ಭಾರತವು ಕೆನಡಾದ ೪೧ ಅಧಿಕಾರಿಗಳಿಗೆ ದೇಶ ಬಿಟ್ಟು ಹೋಗುವಂತೆ ಹೇಳಿದೆ !
ನವ ದೆಹಲಿ – ಭಾರತ ಮತ್ತು ಕೆನಡಾ ನಡುವೆ ಖಲಿಸ್ತಾನಿ ಭಯೋತ್ಪಾದಕ ನಿಜ್ಜರ ಹತ್ಯೆಯ ಮೇಲಿರುವ ವಿವಾದ ಇದೀಗ ತಾರಕಕ್ಕೇರಿದೆ. ಭಾರತವು ಕೆನಡಾಕ್ಕೆ ಅವರ ೪೧ ರಾಜತಾಂತ್ರಿಕರನ್ನು ಮರಳಿ ಕರೆಸಿಕೊಳ್ಳುವಂತೆ ಹೇಳಿದೆ. ಇದಕ್ಕಾಗಿ ಅಕ್ಟೋಬರ ೧೦ ರ ವರೆಗೆ ಗಡವು ನೀಡಲಾಗಿದೆ. ‘ಆನಂತರವೂ ಭಾರತದಿಂದ ಹಿಂತಿರುಗದಿದ್ದರೆ, ಭಾರತ ಅಧಿಕಾರಿಗಳಿಗೆ ನೀಡುವ ರಿಯಾಯತಿಗಳು ಮತ್ತು ಇತರ ಪ್ರಯೋಜನಗಳನ್ನು ನಿಲ್ಲಿಸಲಾಗುವುದು.” ಎಂದು ಭಾರತದಿಂದ ಹೇಳಲಾಗಿದೆ. ಪ್ರಸ್ತುತ ಭಾರತದಲ್ಲಿ ಕೆನಡಾದ ೬೨ ರಾಜತಾಂತ್ರಿಕರು ಕೆಲಸಮಾಡುತ್ತಿದ್ದಾರೆ.
निज्जर मामले में और सख्त हुआ भारत, कनाडा से 41 राजनयिकों को वापस बुलाने का लिया फैसला#IndiaCanadaRow #IndiaCanadaTension #Bharat https://t.co/i8sVgMUs6O
— Dainik Jagran (@JagranNews) October 3, 2023
ಕೆನಡಾವು ನಿಜ್ಜರ ಹತ್ಯೆಯ ಬಗ್ಗೆ ಭಾರತವನ್ನು ಆರೋಪಿಸುತ್ತಾ, ಕೆನಡಾದಲ್ಲಿಯ ಭಾರತೀಯ ಅಧಿಕಾರಿ ಪ್ರಮೋದ ರಾಯ್ ಅವರನ್ನು ಕೆನಡಾ ಬಿಟ್ಟು ಹೋಗುವಂತೆ ಹೇಳಿದೆ. ಆ ನಂತರ ಭಾರತವೂ ಸಹ ಕೆನಡಾದ ಅಧಿಕಾರಿಗಳಿಗೆ ದೇಶ ಬಿಟ್ಟು ಹೋಗುವಂತೆ ಹೇಳಿದ್ದರು. ಆ ಸಮಯದಲ್ಲಿ ಭಾರತದ ವಿದೇಶಾಂಗ ಸಚಿವಾಲಯವು, ‘ನಾವು ಕೆನಡಾಕ್ಕೆ ಸ್ಪಷ್ಟವಾಗಿ ಹೇಳಿದ್ದೇವೆ, ಎರಡೂ ದೇಶಗಳ ಮಧ್ಯೆ ರಾಜತಾಂತ್ರಿಕರ ಸಂಖ್ಯೆ ಸಮಾನವಾಗಿರಬೇಕು. ಇದು ವಿಯೆನ್ನಾ ಕರಾರಿನನುಸಾರ ಅವಶ್ಯಕವಾಗಿದೆ.’ ಆನಂತರ ಭಾರತವು ಕೆನಡಾದ ನಾಗರಿಕರಿಗೆ ವೀಸಾ ಸೇವೆ ಸಹ ನಿಲ್ಲಿಸಿತು.