ಭಾರತದ ದೃಷ್ಟಿಯಿಂದ G20ಯ ವಾರ್ಷಿಕ ಸಮ್ಮೇಳನದ ಮಹತ್ವ !

ದೆಹಲಿಯಲ್ಲಾದ ‘ಜಿ-೨೦’ ಯ ವಾರ್ಷಿಕ ಸಮ್ಮೇಳನದ ನಿಮಿತ್ತ…

‘ಜಗತ್ತಿನಲ್ಲಿನ ಅತ್ಯಂತ ಪ್ರಭಾವೀ ಸಂಘಟನೆಯಾದ ‘ಜಿ-೨೦’ಯ ವಾರ್ಷಿಕ ಸಮ್ಮೇಳನವು ಇತ್ತೀಚೆಗೆ ದೆಹಲಿಯಲ್ಲಿ ಮುಕ್ತಾಯ ಗೊಂಡಿತು. ಅದರತ್ತ ಇಡೀ ಜಗತ್ತಿನ ಗಮನವಿತ್ತು. ಈ ಘಟನೆಯು ಏಶಿಯಾ ಖಂಡದಲ್ಲಿ ಮತ್ತು ಇಡೀ ಜಗತ್ತಿನಲ್ಲಿ ಭಾರತದ ಅಂತಾರಾಷ್ಟ್ರೀಯ ಪ್ರಭಾವವು ಹೆಚ್ಚುತ್ತಿರುವುದರ ರಶೀದಿ ಯಾಗಿದೆ. ಹಾಗೆಯೇ ‘ಜಿ-೨೦’ ಮೂಲಕ ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ಮತ್ತು ಪ್ರಶ್ನೆಗಳನ್ನು ಯಾವ ರೀತಿ ಪರಿಹರಿಸ ಲಾಗುವುದು ? ಮತ್ತು ಒಟ್ಟಿನಲ್ಲಿ ಅಂತಾರಾಷ್ಟ್ರೀಯ ರಾಜಕಾರಣಕ್ಕೆ ಯಾವ ರೀತಿ ದಿಶೆ ನೀಡಲಾಗುವುದು ?’, ಈ ದೃಷ್ಟಿಯಿಂದಲೂ ಇವು ಮಹತ್ವಪೂರ್ಣವಾಗಿವೆ.

(ಜಿ-೨೦ ಅಂದರೆ ೧೯ ದೇಶಗಳು ಮತ್ತು ೧ ಯುರೋಪಿಯನ್‌ ಯೂನಿಯನ್‌ನ (ಇದರಲ್ಲಿ ೨೭ ದೇಶಗಳಿವೆ) ಹಣಕಾಸು ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ಗಳ ಗವರ್ನರ್‌ಗಳ ಸಂಘಟನೆ)

ಡಾ. ಶೈಲೇಂದ್ರ ದೇವಳಾಣಕರ

೧. ಭಾರತದ ದೃಷ್ಟಿಕೋನದಿಂದ ‘ಜಿ-೨೦’ಯ ಅಧ್ಯಕ್ಷ ಪದವಿಯ ಮಹತ್ವ

ಕಳೆದ ವರ್ಷ ‘ಜಿ-೨೦’ಯ ಅಧ್ಯಕ್ಷ ಪದವಿ ಇಂಡೋನೇಷ್ಯಾ ಬಳಿ ಇತ್ತು. ಈ ವರ್ಷ ಅದು ಭಾರತದ ಬಳಿ ಬಂದಿದೆ. ಮುಂದಿನ ವರ್ಷ ಅದು ಬ್ರಾಝಿಲ್‌ ಮತ್ತು ಅನಂತರ ಅದು ದಕ್ಷಿಣ ಆಫ್ರಿಕಾದವರ ಬಳಿ ಇರಲಿದೆ. ಈ ರೀತಿ ನಾಲ್ಕೂ ಅಭಿವೃದ್ಧಿಶೀಲ ದೇಶಗಳಿಗೆ ಈ ಅಧ್ಯಕ್ಷ ಪದವಿ ಬಂದಿದೆ. ಈ ಅಧ್ಯಕ್ಷ ಪದವಿ ಭಾರತದ ಬಳಿ ಬಂದಾಗ ಭಾರತವು ಈ ಅಧ್ಯಕ್ಷ ಪದವಿಯನ್ನು ಅಲಂಕರಿಸುವುದೆಂದರೆ ಕೇವಲ ಎಲ್ಲ ರಾಷ್ಟ್ರಪ್ರಮುಖರು ಒಟ್ಟಿಗೆ ಬಂದು ಎರಡು ದಿನ ಕೇವಲ ಚರ್ಚೆಗಳನ್ನು ಮಾಡುವುದಕ್ಕಷ್ಟೇ ಸೀಮಿತವಾಗಿರಬಾರದೆಂದು ನಿರ್ಧರಿಸಿತ್ತು. ಭಾರತವು ‘ಜಿ-೨೦’ಯ ಸಂಸ್ಥಾಪಕ ಸದಸ್ಯವಾಗಿದೆ. ಭಾರತದ ಬಳಿ ಈ ಸಂಘಟನೆಯ ಅಧ್ಯಕ್ಷ ಸ್ಥಾನ ಬಂದ ಮೇಲೆ ಆ ಮಾಧ್ಯಮದಿಂದ ಕೆಲವು ಹೊಸ ಪ್ರವಾಹಗಳನ್ನು ಬಿಂಬಿಸಲು ಪ್ರಯತ್ನಿಸಿತು. ಪ್ರಧಾನಮಂತ್ರಿ ಮೋದಿಯವರು ಈ ಅಧ್ಯಕ್ಷ ಪದವಿಯು ಸಂಪೂರ್ಣ ಭಾರತದ ಜನರು ಪಾಲ್ಗೊಳ್ಳುವ ಚಳುವಳಿಯಾಗಬೇಕು ಎಂಬ ದೃಷ್ಟಿಕೋನದಿಂದ ಹಮ್ಮಿಕೊಳ್ಳಲು ನಿರ್ಧರಿಸಿದರು. ಈ ದೃಷ್ಟಿಕೋನದಿಂದ ಈ ಅಧ್ಯಕ್ಷ ಪದವಿಯು ಕೇವಲ ದೆಹಲಿಯ ವಿದೇಶಾಂಗ ವ್ಯವಹಾರ ಸಚಿವಾಲಯ ಅಥವಾ ವಿಜ್ಞಾನಭವನದÀ ಔಪಚಾರಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿರಬಾರದು ಎಂಬ ದೃಷ್ಟಿಯಲ್ಲಿ ಪ್ರಯತ್ನಿಸಲಾಯಿತು.

ಇದರ ಮಹತ್ವದ ಕಾರಣವೆಂದರೆ, ‘ಸದ್ಯ ಜನಸಾಮಾನ್ಯರ ಆರ್ಥಿಕ ಆಸೆ-ಆಕಾಂಕ್ಷೆಗಳನ್ನು ಪೂರ್ಣಗೊಳಿಸುವುದು’, ಭಾರತದ ವಿದೇಶಾಂಗ ಧೋರಣೆಯ ಮಹತ್ವದ ಉದ್ದೇಶವಾಗಿದೆ ಹಾಗೂ ಭಾರತದ ಈ ‘ಜಿ-೨೦’ಯ ಅಧ್ಯಕ್ಷ ಪದವಿಯ ಮೇಲೆ ಈ ಆರ್ಥಿಕ ಆಸೆ-ಆಕಾಂಕ್ಷೆಗಳ ಪ್ರತಿಬಿಂಬ ಬಿದ್ದಿದೆ. ಆದ್ದರಿಂದ ಇದರ ಮಹತ್ವ ಜನರಿಗೆ ತಿಳಿಯಬೇಕು, ಎಂಬ ದೃಷ್ಟಿಕೋನದಿಂದ ಭಾರತ ‘ಜಿ-೨೦’ಯ ಅಧ್ಯಕ್ಷ ಪದವಿಯನ್ನು ನೋಡಿತು. ಈ ಹಿನ್ನೆಲೆಯಲ್ಲಿ ಭಾರತದ ಜನಸಾಮಾನ್ಯರಿಗೆ ಈ ಅಧ್ಯಕ್ಷ ಪದವಿಯ ಮಹತ್ವ ಹಾಗೂ ಪರಿಣಾಮ ತಿಳಿಯುವುದು ಹಾಗೂ ಇದರಲ್ಲಿ ಅವರ ಸಹಭಾಗ ಆಗುವುದೂ ಅತ್ಯಂತ ಆವಶ್ಯಕವಾಗಿದೆ.

೨. ‘ಜಿ-೨೦’ಯ ಅಧ್ಯಕ್ಷ ಪದವಿಗೆ ಚಳವಳಿಯ ಸ್ವರೂಪವನ್ನು ನೀಡಲು ಭಾರತದ ಪ್ರಯತ್ನ

ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ವಿದೇಶಾಂಗ ನೀತಿಯಲ್ಲಿ ಪ್ರಜಾಪ್ರಭುತ್ವಿಕರಣದ ಪ್ರವಾಹಗಳು ಹೆಚ್ಚು ಪ್ರಭಾವಪೂರ್ಣವಾಗುತ್ತಿವೆ. ಪ್ರಜಾಪ್ರಭುತ್ವೀಕರಣದ ಪ್ರವೃತ್ತಿ ಎಂದರೆ, ಕೆಲವು ಬೆರಳೆಣಿಗಳಷ್ಟೆ ಜನರು ವಿದೇಶಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಅದರಲ್ಲಿ ಜನಸಾಮಾನ್ಯರ ಅಪೇಕ್ಷೆಗಳ ಪ್ರತಿಬಿಂಬ ಬೀಳಬೇಕಾಗಿದೆ. ಈ ದೃಷ್ಟಿಕೋನ ದಿಂದ ಭಾರತವು ‘ಜಿ-೨೦’ಯ ಅಧ್ಯಕ್ಷಪದವಿಯನ್ನು ಒಂದು ಸಾಧನವೆಂದು ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸಿತು. ಇಂದು ಭಾರತದ ಭಾರತೀಯ ವಿದೇಶಾಂಗ ನೀತಿಯಲ್ಲಿ ಪ್ರಜಾಪ್ರಭುತ್ವೀಕರಣದ ಪ್ರಕ್ರಿಯೆ ಅಥವಾ ಚಳುವಳಿಯನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದರ ಒಂದು ಸಾಧನವೆಂದು ‘ಜಿ-೨೦’ಯ ಅಧ್ಯಕ್ಷ ಪದದತ್ತ ನೋಡಲಾಗಿದೆ.

ಈ ದೃಷ್ಟಿಕೋನದಿಂದ ವರ್ಷವಿಡೀ ದೇಶದಲ್ಲಿನ ಕಾಶ್ಮೀರ ದಿಂದ ಹಿಡಿದು ಕನ್ಯಾಕುಮಾರಿಯ ವರೆಗಿನ ವಿವಿಧ ನಗರಗಳಲ್ಲಿ ಸುಮಾರು ೨೫೦ ಸಭೆಗಳನ್ನು ಆಯೋಜಿಸಲಾಯಿತು. ಅದರಲ್ಲಿ ವಿವಿಧ ವಿಷಯಗಳು ಒಳಗೊಂಡಿದ್ದವು. ವಿಶೇಷವಾಗಿ ‘ಜಿ-೨೦’ರ ಮುಂದಿರುವ ಜಾಗತಿಕ ಸಮಸ್ಯೆಗಳನ್ನು ಸಹಕಾರದಿಂದ ಹಾಗೂ ಚರ್ಚೆಯಿಂದ ನಿವಾರಿಸಬೇಕಾಗಿದೆ’, ಎಂಬುದೂ ಒಳಗೊಂಡಿತ್ತು ಅಥವಾ ಕಳೆದ ೨ ದಶಕಗಳಿಂದ ಯಾವ ಪದ್ಧತಿಯಲ್ಲಿ ‘ಜಿ-೨೦’ ಕಾರ್ಯವನ್ನು ಮಾಡುತ್ತಿದೆಯೋ, ಆ ಪ್ರತಿಯೊಂದು ವಿಷಯದ ಬಗ್ಗೆ ಈ ಸಭೆಗಳಾದವು. ಅದೇ ರೀತಿ ಭಾರತದ ಶಕ್ತಿಸ್ಥಾನಗಳನ್ನು ಜಗತ್ತಿಗೆ ತಿಳಿಸುವ ದೃಷ್ಟಿಯಿಂದಲೂ ಅನೇಕ ಸಭೆಗಳನ್ನು ಆಯೋಜಿಸಲಾಗಿತ್ತು. ಪರಿಸರದ ಸಮಸ್ಯೆ ಯಿಂದ ಹಿಡಿದು ಸಾಧನ ಸಂಪತ್ತುಗಳ ವಿಕಾಸದಂತಹ ವಿವಿಧ ವಿಷಯಗಳನ್ನು ಈ ಸಭೆಗಳಲ್ಲಿ ಚರ್ಚಿಸಲಾಯಿತು. ಈ ಸಭೆಗಳಲ್ಲಿ ಸಮಾಜದ ವಿವಿಧ ಸ್ತರಗಳನ್ನು (ಸ್ಟೇಕ್‌ ಹೋಲ್ಡರ್ಸ್‌ಗಳನ್ನು) ಸೇರಿಸುವ ಪ್ರಯತ್ನವಾಯಿತು. ‘ಜಿ-೨೦’ರ ಜೊತೆಗೆ ‘ವೈ-೨೦’, ‘ಸಿ-೨೦’, ‘ಡಬ್ಲ್ಯೂ-೨೦’ ಇಂತಹ ಕಾರ್ಯಕ್ರಮಗಳನ್ನೂ ಆಯೋಜಿಸಲಾಯಿತು. ಅದರಲ್ಲಿ ಪ್ರಾಮುಖ್ಯವಾಗಿ ನಾಗರಿಕ ಸಮಾಜದ ಸಹಭಾಗವನ್ನು ನಿರ್ಧರಿಸಲಾಯಿತು. ಭಾರತ ‘ಜಿ-೨೦’ಯ ಅಧ್ಯಕ್ಷ ಪದವಿಯ ಮೂಲಕ ಕೆಲವು ಹೊಸ ಪ್ರವೃತ್ತಿಗಳನ್ನು ಮಾಡಲು ಪ್ರಯತ್ನಿಸಿತು. ಒಂದು ದೇಶವು ಅಧ್ಯಕ್ಷ ಪದವಿಯನ್ನು ಚಳುವಳಿಯ ಮೂಲಕ ಆಚರಿಸು ವುದು, ‘ಜಿ-೨೦’ಯ ಇತಿಹಾಸದಲ್ಲಿ ಇದು ಮೊದಲ ಬಾರಿ ನಡೆಯುತ್ತಿದೆ.

ಈ ಹಿಂದೆ ವಿವಿಧ ದೇಶಗಳಲ್ಲಿ ‘ಜಿ-೨೦’ಯ ಸಮ್ಮೇಳನಗಳಾಗಿವೆ. ಅದೇ ರೀತಿ ಆಯಾ ದೇಶಗಳಲ್ಲಿ ಅದರ ಅಧ್ಯಕ್ಷತೆಯಿರುವಾಗ, ಈ ಸಮ್ಮೇಳನಗಳನ್ನು ಎಲ್ಲ ರಾಷ್ಟ್ರ ನಾಯಕರ ಒಂದು ಸಭೆಗೆ ಸೀಮಿತವಾಗಿಡಲಾಗಿತ್ತು. ಭಾರತವು ಮೊಟ್ಟಮೊದಲಿಗೆ ೧೪೨ ಕೋಟಿ ಜನರನ್ನು ಈ ಅಧ್ಯಕ್ಷಪದವಿಯ ಚಳುವಳಿಯಲ್ಲಿ ಸಮಾವೇಶಗೊಳಿಸಲು ಪ್ರಯತ್ನಿಸಿತು. ಈ ಮೂಲಕ ಅದು ಜಗತ್ತಿನ ಮುಂದೆ ಒಂದು ಆದರ್ಶವನ್ನು ಇಟ್ಟಿದೆ. ಅದನ್ನು ಮುಂದಿನ ವರ್ಷ ಬ್ರಾಝಿಲ್‌ ಮತ್ತು ನಂತರ ದಕ್ಷಿಣ ಆಫ್ರಿಕಾ ಈ ರಾಷ್ಟ್ರಗಳು ಅನುಸರಿಸಬಹುದು. ಅದೇ ರೀತಿ ಯಾವ ದೇಶಗಳಲ್ಲಿ ‘ಜಿ-೨೦’ಯ ಅಧ್ಯಕ್ಷದ ಪದವಿ ಇರುವುದೊ, ಆ ದೃಷ್ಟಿಕೋನದಿಂದ ಇಂತಹ ಪ್ರಯತ್ನವನ್ನು ಮಾಡಲಾಗುವುದು.

‘G20’ ಯ ಕಾರ್ಯಕ್ರಮ ಸ್ಥಳ – ಭಾರತ ಮಂಡಪಮ್

೩. ‘ಜಿ-೨೦’ಯ ಅಧ್ಯಕ್ಷ ಪದವಿಯು ಭಾರತಕ್ಕೆ ದೊಡ್ಡ ಬಹುಮಾನ

‘ಜಿ-೨೦’ ಈ ಸಂಘಟನೆ ಹೇಗಿದೆ ಎಂದರೆ, ಅದರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆಯ ಶೇ. ೭೫ ರಷ್ಟು ಜನಸಂಖ್ಯೆ ಹಾಗೂ ಜಗತ್ತಿನ ಶೇ. ೮೫ ರಷ್ಟು ‘ಜಿಡಿಪಿ’ (ಸಂಪೂರ್ಣ ದೇಶಾಂತರ್ಗತ ಉತ್ಪಾದನೆ) ಹಾಗೂ ಜಾಗತಿಕ ವ್ಯಾಪಾರದ ಶೇ. ೮೦ ರಷ್ಟು ವ್ಯಾಪಾರವು ಇದರ ಮಾಧ್ಯಮದಿಂದ ಆಗುತ್ತದೆ, ಅದೇ ರೀತಿ ಈ ಸಂಸ್ಥೆಯು ಸುಮಾರು ೪೪ ಅಂತಾರಾಷ್ಟ್ರೀಯ ಆರ್ಥಿಕ ಸಂಸ್ಥೆಗಳಿಗೆ ಮಾರ್ಗದರ್ಶನ ಮಾಡುತ್ತದೆ, ಇಂತಹ ಸಂಸ್ಥೆಯ ಅಧ್ಯಕ್ಷಸ್ಥಾನ ಭಾರತದ ಬಳಿ ಬರುವುದೆಂದರೆ ಇದು ದೇಶಕ್ಕೆ ದೊಡ್ಡ ಬಹುಮಾನವೇ ಆಗಿದೆ. ಕಳೆದ ಕೆಲವು ವರ್ಷಗಳಿಂದ ಇಂತಹ ಅನೇಕ ಬಹುಮಾನಗಳು ಭಾರತಕ್ಕೆ ಸತತವಾಗಿ ಸಿಗುತ್ತಿವೆ. ‘ಜಿ-೨೦’ಯ ಅಧ್ಯಕ್ಷ ಪದವಿಯ ಮಾಧ್ಯಮದಿಂದ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಭಾರತದ ಪ್ರಭಾವ ಹೆಚ್ಚಾಗುತ್ತಿದೆ, ಅದೇ ರೀತಿ ಭಾರತವು ‘ಅಂತಾರಾಷ್ಟ್ರೀಯ ರಾಜಕಾರಣಕ್ಕೆ ದೃಷ್ಟಿಕೋನ ನೀಡುವ ಹಾಗೂ ‘ನೇತೃತ್ವ ಮಾಡುವ ದೇಶ’ವೆಂದು ಕೂಡ ಜಗತ್ತಿನ ಮುಂದೆ ಬರುತ್ತಿದೆ. ಈ ದೃಷ್ಟಿಯಿಂದ ‘ಜಿ-೨೦’ ಪರಿಷತ್ತನ್ನು ನೋಡಬೇಕಿದೆ.

೪. ‘ಜಿ-೨೦’ಯ ಪರಿಷತ್ತಿನಲ್ಲಿ ಭಾರತದ ಮುಂದಿರುವ ಸವಾಲುಗಳು

‘ಜಿ-೨೦’ ಸಭೆಗೆ ಪ್ರಾಮುಖ್ಯವಾಗಿ ಕೊರೊನಾ ಮಹಾಮಾರಿಯ ನಂತರ ಕುಸಿದ ಅಂತಾರಾಷ್ಟ್ರೀಯ ಆರ್ಥಿಕ ಪರಿಸ್ಥಿತಿ ಹಾಗೂ ರಷ್ಯಾ-ಯುಕ್ರೇನ್‌ ಯುದ್ಧದ ನಂತರ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ನಿರ್ಮಾಣವಾದ ಪೂರ್ವ ಮತ್ತು ಪಶ್ಚಿಮ ಜಗತ್ತಿನ ಧ್ರುವೀಕರಣದ ಹಿನ್ನೆಲೆಯಿದೆ. ಅಮೇರಿಕಾ ಮತ್ತು ಅಮೇರಿಕಾದ ಪ್ರಭಾವದಡಿಯಿರುವ ದೇಶಗಳು ಮತ್ತು ಇನ್ನೊಂದೆÀಡೆ ರಷ್ಯಾ ಹಾಗೂ ಅದರ ಮಿತ್ರದೇಶಗಳು ಹೀಗೆ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಈ ಧ್ರುವೀಕರಣವಾಗಿದೆ. ಅದರಲ್ಲಿನ ಒತ್ತಡದ ಪ್ರತಿಬಿಂಬ ಈ ಹಿಂದಿನ ‘ಜಿ-೨೦’ ಸಭೆಗಳ ಮೇಲೆ ಬಿದ್ದಿತ್ತು. ಕಳೆದ ವರ್ಷ ಇಂಡೋನೇಶಿಯಾದಲ್ಲಿ ನಡೆದಿರುವ ಸಭೆಯಲ್ಲಿ ಈ ಸಂಘರ್ಷಗಳಿಂದಾಗಿ ಸಹಮತ ಮೂಡಿಸುವುದು ಅತ್ಯಂತ ಮಹತ್ವದ ಸವಾಲಾಗಿತ್ತು.

ಆದ್ದರಿಂದ ‘ಜಿ-೨೦’ ಇದು ಭಾರತಕ್ಕೆ ಒಂದು ಅವಕಾಶವಾಗಿರುವುದರ ಜೊತೆಗೆ ಭಾರತದ ಮುಂದಿರುವ ಸವಾಲು ಕೂಡ ಆಗಿದೆ. ಕೊರೊನಾ ಮಹಾಮಾರಿಯ ನಂತರ ಹಳಿತಪ್ಪಿದ ಆರ್ಥಿಕ ಸ್ಥಿತಿಯನ್ನು ಹೇಗೆ ಸುಧಾರಿಸಬೇಕು ? ಹಾಗೂ ರಷ್ಯಾ-ಯುಕ್ರೇನ್‌ ಯುದ್ಧದಲ್ಲಿ ಪೂರ್ವ ಮತ್ತು ಪಶ್ಚಿಮ ಜಗತ್ತಿನ ನಡುವೆ ಉಂಟಾಗಿರುವ ಕಂದಕದ ನಂತರ ಸಮಾನ ಅಂಶಗಳ ಬಗ್ಗೆ ಸಮ್ಮತಿ ಹೇಗೆ ಮೂಡಿಸಬೇಕು ? ಎಂಬ ಸವಾಲು ಭಾರತದ ಮುಂದಿದೆ.

೫. ‘ಜಿ-೨೦’ ಪರಿಷತ್ತಿನಿಂದ ಅಂತಾರಾಷ್ಟ್ರೀಯ ಸ್ತರದಲ್ಲಿ ಭಾರತಕ್ಕಾಗುವ ಲಾಭ

ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಭಾರತವು ಅತ್ಯಂತ ನಿಕಟ ಸಂಬಂಧವನ್ನು ಬೆಳೆಸಿಕೊಂಡಿರುವಂತಹ ಅಮೇರಿಕಾ, ಜಪಾನ್, ದಕ್ಷಿಣ ಕೊರಿಯಾ, ಅನೇಕ ಯುರೋಪ್‌ ದೇಶಗಳ ಪ್ರಮುಖರು ಭಾರತಕ್ಕೆ ಬಂದಿದ್ದರು. ಇದರ ಮಾಧ್ಯಮದಿಂದ ಭಾರತವು ವಿದೇಶಿ ಹೂಡಿಕೆಗಾಗಿ ಹೇಗೆ ಉತ್ತಮ ಸ್ಥಳವಾಗಿದೆ, ಎಂಬುದರ ಚಿತ್ರಣವನ್ನು ಜಗತ್ತಿನ ಮುಂದಿಡಲಾಗುವುದು. ಮುಂಬರುವ ಕಾಲದಲ್ಲಿ ಆರ್ಥಿಕ ದೃಷ್ಟಿಕೋನದಿಂದ ಮಹತ್ವದ ಪರಿಣಾಮವಾಗಲಿಕ್ಕಿದೆ. ಒಟ್ಟಾರೆ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಭಾರತದ ನೇತೃತ್ವವು ವಿಕಸಿತ ವಾಗುವ ದೃಷ್ಟಿಕೋನದಿಂದ ‘ಜಿ-೨೦’ಯ ಅಧ್ಯಕ್ಷತೆ ಅತ್ಯಂತ ಮಹತ್ವಪೂರ್ಣವಾಗಲಿಕ್ಕಿದೆ.’

– ಡಾ. ಶೈಲೇಂದ್ರ ದೇವಳಾಣಕರ್, ಅಂತರರಾಷ್ಟ್ರೀಯ ಘಟನೆಗಳ ಅಧ್ಯಯನಕಾರರು. (ಆಧಾರ : ಡಾ. ಶೈಲೇಂದ್ರ ದೇವಳಾಣಕರ್‌ ಇವರ ‘ಫೇಸ್‌ಬುಕ್’ ಖಾತೆ)