‘ನ್ಯೂಸ್ ಕ್ಲಿಕ್’ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದವನ್ನು ‘ವಿವಾದಿತ ಪ್ರದೇಶ’ ತೋರಿಸುವು ಅಂತರಾಷ್ಟ್ರೀಯ ಷಡ್ಯಂತ್ರ ರೂಪಿಸಿತ್ತು !

  • ದೆಹಲಿ ಪೋಲಿಸರಿಂದ ಮಾಹಿತಿ

  • ದೇಶದ್ರೋಹಿ ಕೃತ್ಯ ಮಾಡುವ ಈ ವೆಬ್ ಸೈಟ್ ಮೇಲೆ ನಿಷೇಧ ಹೇರುವುದು ಅವಶ್ಯಕವಾಗಿತ್ತು !

ನವ ದೆಹಲಿ – ‘ನ್ಯೂಸ್ ಕ್ಲಿಕ್’ ಈ ವೆಬ್ ಸೈಟ್ ಅರುಣಾಚಲ ಪ್ರದೇಶ ಮತ್ತು ಕಾಶ್ಮೀರ ಇದು ಭಾರತದ ಪ್ರದೇಶವಲ್ಲ ಎಂದು ತೋರಿಸುವ ಅಂತರಾಷ್ಟ್ರೀಯ ಷಡ್ಯಂತ್ರದ ಮೂಲಕ ಪ್ರಯತ್ನ ನಡೆಸಲಾಗಿತ್ತು. ಇದರ ಬಗ್ಗೆ ಈ ವೆಬ್ ಸೈಟ್ ನ ಸಂಸ್ಥಾಪಕ ಪ್ರಬಿರ ಪುರಕಾಯಸ್ಥ ಇವರ ವಿರುದ್ಧ ಸಾಕ್ಷಿ ದೊರೆತಿವೆ, ಎಂದು ದೆಹಲಿ ಪೋಲಿಸರು ಮಾಹಿತಿ ನೀಡಿದರು. ಪೊಲೀಸರು ಪುರಕಾಯಸ್ಥ ಇವರನ್ನು ಬಂಧಿಸಿದ್ದು ನ್ಯಾಯಾಲಯದಿಂದ ಅವರಿಗೆ ಏಳು ದಿನದ ಪೊಲೀಸ ಕಸ್ಟಡಿ ವಿಧಿಸಲಾಗಿದೆ. ದೆಹಲಿ ಪೋಲಿಸರು ಅಕ್ಟೋಬರ್ ೩ ರಂದು ‘ನ್ಯೂಸ್ ಕ್ಲಿಕ್’ಗೆ ಸಂಬಂಧಿತ ೩೦ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಆ ಸಮಯದಲ್ಲಿ ೯ ಮಹಿಳೆಯರ ಸಹಿತ ೪೬ ಜನರ ವಿಚಾರಣೆ ನಡೆಸಿತ್ತು. ಇದರಲ್ಲಿ ಕೆಲವು ಪತ್ರಕರ್ತರ ಸಮಾವೇಶವಿದೆ. ಚೀನಾದಿಂದ ಕಾನೂನು ಬಾಹಿರವಾಗಿ ಹಣ ಪಡೆದಿರುವ ಆರೋಪ ಈ ವೆಬ್ ಸೈಟ್ ಮೇಲೆ ಇದೆ.

ಪೊಲೀಸರು, ಅವರ ಬಳಿ ಪ್ರಬಿರ ಪುರಕಾಯಸ್ಥ ಮತ್ತು ಅಮೆರಿಕಾದ ಉದ್ಯಮಿ ನೇವಿಲ್ ರೈ ಸಿಂಘಂ ಇವರಲ್ಲಿ ಇ ಮೇಲ್ ಮೂಲಕ ನಡೆದಿರುವ ಸಂಭಾಷಣೆ ದೊರೆತಿದೆ. ಇದರಲ್ಲಿ ಅವರು ‘ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದ ‘ವಿವಾದಿತ ಪ್ರದೇಶ’ ಎಂದು ತೋರಿಸುವ ಭಾರತದ ನಕ್ಷೆ ಹೇಗೆ ಸಿದ್ದಪಡಿಸುವುದು ?’, ಇದರ ಬಗ್ಗೆ ಚರ್ಚೆ ನಡೆಸಿದ್ದರು. ಈ ವೆಬ್ ಸೈಟ್ ನಲ್ಲಿ ಭಾರತದ ಉತ್ತರ ಗಡಿಯಲ್ಲಿ ಬದಲಾವಣೆ ಮಾಡಿ ನಕ್ಷೆಯಲ್ಲಿ ಕಾಶ್ಮೀರ್ ಮತ್ತು ಅರುಣಾಚಲ ಪ್ರದೇಶ ಭಾರತದ ಪ್ರದೇಶ ಎಂದು ತೋರಿಸಿಲ್ಲ. ಇದರ ಪ್ರಯತ್ನ ದೇಶದ ಒಗ್ಗಟ್ಟು ಮತ್ತು ಪ್ರಾದೇಶಿಕ ಅಖಂಡತೆ ದುರ್ಬಲಗೊಳಿಸುವ ಉದ್ದೇಶ ತೋರುತ್ತದೆ ಎಂದು ದಾವೆ ಮಾಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ನಗರ ನಕ್ಸಲವಾದಿ ಗೌತಮ ನವಲಖಾ ಇವನು ‘ನ್ಯೂಸ್ ಕ್ಲಿಕ್’ನಲ್ಲಿ ಪಾಲುದಾರರಾಗಿರುವ ಮಾಹಿತಿ ದೊರೆತಿದೆ. ಅವನು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾನೆ.

ನಾವು ಚೀನಾದ ಪ್ರಚಾರ ನಡೆಸಿಲ್ಲ ! (ಅಂತೆ) – ‘ನ್ಯೂಸ್ ಕ್ಲಿಕ್’ ನ ದಾವೆ

‘ನ್ಯೂಸ್ ಕ್ಲಿಕ್’ ಇದು ‘ಎಕ್ಸ್’ನಿಂದ (ಹಿಂದಿನ ಟ್ವಿಟರ್ ನಿಂದ) ಮನವಿ ಪ್ರಸಾರ ಮಾಡಿ ಸ್ವಂತದ ನಿಲುವು ಮಂಡಿಸಿದೆ. ಇದರಲ್ಲಿ, ನ್ಯೂಸ್ ಕ್ಲಿಕ್ ಇದು ಸ್ವತಂತ್ರ ವೆಬ್ ಸೈಟ್ ಆಗಿದೆ. ಅದು ಯಾವುದೇ ಚೀನಾ ಸಂಸ್ಥೆ ಅಥವಾ ಪ್ರಾಧಿಕರಣದ ಆದೇಶದ ಪ್ರಕಾರ ಯಾವುದೇ ವಾರ್ತೆ ಅಥವಾ ಮಾಹಿತಿ ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷವಾಗಿ ಪ್ರಸಾರ ಮಾಡುವುದಿಲ್ಲ. ನಮ್ಮ ವೆಬ್ ಸೈಟ್ ನಲ್ಲಿ ಚೀನಾದ ಯಾವುದೇ ನೀತಿ ಪ್ರಸಾರ ಮಾಡಲಾಗುವುದಿಲ್ಲ. ವೆಬ್ ಸೈಟ್ ನಲ್ಲಿ ಪ್ರಸಾರ ಮಾಡಲಾಗಿರುವ ಸಾಹಿತ್ಯಕ್ಕಾಗಿ ನೇವಿಲ್ ರೈ ಸಿಂಘಂ ಇವರಿಂದ ಯಾವುದೇ ಮಾರ್ಗದರ್ಶನ ಪಡೆದಿಲ್ಲ. ನಮಗೆ ದೊರೆತಿರುವ ಎಲ್ಲಾ ನಿಧಿ ಯೋಗ್ಯ ಬ್ಯಾಂಕಿಂಗ್ ಪ್ರಕ್ರಿಯೆ ಮೂಲಕ ದೊರೆತಿದೆ. ಇದರ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಿಸರ್ವ್ ಬ್ಯಾಂಕ್ ನಿಂದ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಇದನ್ನು ಸಮ್ಮತಿಸಲಾಗಿದೆ.