
ಜೈಪುರ (ರಾಜಸ್ಥಾನ) – ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ೪ ಜುಲೈ ೨೦೨೬ ರಂದು ಇಲ್ಲಿನ ಪ್ರಸಿದ್ಧ ಖೋಲೆ ಹನುಮಾನ ದೇವಸ್ಥಾನದಲ್ಲಿ ದರ್ಶನ ಪಡೆದರು. ‘ಹಿಂದೂ ರಾಷ್ಟ್ರವು ಶೀಘ್ರದಲ್ಲೇ ಸ್ಥಾಪನೆಯಾಗಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಆರೋಗ್ಯಪೂರ್ಣ ದೀರ್ಘಾಯುಷ್ಯ ಲಭಿಸಲಿ, ಹಾಗೆಯೇ ಆಪತ್ಕಾಲದಲ್ಲಿ ಸಾಧಕರ ರಕ್ಷಣೆಯಾಗಲಿ’ ಎಂದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರು ಪ್ರಾರ್ಥಿಸಿದರು.
ವೈಶಿಷ್ಟ್ಯಪೂರ್ಣ
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಈ ಖೋಲೆ ಹನುಮಾನ್ ದೇವಸ್ಥಾನದಲ್ಲಿ ಹನುಮಂತನ ದರ್ಶನವನ್ನು ಇತರ ಭಕ್ತರು ದರ್ಶನ ಪಡೆಯುವ ಸ್ಥಳದಿಂದಲೇ ಪಡೆಯುತ್ತಿದ್ದರು. ಆಗ ಅಲ್ಲಿನ ಅರ್ಚಕರಿಗೆ ‘ಇವರು ಯಾರೋ ಶ್ರೇಷ್ಠ ಆಧ್ಯಾತ್ಮಿಕ ಅಧಿಕಾರಿಯಾಗಿದ್ದಾರೆ ಎಂದು ಅನಿಸಿತು. ಆದ್ದರಿಂದ ಅವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರನ್ನು ಗರ್ಭಗೃಹದ ಬಳಿಗೆ ಕರೆದೊಯ್ದು ಹನುಮಂತನ ದರ್ಶನ ಮಾಡಿಸಿದರು.
ಗುರುವೇ ಆತ್ಮಜ್ಞಾನ, ಬ್ರಹ್ಮಜ್ಞಾನ ಹಾಗೂ ಭಗವಂತನ ಪ್ರಾಪ್ತಿಯ ಕಾರಣ
ಬ್ರಹ್ಮಚಾರಿಯ (ಶಿಷ್ಯನ) ಆಚರಣೆ ಹೇಗಿರಬೇಕು? ಎಂಬ ಬಗ್ಗೆ ಕೂರ್ಮಪುರಾಣಕ್ಕನುಸಾರ ವಿವರಣೆ
ಗುರುಪೂರ್ಣಿಮೆಯ ನಿಮಿತ್ತ ಸಂದೇಶ
ಗುರುಗಳ ಆಜ್ಞಾಪಾಲನೆಯ ಮಹತ್ವವನ್ನು ತಿಳಿಸುವ ಒಂದು ಬೋಧಪ್ರದ ಕಥೆ !
ಆಪತ್ಕಾಲದಲ್ಲಿ ನಮ್ಮೆಲ್ಲರ ರಕ್ಷಣೆಯಾಗಬೇಕಾದರೆ ಎಲ್ಲರೂ ಈಶ್ವರನ ಭಕ್ತರಾಗಬೇಕು !
ಲೋಕಮಾನ್ಯ ತಿಲಕ – ಜನ್ಮದಿನ (೨೩.೭.೨೦೨೬)