ಇಸ್ಲಾಮಿ ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂ ಧರ್ಮ ಮತ್ತು ಹಿಂದೂ ಸಾಧು-ಸಂತರ ಮೇಲೆ ದಾಳಿಗಳು !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಮತಾಂಧ ಮುಸಲ್ಮಾನರು ನಿರಂತರವಾಗಿ ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಈಗ ಕುರಿಗ್ರಾಮ ಜಿಲ್ಲೆಯ ನಾಗೇಶ್ವರಿ ಎಂಬಲ್ಲಿನ ರಾಧಾಪದ ರಾಯ ಹೆಸರಿನ ಹಿಂದೂ ಸಾಧುವನ್ನು ಅಮಾನುಷವಾಗಿ ಥಳಿಸಲಾಗಿದೆ. ಈ ಮಾಹಿತಿಯನ್ನು ಕೇವಲ ಅಲ್ಲಿಯ ಅಲ್ಪಸಂಖ್ಯಾತ ಸಮಾಜದ ಮೇಲೆ ಆಗಿರುವ ಅನ್ಯಾಯವನ್ನು ಜಗತ್ತಿನೆದುರಿಗೆ ತರುವ ‘ಪಾಕಿಸ್ತಾನ ಅನ್‌ಟೋಲ್ಡ್’ ಅಥವಾ ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಗಳಂತಹ ಟ್ವಿಟರ್ ಖಾತೆಗಳಿಂದ ಮಾತ್ರವಲ್ಲದೇ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಕೂಡ ಟ್ವೀಟ್ ಮಾಡಿ ತಿಳಿಸಿದ್ದಾರೆ. ನಸ್ರಿನ ಅವರು ತಮ್ಮ ಟ್ವೀಟ್ ನಲ್ಲಿ 80 ವರ್ಷದ ಸಾಧು ರಾಧಾಪದ ರಾಯ ಅವರನ್ನು ರಫೀಕುಲ್ ಇಸ್ಲಾಂ ಮತ್ತು ಕಾದುರ ಅಲಿ ಥಳಿಸಿದ್ದಾರೆ ಎಂದು ತಿಳಿಸುತ್ತಾ, ಟ್ವೀಟ್ ನೊಂದಿಗೆ ಗಾಯಗೊಂಡಿರುವ ರಾಯ್ ಇವರ ಛಾಯಾಚಿತ್ರಗಳನ್ನೂ ಹಾಕಿದ್ದಾರೆ.
ಪೊರಾಹಾತಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಮೂರ್ತಿಯ ಧ್ವಂಸ
ಬಾಂಗ್ಲಾದೇಶದ ಮತ್ತೊಂದು ಘಟನೆಯಲ್ಲಿ, ಝಿನಾಯದಾ ಜಿಲ್ಲೆಯ ಪೊರಾಹಾತಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಧ್ವಂಸಗೊಳಿಸಲಾಗಿದೆ. ‘ಹಿಂದೂ ವಾಯ್ಸ್’ ತನ್ನ ಟ್ವಿಟರ್ ಖಾತೆಯಿಂದ ಈ ವಿಷಯದ ಬಗ್ಗೆ ಮಾಹಿತಿ ನೀಡುತ್ತಾ, ಇಸ್ಲಾಮಿಕ್ ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಗಳನ್ನು ನಿರಂತರವಾಗಿ ಧ್ವಂಸ ಮಾಡಲಾಗುತ್ತಿದೆ. ಫರೀದಪುರ, ಗೋಪಾಲಗಂಜ ಮತ್ತು ನಾರಾಯಿಲ ಈ ಜಿಲ್ಲೆಗಳಲ್ಲಿ ನಡೆದ ಘಟನೆಗಳ ಬಳಿಕ, ಈಗ ಝಿನಾಯದಾ ಜಿಲ್ಲೆಯಲ್ಲಿ ದುರ್ಗಾದೇವಿಯ ಮೂರ್ತಿಯನ್ನು ಧ್ವಂಸಗೊಳಿಸಲಾಗಿದೆ. “ಬಾಂಗ್ಲಾದೇಶವು ತನ್ನ ಹಿಂದೂ ಅಲ್ಪಸಂಖ್ಯಾತರನ್ನು ರಕ್ಷಿಸಲು ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಟ್ವೀಟ್‌ನಲ್ಲಿ ಮುಂದೆ ಹೇಳಲಾಗಿದೆ.
80-year-old balladist Radhapada Roy from Nageswari, Kurigram, Bangladesh was beaten up by Rafiqul Islam and Kadur Ali. pic.twitter.com/jClyALCI9X
— taslima nasreen (@taslimanasreen) October 3, 2023
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರಿಂದ ಝಿನಾಯದಾ ಜಿಲ್ಲೆಯ ಶ್ರೀ ದುರ್ಗಾದೇವಿ ದೇವಸ್ಥಾನದ ಮೂರ್ತಿಯ ಧ್ವಂಸ ! ಪಾಕಿಸ್ತಾನವಿರಲಿ ಅಥವಾ ಬಾಂಗ್ಲಾದೇಶವಿರಲಿ ಅಲ್ಲಿನ ಹಿಂದೂಗಳಿಗೆ ಈಗ ಯಾರೂ ರಕ್ಷಕರು ಉಳಿದಿಲ್ಲ. ಭಾರತ ಸರಕಾರವೂ ಈ ಜಿಹಾದಿ ದೇಶಗಳಿಗೆ ಇಂತಹ ಘಟನೆಗಳ ಬಗ್ಗೆ ಸಾಮಾನ್ಯ ಖಂಡನೆಯನ್ನೂ ವ್ಯಕ್ತಪಡಿಸುವುದಿಲ್ಲ. ಈಗ ಭಾರತದಾದ್ಯಂತ ಇರುವ ಹಿಂದೂಗಳೇ ನೆರೆಯ ದೇಶಗಳಲ್ಲಿರುವ ತಮ್ಮ ಬಾಂಧವರ ಸುರಕ್ಷತೆಗಾಗಿ ಭಾರತ ಸರಕಾರದ ಮೇಲೆ ಒತ್ತಡ ಹೇರಿ, ಆ ಮಾಧ್ಯಮದಿಂದ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಹಿಂದೂಗಳ ರಕ್ಷಣೆ ಮಾಡಲು ಒತ್ತಾಯಿಸಬೇಕು! |
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಾರತದ ಮೇಲೆ ಒತ್ತಡ ಹೇರುವುದು ಜಾಗತಿಕ ಸ್ಥಿರತೆಗೆ ಅತ್ಯಂತ ಅಪಾಯಕಾರಿ!
ನಮ್ಮ ಸೈನಿಕರ ಮೈ ಮುಟ್ಟಿದರೂ ಯುದ್ಧ ಭುಗಿಲೇಳುವುದು!
‘ಒಂದು ಬಲಿಷ್ಠ ಪಾಕಿಸ್ತಾನ ಅಮೆರಿಕದ ಹಿತಾಸಕ್ತಿಗೆ ಅತ್ಯಂತ ಅಗತ್ಯ!'(ವಂತೆ) – ಅಮೆರಿಕ
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished