ಪಾಕಿಸ್ತಾನದ 1 ಸಾವಿರ 200 ಹಿಂದೂ ನಿರಾಶ್ರಿತರ ಮಕ್ಕಳನ್ನು ದತ್ತು ಪಡೆದ ‘ಪಾಕಿಸ್ತಾನ ಅನ್ ಟೋಲ್ಡ್’ ಸಂಘಟನೆ !

  • ಉಚಿತ ಶಿಕ್ಷಣ ನೀಡಲು ಮಾಡಿದೆ ವ್ಯವಸ್ಥೆ !

  • ಧನಸಹಾಯ ಮಾಡಲು ಹಿಂದೂಗಳಲ್ಲಿ ಮನವಿ !

ಜೋಧಪುರ (ರಾಜಸ್ಥಾನ) – ಪಾಕಿಸ್ತಾನದಲ್ಲಿರುವ ಮತಾಂಧ ಮುಸಲ್ಮಾನರ ಕಿರುಕುಳದಿಂದ ಬೇಸತ್ತ ಸಾವಿರಾರು ಹಿಂದೂಗಳು ಇಸ್ಲಾಂಗೆ ಮತಾಂತರಗೊಳ್ಳದೆ ತಮ್ಮ ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಭಾರತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಜೋಧಪುರ ಮತ್ತು ಜೈಸಲ್ಮೇರ್‌ನಿಂದ ಇಂತಹ 1ಸಾವಿರದ 200 ಹಿಂದೂ ಮಕ್ಕಳನ್ನು ‘ಪಾಕಿಸ್ತಾನ್ ಅನ್‌ಟೋಲ್ಡ್’ ಹೆಸರಿನ ಹಿಂದುತ್ವನಿಷ್ಠ ಸಂಘಟನೆ ದತ್ತು ಪಡೆದಿದೆ. ಅವರೆಲ್ಲರಿಗೂ ಉಚಿತ ಶಿಕ್ಷಣ ನೀಡುವ ಉದ್ದೇಶವನ್ನು ಈ ಸಂಘಟನೆ ಹೊಂದಿದೆ. ಈ ಬಗ್ಗೆ ಸಂಘಟನೆ ತನ್ನ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿದೆ.

ಈ ಕಾರ್ಯಕ್ಕಾಗಿ ‘ಪಾಕಿಸ್ತಾನ್ ಅನ್‌ಟೋಲ್ಡ್’ ಸಂಘಟನೆ ಹಿಂದೂಗಳಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದೆ. ಸಂಘಟನೆಯು ಟ್ವೀಟ್‌ನಲ್ಲಿ, ‘ಹಿಂದೂಗಳೇ, ನಮ್ಮ ಶಕ್ತಿಯಾಗಿರಿ! ಪ್ರತಿ ಮಗುವಿಗೆ ವರ್ಷಕ್ಕೆ 5 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಮಕ್ಕಳ ಪೋಷಣೆಗಾಗಿ ಕಾರ್ಯನಿರತವಾಗಿರುವ ನಮ್ಮ ವಿವಿಧ ಕೇಂದ್ರಗಳಿಗೆ ಹಣದ ಆವಶ್ಯಕತೆಯಿದೆ. ಪ್ರತಿ ಕೇಂದ್ರಕ್ಕೆ ತಿಂಗಳಿಗೆ 25 ಸಾವಿರ ರೂಪಾಯಿಗಳ ಆವಶ್ಯಕತೆಯಿದೆ’ ಎಂದು ತಿಳಿಸಿದೆ.

ಇಲ್ಲಿ ಮಾಡಬಹುದು ಧನಸಹಾಯ!

ಆನ್‌ಲೈನ್ ಧನಸಹಾಯಕ್ಕಾಗಿ ಸಂಸ್ಥೆಯು ನೀಡಿರುವ ತನ್ನ ‘UPI ಐಡಿ’: agnikiran@upi, agnikiran@axisbank

ಸಂಘಟನೆಯು ಮುಂದುವರಿದು, ನಮಗೆ ದೇಣಿಗೆ ನೀಡಿದ ನಂತರ, ಅದರ ‘ಸ್ಕ್ರೀನ್‌ಶಾಟ್’ ಮತ್ತು ಸಂಬಂಧಿಸಿದ ಮಾಹಿತಿಯನ್ನು [email protected] ಈ ವಿಳಾಸಕ್ಕೆ ಕಳುಹಿಸಿ ಎಂದು ಸಂಸ್ಥೆ ತಿಳಿಸಿದೆ. ಒಂದು ವೇಳೆ ನಿಮಗೆ ಬೃಹತ ಪ್ರಮಾಣದಲ್ಲಿ ದೇಣಿಗೆಯನ್ನು ನೀಡುವುದಿದ್ದರೆ ಅಥವಾ ಶೈಕ್ಷಣಿಕ ಯೋಜನೆಗೆ ಸಹಾಯಧನವನ್ನು ಕಳುಹಿಸುವುದಿದ್ದರೆ, ಮೇಲಿನ ಇಮೇಲ್ ವಿಳಾಸಕ್ಕೆ ನಿಮ್ಮ ಸಂಪರ್ಕ ಸಂಖ್ಯೆಯನ್ನು ಮಾತ್ರ ಕಳುಹಿಸಿರಿ. ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ! ಎಂದು ತಿಳಿಸಿದೆ.

ಸಂಪಾದಕೀಯ ನಿಲುವು

‘ಪಾಕಿಸ್ತಾನ್ ಅನಟೋಲ್ಡ’ ಸಂಘಟನೆಗೆ ಅಭಿನಂದನೆಗಳು! ಇಂತಹ ಹಿಂದೂ ಸಂಘಟನೆಗಳೇ ಹಿಂದೂ ಧರ್ಮದ ಶಕ್ತಿಯಾಗಿದೆ !