‘ಆಧುನಿಕ ಭಾರತ-ಅಮೇರಿಕಾ ಸಂಬಂಧಗಳ’ ಶಿಲ್ಪಕಾರ ಡಾ. ಎಸ್. ಜೈಶಂಕರ !

ಅಮೇರಿಕೆಯಿಂದ ಭಾರತದ ವಿದೇಶಾಂಗ ಸಚಿವರ ಶ್ಲಾಘನೆ !

ವಾಷಿಂಗ್ಟನ (ಅಮೇರಿಕಾ) – ಅಮೇರಿಕಾದ ಆಡಳಿತದ ಅಧಿಕಾರಿಗಳು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈ ಶಂಕರರನ್ನು ಹೊಗಳಿದ್ದಾರೆ. ಬೈಡೆನ್ ಆಡಳಿತದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಅವರನ್ನು ‘ಆಧುನಿಕ ಅಮೇರಿಕಾ-ಭಾರತ ಸಂಬಂಧಗಳ ಶಿಲ್ಪಕಾರ’ ಎಂದು ಹೇಳಿದ್ದಾರೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚು ದೃಢಪಡಿಸುವಲ್ಲಿ ಅವರು ವಿಶೇಷ ಪಾತ್ರವನ್ನು ವಹಿಸಿದ್ದಾರೆ ಎನ್ನುವುದು ಈ ಅಧಿಕಾರಿಗಳ ಹೇಳಿಕೆಯಾಗಿದೆ.

ಡಾ. ಜೈ ಶಂಕರ ಅವರ 9 ದಿನಗಳ ಅಮೇರಿಕೆಯ ಪ್ರವಾಸ ಅಕ್ಟೋಬರ್ 1 ರಂದು ಕೊನೆಗೊಂಡಿತು. ಕೊನೆಯ ದಿನ ಅಮೇರಿಕಾದಲ್ಲಿರುವ ಭಾರತದ ರಾಯಭಾರಿ ತರಣಜೀತ ಸಿಂಹ ಸಂಧು ಇವರು ಡಾ. ಜೈ ಶಂಕರ ಅವರ ಗೌರವಾರ್ಥ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ಬೈಡನ್ ಆಡಳಿತದ ಉನ್ನತಾಧಿಕಾರಿ ಸರ್ಜನ್ ಜನರಲ್ ವಿವೇಕ್ ಮೂರ್ತಿ, ಉಪ ಕಾರ್ಯದರ್ಶಿ ರಿಚರ್ಡ್ ವರ್ಮಾ, ಅಧ್ಯಕ್ಷ ಬಿಡೆನ ಅವರ ರಾಷ್ಟ್ರೀಯ ನೀತಿ ಸಲಹೆಗಾರತಿ ನೀರಾ ಟಂಡನ, ರಾಷ್ಟ್ರೀಯ ಔಷಧ ನಿಯಂತ್ರಣ ನೀತಿ ನಿರ್ದೇಶಕ ಡಾ. ರಾಹುಲ್ ಗುಪ್ತಾ ಮತ್ತು ರಾಷ್ಟ್ರೀಯ ವಿಜ್ಞಾನ ಫೌಂಡೇಶನ್ ನಿರ್ದೇಶಕ ಡಾ. ಸೇತುರಾಮನ್ ಪಂಚನಾಥನ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಈ ಅಧಿಕಾರಿಗಳು ಜೈ ಶಂಕರ ಅವರನ್ನು ‘ಆಧುನಿಕ ಅಮೇರಿಕಾ-ಭಾರತ ಸಂಬಂಧಗಳ ಶಿಲ್ಪಕಾರ’ ಎಂದು ಹೇಳಿದರು.

ಡಾ. ಜೈ ಶಂಕರ ಅವರು ತಮ್ಮ ಪ್ರವಾಸದ ಮಾಹಿತಿ ನೀಡುವ ಒಂದು ವಿಡಿಯೋ ‘ಎಕ್ಸ್’ ನಲ್ಲಿ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಅವರು ಅಮೇರಿಕಾ ಪ್ರವಾಸದ ಮುಖ್ಯಾಂಶಗಳನ್ನು ಸೇರಿಸಿದ್ದಾರೆ. ಅವರು ಈ ವಿಡಿಯೊಗೆ ‘ಭಾರತ ಮತ್ತು ಅಮೇರಿಕಾ: ಕ್ಷಿತಿಜದ ವಿಸ್ತಾರ’ ಎಂದು ಹೆಸರು ನೀಡಿದ್ದಾರೆ.

ಅಮೇರಿಕಾದ ವಿವಿಧ ಅಧಿಕಾರಿಗಳನ್ನು ಭೇಟಿಯಾದರು !

ಈ ವಿಡಿಯೋದಲ್ಲಿ ಜೈ ಶಂಕರ ಅವರು ಅಮೇರಿಕಾದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ, ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್, ವಾಣಿಜ್ಯ ಕಾರ್ಯದರ್ಶಿ ಜಿನಾ ರಾಯಮೊಂಡೋ ಮತ್ತು ವ್ಯಾಪಾರ ಪ್ರತಿನಿಧಿ ಕ್ಯಾಥರೀನ್ ಟಾಯ್ ಮತ್ತು ಇತರೆ ಅಧಿಕಾರಿಗಳೊಂದಿಗೆ ನಡೆಸಿದ ಚರ್ಚೆಯ ಕ್ಷಣಗಳು ಒಳಗೊಂಡಿದೆ. ಜಯಶಂಕರ ಅವರು ಆಸ್ಟಿನ್ ಅವರೊಂದಿಗೆ ‘ಭಾರತ-ಅಮೇರಿಕೆಯ ದ್ವಿಪಕ್ಷೀಯ ರಕ್ಷಣಾ ಸಹಕಾರ’ ಮತ್ತು ‘ಜಾಗತಿಕ ರಕ್ಷಣೆಯ ಸವಾಲುಗಳು’ ಕುರಿತು ಚರ್ಚಿಸಿದರು. ಈ ಪ್ರವಾಸದ ವೇಳೆ ಜೈ ಶಂಕರ ಅವರು ವಿವಿಧ ವೇದಿಕೆಗಳಲ್ಲಿ ಕೆನಡಾದ ಸಂದರ್ಭದಲ್ಲಿ ‘ಕೆನಡಾ ತನ್ನ ಭೂಮಿಯನ್ನು ಖಲಿಸ್ತಾನಿ ಭಯೋತ್ಪಾದಕರಿಗೆ ಉಪಯೋಗಿಸಲು ಅವಕಾಶ ನೀಡುತ್ತಿದೆ’ ಎಂದು ಸ್ಪಷ್ಟ ಹೇಳಿಕೆ ನೀಡಿದ್ದರು.

ಸಂಪಾದಕೀಯ ನಿಲುವು

ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಅಮೇರಿಕಾ ಹತ್ತಿರವಾಗಿದ್ದರೂ, ಅಮೇರಿಕಾದ ಮೂಲ ಮಾನಸಿಕತೆಯನ್ನು ಭಾರತ ಗುರುತಿಸಿದೆಯೆಂಬುದನ್ನು ಮರೆಯಬಾರದು !