ವಾಷಿಂಗ್ಟನ್ – ಖಾಲಿಸ್ತಾನ ಭಯೋತ್ಪಾದಕ ಹರದೀಪಸಿಂಗ ನಿಜ್ಜರ್ ನ ಹತ್ಯೆಯ ಪ್ರಕಾರಣದಲ್ಲಿ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಯಾವುದೇ ದೃಢವಾದ ಸಾಕ್ಷಿ ಇಲ್ಲದೆ ಭಾರತದ ಮೇಲೆ ಮಾಡಿರುವ ಆರೋಪ ದುರಾದೃಷ್ಟಕರವಾಗಿದೆ, ಎಂದು ಅಮೇರಿಕಾ ಭಾರತ ಸ್ಟೇಟಜಿಕ್ ಪಾರ್ಟ್ನರ್ಶಿಪ್ ಫೋರಂ (ಯು.ಎಸ್.ಐ.ಎಸ್.ಪಿ.ಎಫ್.) ಈ ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯಕಾರಿ ಅಧಿಕಾರಿ ಮುಕೇಶ ಅಘಿ ಇವರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಆರೋಪದ ನಂತರ ಎರಡು ದೇಶದಲ್ಲಿನ ಒತ್ತಡ ಹೆಚ್ಚಾಯಿತು. ಭಾರತದಿಂದ ಕೆನಡಾದ ಆಪಾದನೆ ದೃಢವಾಗಿ ತಿರಸ್ಕರಿಸಿದೆ.
ಅಘಿ ಮಾತು ಮುಂದುವರೆಸಿ, ‘ಭಾರತ ಕೆನಡಾ ಇವರಲ್ಲಿನ ಸಂಬಂಧ ಬಹಳ ಹಳೆಯದಾಗಿದೆ. ಎರಡೂ ದೇಶಗಳಲ್ಲಿ ದೊಡ್ಡ ವ್ಯಾಪಾರ ನಡೆಯುತ್ತದೆ. ಕೆನಡಾದಲ್ಲಿ ೨ ಲಕ್ಷ ೩೦ ಸಾವಿರಗಿಂತಲೂ ಹೆಚ್ಚಿನ ಭಾರತೀಯ ವಿದ್ಯಾರ್ಥಿ ಶಿಕ್ಷಣ ಪಡೆಯುತ್ತಿದ್ದಾರೆ. ಕೆನಡಾವು ಭಾರತದಲ್ಲಿ ಸುಮಾರು ೫೫ ಅಬ್ಜ ಡಾಲರ್ ಬಂಡವಾಳ ಹೂಡಿದೆ. ಕೆನಡಾದ ಪ್ರಧಾನ ಮಂತ್ರಿಯ ಆರೋಪ ದೇಶದ ಅಂತರೀಕ ರಾಜಕಾರಣದಿಂದ ಪ್ರೇರಿತವಾಗಿದೆ ಮತ್ತು ಅವರ ರಾಜಕೀಯ ಅಸ್ತಿತ್ವಕ್ಕಾಗಿ ಅವರು ಸಿಖ ಬಹುಸಂಖ್ಯಾತ ಪಕ್ಷದ ಮೇಲೆ ಅವಲಂಬಿತವಾಗಿದ್ದಾರೆ.’ ಎಂದು ಹೇಳಿದರು.