ಗುರುಪೂರ್ಣಿಮೆಯ ನಿಮಿತ್ತ ಸಂದೇಶ

ಮಹಾಯುದ್ಧವು ಅನಿವಾರ್ಯ; ಹಾಗಾಗಿ ಪ್ರಾಣರಕ್ಷಣೆಯ ಕೃತಿಗಳು ಮತ್ತು ಸಾಧನೆಗೆ ಸರ್ವೋಚ್ಚ ಆದ್ಯತೆ ನೀಡಿ !

‘ಇಂದು ಜಾಗತಿಕ ಸ್ತರದಲ್ಲಿ ತೀವ್ರ ಸ್ವರೂಪದ ಏರುಪೇರುಗಳು ಸಂಭವಿಸುತ್ತಿವೆ. ಜಾಗತಿಕ ಸ್ತರದಲ್ಲಿ ಮಹಾಯುದ್ಧವು ಅನಿವಾರ್ಯವಾಗಿದ್ದು, ಮುಂದಿನ ೫ ರಿಂದ ೭ ವರ್ಷಗಳ ಕಾಲ ಅತ್ಯಂತ ಭೀಕರವಾದ ಯುದ್ಧಸದೃಶ ಸ್ಥಿತಿ ಎಲ್ಲೆಡೆ ಇರಲಿದೆ. ಈ ಕಾಲವೆಂದರೆ ಒಂದು ರೀತಿ ‘ಸಂಧಿಕಾಲ’ (ಸಂಕ್ರಮಣ ಕಾಲ)ವಾಗಿದೆ.

‘ಸನಾತನ ಸಂಸ್ಥೆಯು ಮುಂದೆ ಅತ್ಯಂತ ಕಠಿಣ ಆಪತ್ಕಾಲವು ಬರಲಿದೆ, ಎಂದು ಕಳೆದ ೨೦ ವರ್ಷಗಳಿಂದ ಹೇಳುತ್ತಿದೆ. ಆ ಕಠಿಣ ಕಾಲವನ್ನು ಇನ್ನು ಮುಂದೆ ಪ್ರತ್ಯಕ್ಷ ಅನುಭವಿಸಬೇಕಾಗಲಿದೆ. ಈ ಸಂಕಟಕಾಲದಲ್ಲಿ ಜೀವಂತವಾಗಿರಲು ಮತ್ತು ಜೀವನ ನಡೆಸಲು ಯಾವ ಮುನ್ನೆಚ್ಚರಿಕೆ ವಹಿಸಬೇಕು ? ಹಾಗೆಯೇ ಯಾವ ಸಾಧನೆ ಮಾಡಬೇಕು ? ಇದರ ಮಾರ್ಗದರ್ಶನವನ್ನು ಸನಾತನ ಸಂಸ್ಥೆಯು ಕಾಲಕಾಲಕ್ಕೆ ಗ್ರಂಥ, ನಿಯತಕಾಲಿಕೆ, ಜಾಲತಾಣ ಮುಂತಾದವುಗಳಿಂದ ನೀಡುತ್ತಾ ಬಂದಿದೆ. ಸಂಸ್ಥೆಯ ಈ ಮಾರ್ಗದರ್ಶನವು ಕೇವಲ ಓದಲು ಮಾತ್ರವಲ್ಲ, ಅದನ್ನು ಕೃತಿಯಲ್ಲಿ ತರುವ ಯೋಗ್ಯ ಸಮಯ ಈಗ ಬಂದಿದೆ.

ಆದ್ದರಿಂದ ಯಾವುದೇ ವಿಳಂಬವನ್ನು ಮಾಡದೇ ಪ್ರಾಣರಕ್ಷಣೆಗಾಗಿ ಆವಶ್ಯಕವಿರುವ ಕೃತಿಗಳಿಗೆ ಸರ್ವೋಚ್ಚ ಆದ್ಯತೆಯನ್ನು ನೀಡಿ, ಹಾಗೆಯೇ ಸಂಕಟಕಾಲದಲ್ಲಿ ಭಗವಂತನು ಕೇವಲ ಭಕ್ತರನ್ನೇ ರಕ್ಷಿಸುತ್ತಾನೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಠಿಣ ಸಾಧನೆಯನ್ನು ಮಾಡಿ ಮತ್ತು ಭಗವಂತನ ಅನನ್ಯ ಭಕ್ತರಾಗಿ !

ಕಳೆದ ೫-೭ ವರ್ಷಗಳಿಂದ, ವಿಶೇಷವಾಗಿ ಕೊರೊನಾ ಸಾಂಕ್ರಾಮಿಕ ರೋಗದ ಕಾಲದಿಂದ ‘ಸಂಪತ್ಕಾಲ’ (ಒಳ್ಳೆಯ ಕಾಲ)ವು ಮುಗಿದು ‘ಆಪತ್ಕಾಲ’ವು ಆರಂಭವಾಯಿತು. ಈಗ ಕಳೆದ ವರ್ಷದಿಂದ, ಅಂದರೆ ಭಾರತ-ಪಾಕ್ ಯುದ್ಧದಿಂದ ಯುದ್ಧಕಾಲವು ಪ್ರಾರಂಭವಾಗಿದೆ. ಪ್ರತಿಯೊಂದು ಕಾಲದ ನಿಯಮಗಳು ಬೇರೆ ಬೇರೆಯಾಗಿರುತ್ತವೆ. ಸಂಪತ್ಕಾಲದಲ್ಲಿ ಮನೋರಂಜನೆ, ಪ್ರಯಾಣ, ಉದ್ಯೋಗ-ವ್ಯವಸಾಯಕ್ಕೆ ಹೇಗೆ ಆದ್ಯತೆ ಇರುತ್ತದೆಯೋ, ಹಾಗೆಯೇ ಯುದ್ಧಕಾಲದಲ್ಲಿ ರಾಷ್ಟ್ರೀಯ ಕರ್ತವ್ಯಗಳನ್ನು ನಿಭಾಯಿಸುವುದು, ಜೀವರಕ್ಷಣೆಗಾಗಿ ಪ್ರಯತ್ನಿಸುವುದು ಮತ್ತು ಸಾಧನೆ ಮಾಡುವುದಕ್ಕೆ ಆದ್ಯತೆ ಇರುತ್ತದೆ. ಸಂಧಿಕಾಲದಲ್ಲಿ ಸಾಧನೆ ಮಾಡುವುದರಿಂದ ಅನೇಕ ವರ್ಷಗಳ ಸಾಧನೆಯು ಅಲ್ಪಾವಧಿಯಲ್ಲಿ ಆಗುತ್ತದೆ. ಆದ್ದರಿಂದ ಮುಂದಿನ ೫-೭ ವರ್ಷಗಳ ಕಠಿಣ ಕಾಲದಲ್ಲಿ ಸಾಧನೆಗೆ ಒತ್ತು ನೀಡಿದರೆ ನಿಮಗೆ ಅಪಾರ ಆಧ್ಯಾತ್ಮಿಕ ಲಾಭವಾಗುವುದು ಮತ್ತು ಈಶ್ವರೀ ರಕ್ಷಣೆಯು ಲಭಿಸುವುದು.

ಈ ಭೀಕರ ಯುದ್ಧಕಾಲದಲ್ಲಿ ಸ್ವಂತದ ವಿಚಾರವನ್ನು ಮಾಡದೇ, ಸಮಾಜದಲ್ಲಿನ ಸಾತ್ತ್ವಿಕ ಹಿಂದೂಗಳ (ಜೀವಗಳ) ರಕ್ಷಣೆ ಮಾಡುವುದು ಅತ್ಯಂತ ಆವಶ್ಯಕವಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಾತ್ತ್ವಿಕ ಹಿಂದೂಗಳ (ಜೀವಗಳ) ಪ್ರಾಣರಕ್ಷಣೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದೇ ಈ ಕಾಲದ ನಿಜವಾದ ಸಮಷ್ಟಿ ಸಾಧನೆಯಾಗಲಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ, (೨೩.೫.೨೦೨೬)