ಓಟಾವಾ (ಕೆನಡಾ) – ಕೆನಡಾದ ಸಂಸತ್ತಿನಲ್ಲಿ ಹಿಟ್ಲರ್ ನ ನಾಝಿ ಸೈನ್ಯದ ಅಧಿಕಾರಿಯನ್ನು ಆಮಂತ್ರಿಸಿದ್ದರಿಂದ ಆಗಿನ ಅಧ್ಯಕ್ಷ ಆಂಟನಿ ರೋಟಾ ಇವರು ರಾಜೀನಾಮೆ ನೀಡಬೇಕಾಯಿತು. ಅದರ ನಂತರ ಈಗ ನೂತನ ಅಧ್ಯಕ್ಷ ಗ್ರೇಗ ಫರ್ಗಸ್ ಇವರ ಆಯ್ಕೆಯ ನಂತರ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಅವರನ್ನು ಅಭಿನಂದಿಸುತ್ತಾ ಸಂಸತ್ತಿನಲ್ಲಿ ಅವರಿಗೆ ಕಣ್ಣು ಹೊಡೆದರು. ಅವರಿಗೆ ತಪ್ಪಾಗಿರುವ ಅರಿವ ಆಗಿರುವುದರಿಂದ ಅವರು ನಾಲಿಗೆ ಕಚ್ಚಿಕೊಂಡರು. ಅವರ ಈ ಹಾವಭಾವದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈರಲ್ ಆಗುತ್ತಿದ್ದು ಅದರ ಬಗ್ಗೆ ಎಲ್ಲೆಡೆ ಟೀಕೆಗಳಾಗುತ್ತಿವೆ. ೨೦೧೮ ರಲ್ಲಿ ಭಾರತದ ಸಂಸತ್ತಿನಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರನ್ನು ಅವರ ಸ್ಥಳಕ್ಕೆ ಹೋಗಿ ತಬ್ಬಿಕೊಂಡಿದ್ದರು. ಅದರ ನಂತರ ತಮ್ಮ ಜಾಗಕ್ಕೆ ಬಂದು ಅವರು ಅವರ ಕಾಂಗ್ರೆಸ್ ನ ಆಗಿನ ಸಂಸದ ಮತ್ತು ಸಹಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಇವರಿಗೆ ಕಣ್ಣು ಹೊಡೆದಿದ್ದರು. ಆಗ ಗಾಂಧಿ ಇವರು ಕೂಡ ಈ ವ್ಯವಹಾರದಿಂದ ನಗೆ ಪಾಟ್ಲಿಗಿಡಾಗಿದ್ದರು.
Why is Trudeau like this? 🤢 pic.twitter.com/aOeM9x68Qq
— Canada Proud (@WeAreCanProud) October 4, 2023
ಸಂಪಾದಕೀಯ ನಿಲುವುಇತಿಹಾಸದಲ್ಲಿ ಜಸ್ಟಿನ್ ಟ್ರುಢೋ ಇವರನ್ನು ಭಯೋತ್ಪಾದಕರಿಗೆ ಆಶ್ರಯ ನೀಡುವವರು, ನಾಝಿಯ ವೈಭವೀಕರಣ ಮಾಡುವವರು, ಅಸಭ್ಯ ವರ್ತನೆಯಿಂದ ಅಪರಿಪಕ್ವ ನಾಯಕವೆಂದು ಗುರುತಿಸಲಾಗುವುದು, ಇದು ಖಂಡಿತ ! |