ಮಾಲ್ಡೀವ್ಸ್ ರಾಷ್ಟ್ರಪತಿಯಾಗಿ ಆಯ್ಕೆಯಾದ ನಂತರ, ಚೀನಾ ಬೆಂಬಲಿಗ ಮೊಹಮ್ಮದ್ ಮುಯಿಜ್ಜುನ ಘೋಷಣೆ !
ಮಾಲೆ (ಮಾಲ್ಡೀವ್ಸ್) – ಮಾಲ್ಡೀವ್ಸ್‌ನಲ್ಲಿ ನಡೆದ ಚುನಾವಣೆಯಲ್ಲಿ ಚೀನಾ ಬೆಂಬಲಿಗ ಮಹಮ್ಮದ್ ಮುಯಿಜ್ಜು ರಾಷ್ಟ್ರಪತಿಯೆಂದು ಆಯ್ಕೆಯಾಗಿದ್ದಾರೆ. ಆಯ್ಕೆಯಾದ ಬಳಿಕ ಮಾಡಿದ ಮೊದಲ ಭಾಷಣದಲ್ಲಿ ಅವರು, ‘ದೇಶದಲ್ಲಿರುವ ವಿದೇಶಿ ಸೈನಿಕರನ್ನು ತೆಗೆದುಹಾಕಲಾಗುವುದು; ಏಕೆಂದರೆ ಜನರು ಇದಕ್ಕಾಗಿ ನನಗೆ ಮತ ಹಾಕಿದ್ದಾರೆ,’ ಎಂದು ಘೋಷಿಸಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಸದ್ಯಕ್ಕೆ ಭಾರತೀಯ ಸೇನೆಯನ್ನು ನಿಯೋಜಿಸಲಾಗಿದೆ. ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಅವರು ಈ ಹೇಳಿಕೆ ನೀಡಿದ್ದಾರೆ.
China backed candidate elected Maldives president
India suffered a setback Saturday in the neighbouring Maldives as a candidate backed by China, Mohamed Muizzu, defeated pro-India President Ibrahim Solih in the presidential runoff. https://t.co/yOp02e3iDS
— The Times Of India (@timesofindia) October 1, 2023
ಸಂಪಾದಕೀಯ ನಿಲುವುಮಾಲ್ಡೀವ್ಸ್ ಭಾರತಕ್ಕೆ ರಕ್ಷಣಾ ದೃಷ್ಟಿಯಿಂದ ಮಹತ್ವದ ದೇಶವಾಗಿದೆ. ಹಾಗಾಗಿ ಅಲ್ಲಿ ಚೀನಾ ಬೆಂಬಲಿಗ ರಾಷ್ಟ್ರಪತಿಯೆಂದು ಆಯ್ಕೆಯಾಗಿರುವುದು, ಭಾರತಕ್ಕೆ ಅಪಾಯಕಾರಿಯಾಗಿದೆ. ಭಾರತ ಮತ್ತಷ್ಟು ಜಾಗರೂಕವಾಗಿರಬೇಕು ! |