‘ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಭಾರತದಲ್ಲಿ ಇರುವುದು ಕೆನಡಾಕ್ಕೆ ಮಹತ್ವದ್ದಾಗಿದೆ !’ – ಪ್ರಧಾನಿ ಜಸ್ಟಿನ್ ಟ್ರುಡೊ

ಒಟಾವಾ (ಕೆನಡಾ) – ಭಾರತದೊಂದಿಗೆ ಉದ್ವಿಗ್ನತೆಯನ್ನು ಹೆಚ್ಚಿಸಲು ಬಯಸುವುದಿಲ್ಲ. ನಮ್ಮ ರಾಜತಾಂತ್ರಿಕ ಅಧಿಕಾರಿಗಳು ಭಾರತದಲ್ಲಿ ಉಪಸ್ಥಿತರಿರುವುದು ಕೆನಡಾಕ್ಕೆ ಮಹತ್ವದ್ದಾಗಿದೆ. ಕಠಿಣ ಪರಿಸ್ಥಿತಿಯಲ್ಲಿಯೂ ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ನಾವು ಇಂತಹ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ. (ಇಂತಹ ಯಾವುದೇ ಕ್ರಮಗಳನ್ನು ಕಳೆದ ಕೆಲವು ದಿನಗಳಲ್ಲಿ ಟ್ರುಡೊ ತೆಗೆದುಕೊಂಡಿಲ್ಲ. ಇದರಿಂದ ಟ್ರುಡೊ ಹೇಳುವುದು ಕೇವಲ ಬಾಯಿ ಮಾತಾಗಿದೆ. ಕೃತಿಯಲ್ಲಿ ಯಾವುದೂ ಇಲ್ಲ ! – ಸಂಪಾದಕರು) ಟ್ರುಡೊ ಭಾರತವು ಅವರ ರಾಯಭಾರ ಕಚೇರಿಯ 41 ಅಧಿಕಾರಿಗಳನ್ನು ಕೆನಡಾಕ್ಕೆ ಹಿಂತಿರುಗುವಂತೆ ಹೇಳಿರುವ ಆದೇಶಕ್ಕೆ ಅವರು ಇಲ್ಲಿ ಪ್ರಸಾರ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವಾಗ ಹೇಳಿದರು.

ಮತ್ತೊಂದೆಡೆ, ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು ಮಾತನಾಡಿ, ರಾಜತಾಂತ್ರಿಕ ಬಿಕ್ಕಟ್ಟಿನಿಂದ ಹೊರಬರಲು, ಭಾರತದೊಂದಿಗೆ ವೈಯಕ್ತಿಕವಾಗಿ ಚರ್ಚೆಗಳನ್ನು ನಡೆಸಬೇಕಾಗಿದೆ; ಏಕೆಂದರೆ ರಾಜಕೀಯ ವಿಷಯಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬಹುದಾಗಿದೆ. ನಾವು ಭಾರತ ಸರಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಕೆನಡಾದ ರಾಜತಾಂತ್ರಿಕ ಅಧಿಕಾರಿಗಳ ಭದ್ರತೆ ನಮಗೆ ಬಹಳ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಇದಕ್ಕಾಗಿ ಕೆನಡಾ ಮೊದಲು ತನ್ನ ದೇಶದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರನ್ನು ಭಾರತಕ್ಕೆ ಒಪ್ಪಿಸಬೇಕು. ಹಾಗೆಯೇ ಅಲ್ಲಿನ ಖಲಿಸ್ತಾನಿ ಚಳವಳಿಯನ್ನು ಹತ್ತಿಕ್ಕಬೇಕು. ಟ್ರೂಡೊ ಈ ಎರಡೂ ವಿಷಯಗಳನ್ನು ಮಾಡಲು ಸಾಧ್ಯವಿಲ್ಲದ ಕಾರಣ, ಕೆನಡಾದ ಅಧಿಕಾರಿಗಳ ಉಚ್ಚಾಟನೆ ಅಗತ್ಯವಾಗಿದೆ !