷರಗಳ ಮಂತ್ರದ ಸಾಕ್ಷಾತ್ಕಾರವಾಯಿತು. ಅದೇ ಸ್ಥಳದಲ್ಲಿ ವಾಸುದೇವಾನಂದ ಸರಸ್ವತಿಯವರ ವಾಸದಿಂದ ಪವಿತ್ರವಾದ ಗುಹೆ ಇದೆ. ಇಲ್ಲಿಯೇ ಪಾಚಲೇಗಾಂವಕರ್ ಮಹಾರಾಜರಿಗೆ ಶ್ರೀಪಾದ ಶ್ರೀವಲ್ಲಭರ ಸಾಕ್ಷಾತ್ಕಾರವಾಗಿತ್ತು.

ಛಾಯಾಚಿತ್ರದ ಸಾಲು

ಛಾಯಾಚಿತ್ರ ೧ : ಶ್ರೀಕುರವಪುರದ ಶ್ರೀಪಾದ ಶ್ರೀವಲ್ಲಭ ದತ್ತಾತ್ರೆಯ ದೇವಸ್ಥಾನ. ಈ ದೇವಸ್ಥಾನದಿಂದ ಹೆಚ್ಚೆಚ್ಚು ಚೈತನ್ಯ ಪಡೆಯಲು ಪ್ರಾರ್ಥನೆ ಮಾಡಿ

ಛಾಯಾಚಿತ್ರ ೨ : ಶ್ರೀಪಾದ ಶ್ರೀವಲ್ಲಭ ಇವರ ಅಸ್ತಿತ್ವದಿಂದ ಪಾವನವಾಗಿರುವ ದೇವಸ್ಥಾನದ ಪ್ರಾಂಗಣ (ಗೋಲಾಕಾರದಲ್ಲಿ ತೋರಿಸಿದ ಶ್ರೀಪಾದ ಶ್ರೀವಲ್ಲಭರ ಚೈತನ್ಯಮಯ ಹಾಗೂ ಮನಮೋಹಕ ರೂಪ)