ಸಮಾಜವಾದಿ ಪಕ್ಷದ ಶಾಸಕ ಎಸ್. ಟಿ. ಹಸನ್ ಇವರ ಬೇಡಿಕೆ !
ಮುರಾದಾಬಾದ (ಉತ್ತರಪ್ರದೇಶ) – ಇಲ್ಲಿಯ ಸಮಾಜವಾದಿ ಪಕ್ಷದ ಶಾಸಕ ಎಸ್. ಟಿ. ಹಸನ್ ಇವರು ದೇಶದಲ್ಲಿನ ಬಲಾತ್ಕಾರದ ಘಟನೆಗಳನ್ನು ತಡೆಯುವದಕ್ಕಾಗಿ ಶರಿಯತ್ ಕಾನೂನು ಜಾರಿಗೊಳಿಸಲು ಆಗ್ರಹಿಸಿದ್ದಾರೆ. ‘ಈ ಕಾನೂನಿನಿಂದ ಸೌದಿ ಅರೇಬಿಯಾದಲ್ಲಿ ಮುಸಲ್ಮಾನರ ಸಂದರ್ಭದಲ್ಲಿ ಒಂದು ಅಪರಾಧ ಕೂಡ ನಡೆಯುವುದಿಲ್ಲ’, ಎಂದು ಅವರು ದಾವೆ ಮಾಡಿದರು. ಹಾಗೂ ಅವರು ಅಶ್ಲೀಲ ವೆಬ್ಸೈಟ್ ಮೇಲೆ (ಪಾರ್ನ್ ಸೈಟ್) ನಿಷೇದ ಹೇರಲು ಕೂಡ ಒತ್ತಾಯಿಸಿದ್ದಾರೆ. ಭಾರತದಲ್ಲಿ ಅಶ್ಲೀಲ ವೆಬ್ಸೈಟ್ ಮೇಲೆ ನಿಷೇಧ ಹೇರಲಾಗಿದೆ.
‘भारत में लागू हो शरिया’: सपा संसद ST हसन की माँग, कहा – पॉर्न देखने से शरीर में बनते हैं विशेष हार्मोन, जो बलात्कार के लिए करता देता है मजबूर#Rape #Sharia #SamajwadiPartyhttps://t.co/Ibpm08KNc8
— ऑपइंडिया (@OpIndia_in) October 1, 2023
೧. ಶಾಸಕ ಎಸ್ ಟಿ ಹಸನ್ ಇವರು, ಗ್ರಾಮದಲ್ಲಿ ೪ ಹುಡುಗರು ಹೊಲದಲ್ಲಿ ಕುಳಿತು ಮೊಬೈಲ್ ನಲ್ಲಿ ಅಶ್ಲೀಲ ಚಲನಚಿತ್ರ ನೋಡುತ್ತಾರೆ ಮತ್ತು ಯಾವಾಗ ಅವರ ಎದುರಿಗೆ ಒಂದು ಹುಡುಗಿ ಹೋಗುತ್ತಾಳೆ ಆಗ ಅವರು ಅವಳ ಮೇಲೆ ಬಲಾತ್ಕಾರ ಮಾಡುತ್ತಾರೆ. ಯಾವಾಗ ಅಶ್ಲೀಲ ಚಲನಚಿತ್ರ ನೋಡಲಾಗುತ್ತದೆ ಆಗ ಶರೀರದಲ್ಲಿ ಒಂದು ರೀತಿಯ ಹಾರ್ಮೋನ್ಸ್ ನಿರ್ಮಾಣವಾಗುತ್ತವೆ ಮತ್ತು ಅದರಿಂದ ಅವರು ಬಲಾತ್ಕಾರ ಮಾಡಲು ಪ್ರವೃತ್ತರಾಗುತ್ತಾರೆ. ಇದರಿಂದ ಅಪರಾಧ ನಡೆಯುತ್ತದೆ. ಆದ್ದರಿಂದಲೇ ದೇಶದಲ್ಲಿ ಅಶ್ಲೀಲ ವೆಬ್ಸೈಟ್ ಗಳನ್ನು ನಿಷೇಧಿಸಬೇಕು.
೨. ಶಾಸಕ ಹಸನ್ ಮಾತು ಮುಂದುವರಿಸಿ, ಬಲಾತ್ಕಾರದಂತಹ ಘಟನೆಗಳು ತಡೆಯುವುದಕ್ಕಾಗಿ ಶರೀರತ ಕಾನೂನಿನ ರೀತಿಯಲ್ಲಿ ಶಿಕ್ಷೆ ನೀಡಿದರೆ, ಒಂದು ರೀತಿಯ ಭಯ ನಿರ್ಮಾಣವಾಗುವುದು ಮತ್ತು ಅದರಿಂದ ಬಲಾತ್ಕಾರದ ಘಟನೆ ನಿಲ್ಲುವುದು. ಸೌದಿ ಅರೇಬಿಯಾದಲ್ಲಿ ಬಲಾತ್ಕಾರ, ಕಳ್ಳತನ, ಹತ್ಯೆ ಮುಂತಾದ ಘಟನೆ ಏಕೆ ಆಗುವುದಿಲ್ಲ ? ಕಾರಣ ಅಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಕಾನೂನುವಿದೆ. ನಮ್ಮ ದೇಶದ ಕಾನೂನಿನಲ್ಲಿ ಮೃದುತ್ವ ಇರುವುದರಿಂದ ಜನರು ಅದರ ದುರುಪಯೋಗ ಮಾಡಿಕೊಳ್ಳುತ್ತಾರೆ. ಕೆಲವು ಸಮಯ ಬಲಾತ್ಕಾರದ ಸುಳ್ಳು ಆರೋಪ ಕೂಡ ಮಾಡಲಾಗುತ್ತದೆ. ಬಲಾತ್ಕಾರದ ಕಲಂ ೩೭೬ ರ ದುರುಪಯೋಗ ಮಾಡಲಾಗುತ್ತದೆ.
ಸಂಪಾದಕೀಯ ನಿಲುವು
ಎಸ್ ಟಿ ಹಸನ್ ಇವರ ಬೇಡಿಕೆಯು ಮೊದಲು ಮುಸಲ್ಮಾನ ಅಪರಾಧಿಗಳಿಗಾಗಿ ಜಾರಿ ಮಾಡಬೇಕು. ಅದರ ಮೂಲಕ ಬಲಾತ್ಕಾರ, ಮತಾಂತರ, ಲವ್ ಜಿಹಾದ್, ಗೋ ಹತ್ಯೆ, ಜಿಹಾದಿ ಭಯೋತ್ಪಾದನೆ, ಗಲಭೆ ಮುಂತಾದ ಅಪರಾಧಗಳಲ್ಲಿ ಸಹಭಾಗಿರುವ ಮುಸಲ್ಮಾನ ಆರೋಪಿಗಳಿಗೆ ಶಿಕ್ಷೆ ಆಗಬೇಕು, ಹೀಗೆ ಮಾಡಿದರೆ ದೇಶದಲ್ಲಿನ ಅಪರಾಧ ಕಡಿಮೆ ಆಗುವುದೆಂದು ಯಾರಿಗಾದರೂ ಅನಿಸುವುದು ! |