ಕಾನೂನ ಬಾಹಿರ ಚಟುವಟಿಕೆಯ ಪ್ರಕರಣದಲ್ಲಿ ಕೆನಡಾದಲ್ಲಿನ ೮ ಸಿಖ ಯುವಕರ ಬಂಧನ

ಭಾರತದ ಒತ್ತಡದ ಪರಿಣಾಮ

ಓಟಾವಾ (ಕೆನಡಾ) – ಕೆನಡಾದ ಪೊಲೀಸರು ಓಟಾರಿಯೋ ಪ್ರಾಂತ್ಯದಲ್ಲಿನ ಬಂಪ್ಟನ್ ನಗರದಲ್ಲಿ ೮ ಸಿಖ ಯುವಕರನ್ನು ಬಂಧಿಸಿದ್ದಾರೆ. ಕಾನೂನ ಬಾಹಿರ ಚಟುವಟಿಕೆಯಲ್ಲಿ ಈ ಯುವಕರು ತೊಡಗಿರುವ ಆರೋಪವಿದೆ. ಭಾರತ ಮತ್ತು ಕೆನಡಾದಲ್ಲಿನ ಒತ್ತಡಪೂರಿತ ಸಂಬಂಧದ ಹಿನ್ನೆಲೆಯಲ್ಲಿ ಈ ಬಂಧನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಜೂನ್ ೧೮ ರಂದು ಖಾಲಿಸ್ತಾನ ಭಯೋತ್ಪಾದಕ ಹರದೀಪ ಸಿಂಗ ನಿಜ್ಜರ್ ಇವನ ಹತ್ಯೆಯ ನಂತರ ಎರಡು ದೇಶದಲ್ಲಿನ ಸಂಬಂಧ ಹದಗೆಟ್ಟಿತು.

ಭಾರತ ಮತ್ತು ಕೆನಡಾ ಇವುಗಳಲ್ಲಿನ ಒತ್ತಡದ ಕಾರಣ !

ಖಾಲಿಸ್ತಾನಿ ಭಯೋತ್ಪಾದಕ ಹರದೀಪಸಿಂಗ ನೀಜ್ಜರ್ ಇವನ ಹತ್ಯೆಯಲ್ಲಿ ಭಾರತದ ಕೈವಾಡ ಇರುವುದೆಂದು ಸ್ವತಃ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರೇ ಆಪಾದಿಸಿದರು. ಈ ಆಪಾದನೆಯ ನಂತರ ಎರಡು ದೇಶದಲ್ಲಿನ ಒತ್ತಡ ಹೆಚ್ಚಾಗಿತ್ತು. ಭಾರತವು ಕೆನಡಾದ ಆಪಾದನೆ ದೃಢವಾಗಿ ತಳ್ಳಿಹಾಕಿತ್ತು. ಕೆನಡಾದಲ್ಲಿನ ಭಾರತೀಯ ರಾಜನೈತಿಕ ಅಧಿಕಾರಿ ಮತ್ತು ಭಾರತದ ರಾಜನೈತಿಕ ಪರಿಸರದ ಸುರಕ್ಷೆಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.