ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಗೆ ಟಿಕೆಟ್ ನೀಡಿದರೆ ರಾಜಕೀಯ ಪಕ್ಷವು ಪತ್ರಿಕೆಯಲ್ಲಿ ಕಾರಣ ನೀಡಬೇಕು ! – ಕೇಂದ್ರ ಚುನಾವಣಾ ಆಯೋಗ

ಕೇಂದ್ರ ಚುನಾವಣಾ ಆಯೋಗದ ಹೊಸ ನಿಯಮಾವಳಿ

ಜೈಪುರ (ರಾಜಸ್ಥಾನ) – ಕೇಂದ್ರ ಚುನಾವಣಾ ಆಯೋಗ ಮಾಡಿರುವ ಹೊಸ ನಿಯಮದಲ್ಲಿ ರಾಜಕೀಯ ಪಕ್ಷಗಳು “ಅಪರಾಧ ಹಿನ್ನಲೆಯುಳ್ಳ ವ್ಯಕ್ತಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸಲು ಏಕೆ ಟಿಕೆಟ್ ನೀಡಿದ್ದು ?”ಎಂಬ ವಿವರಣೆಯನ್ನು ಪತ್ರಿಕೆಗಳಲ್ಲಿ ನೀಡಬೇಕಾಗಬಹುದು. ಹಾಗೆಯೇ ಈ ಅಭ್ಯರ್ಥಿಗಳು ತಮ್ಮ ಮೇಲಿರುವ ಅಪರಾಧಗಳ ಮಾಹಿತಿಯನ್ನು ಪತ್ರಿಕೆಗಳಲ್ಲಿ ಜಾಹಿರಾತು ಮೂಲಕ ನೀಡಬೇಕು.


ಈ ಕುರಿತು ಮುಖ್ಯ ಚುನಾವಣಾ ಆಯುಕ್ತ ರಾಜೀವ ಕುಮಾರ ಇವರು ಮಾತನಾಡಿ, ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಬದ್ಧವಾಗಿದೆ. ಇದಕ್ಕಾಗಿ ರಾಜಕಾರಣದಲ್ಲಿ ಅಪರಾಧಿಗಳು ಬರದಂತೆ ತಡೆಯಲು ಚುನಾವನಾ ಆಯೋಗವು ಹೆಜ್ಜೆ ಇಟ್ಟಿದೆ. ಅಪರಾಧಿಗಳಿಗೆ ಪಕ್ಷವು ಏಕೆ ಟಿಕೆಟ್ ನೀಡಿತು ? ಇದಕ್ಕೆ ರಾಜಕೀಯ ಪಕ್ಷಗಳೇ ಉತ್ತರಿಸಬೇಕು. ರಾಜಸ್ಥಾನದಲ್ಲಿ ಇದೇ ಮೊದಲ ಬಾರಿಗೆ ವಯಸ್ಸಾದ ಮತದಾರರಿಗೆ ಹಾಗೆಯೇ ಶೇ. ೪೦ ರಷ್ಟು ಅಂಗವಿಕಲರು ಮನೆಯಲ್ಲಿ ಕುಳಿತು ಮತದಾನ ಮಾಡುವ ಅವಕಾಶ ಮಾಡಲಿದೆ. ಕಡ್ಡಾಯ ಮತದಾನದ ಯಾವುದೇ ಪ್ರಸ್ತಾವನೆ ಚುನಾವಣಾ ಆಯೋಗದ ಮುಂದೆ ಇಲ್ಲ.

ಸಂಪಾದಕೀಯ ನಿಲುವು

ಇದಕ್ಕಿಂತ ಇಂತಹ ವ್ಯಕ್ತಿಯು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ರೂಪಿಸುವುದು ಅಗತ್ಯ!