|
ಲಂಡನ (ಬ್ರಿಟನ್) – ಇಲ್ಲಿಯ ಖಲಿಸ್ತಾನ ವಿರೋಧಿ ಸಿಖ ಉದ್ಯಮಿ ಹರಮನಸಿಂಹ ಕಪೂರ್ ಇವರಿಗೆ ಖಲಿಸ್ತಾನಿಗಳು ಬೆದರಿಕೆ ನೀಡುತ್ತಾ ಅವರ ವಾಹನದ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಸಪ್ಟೆಂಬರ್ ೩೦ ರಂದು ಅವರ ಮನೆಯ ಹೊರಗೆ ನಡೆದಿದೆ. ಹರಮನಸಿಂಹ ಇವರಿಗೆ ಅನೇಕ ತಿಂಗಳಿಂದ ಖಲಿಸ್ತಾನಿಗಳಿಂದ ಜೀವ ಬೆದರಿಕೆ ಸಿಗುತ್ತಿದೆ; ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ಹರಮನ ಸಿಂಹ ಲಂಡನದಲ್ಲಿ ಒಂದು ಉಪಹಾರ ಗೃಹ ನಡೆಸುತ್ತಾರೆ.
खालिस्तानी चरमपंथियों ने ब्रिटेन में एक और बड़ी घटना को अंजाम दिया है. खालिस्तानी चरमपंथियों ने लंदन में एक सिख रेस्तरा मालिक पर हमला किया है#Khalistan #Khalistani #London #UK #KhalistaniTerrorist #HarmanSinghKapoor pic.twitter.com/1kZlbGyPqL
— Sahara Samay Live (@SaharaSamayNews) October 1, 2023
ಹರಮನ ಸಿಂಹ ಇವರು, ಕಳೆದ ಎಂಟು ತಿಂಗಳಿಂದ ೪ ಬಾರಿ ದಾಳಿ ಮಾಡಲಾಗಿದೆ. ಈಗಿನ ಘಟನೆಯಿಂದ ಅವರ ಮನೆಯ ಹೊರಗೆ ನಿಂತಿರುವ ಅವರ ವಾಹನದ ಮೇಲೆ ಗುಂಡಿನ ದಾಳಿ ಮಾಡಲಾಗಿ ಅದರ ಮೇಲೆ ಕೆಂಪು ಬಣ್ಣ ಸುರಿಯಲಾಗಿದೆ. ಈ ಸಮಯದಲ್ಲಿ ಖಲಿಸ್ತಾನಿಗಳು ಬೈಗುಳ ಬಯ್ಯುತ್ತಾ ಜೀವ ಬೆದರಿಕೆ ನೀಡಿದರು ಮತ್ತು ಅಲ್ಲಿಂದ ಓಡಿ ಹೋದರು.
United Kingdom | Harman Singh Kapoor and Khushi Kaur allege they were harassed by the Khalistanis when they spoke against them and the police has not protected them enough to feel safe.#ReporterDiary #News #London (@loveenatandon ) pic.twitter.com/iAcqRuKK9M
— IndiaToday (@IndiaToday) May 2, 2023
ಖಲಿಸ್ತಾನಿಗಳಿಂದ ಹರಮನ ಸಿಂಹ ಅವರ ಪತ್ನಿ ಮತ್ತು ಪುತ್ರಿ ಮೇಲೆ ಬಲಾತ್ಕಾರದ ಬೆದರಿಕೆ ನೀಡಲಾಗಿದೆ. ‘ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಕೂಡ ಇಲ್ಲಿಯವರೆಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’, ಎಂದು ಕೂಡ ಹರಮನ ಸಿಂಹ ಇವರು ಹೇಳಿದರು.
ಉಸಿರು ಇರುವವರೆಗೆ ಖಲಿಸ್ತಾನವನ್ನು ವಿರೋಧಿಸುವೆವು ಮತ್ತು ಭಾರತದ ಜೊತೆಗೆ ಇರುವೆವು ! – ಹರಮನ ಸಿಂಹ ದಂಪತಿ
“खालिस्तान समर्थकों ने मेरी कार पर फायरिंग की..”
◆ लंदन में एक सिख रेस्तरां मालिक हरमन सिंह कपूर का दावा
◆ इन दावों पर अभी तक लंदन पुलिस का कोई बयान नहीं आया#London | #HarmanSinghKapoor | #Khalistani pic.twitter.com/JlTnpGfLc9
— News24 (@news24tvchannel) October 1, 2023
ಹರಮನ ಸಿಂಹ ಮತ್ತು ಅವರ ಪತ್ನಿ ಖುಷಿ ಇವರು, ನಾವು ಕೊನೆಯ ಉಸಿರು ಇರುವವರೆಗೂ ಖಲಿಸ್ತಾನಿಗಳನ್ನು ವಿರೋಧಿಸುತ್ತೇವೆ. ಖಲಿಸ್ತಾನಿಗಳು ಎಲ್ಲಾ ಸಿಖ್ಕರನ್ನು ಕಳಂಕಿತಗೊಳಿಸುತ್ತಿದ್ದಾರೆ. ಖಲಿಸ್ತಾನದ ಬೇಡಿಕೆ ತಪ್ಪಾಗಿದೆ. ಸಿಖ್ಕರ ಗುರು ಧರ್ಮಕ್ಕಾಗಿ ಬಲಿದಾನ ನೀಡಿದರು. ಇದರ ಅರಿವು ಖಲಿಸ್ತಾನನಿಗಳಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುಖಲಿಸ್ತಾನದ ಬಹಿರಂಗವಾಗಿ ವಿರೋಧಿಸುವ ಸಿಖ್ಖರು ಭಾರತದಲ್ಲಿ ಕೂಡ ಕಡಿಮೆ ಪ್ರಮಾಣದಲ್ಲಿ ಕಾಣಲು ಸಿಗುವಾಗ ಲಂಡನದಲ್ಲಿ ಈ ರೀತಿಯ ವಿರೋಧ ವ್ಯಕ್ತಪಡಿಸುವ ಸಿಖ ಅಭಿನಂದಿಸೆಲೇ ಬೇಕು. ಬ್ರಿಟನ್ ನಲ್ಲಿ ಋಷಿ ಸುನಕ್ ಇವರ ಸರಕಾರ ಖಲಿಸ್ತಾನಿಗಳ ಮೇಲೆ ಅಪೇಕ್ಷಿತ ರೀತಿ ಕ್ರಮ ಕೈಗೊಳ್ಳದೆ ಇರುವುದರಿಂದ ಅವರು ಕೊಬ್ಬುತ್ತಿದ್ದಾರೆ ! ಇತರ ದೇಶದಲ್ಲಿ ಭಾರತೀಯ ಮೂಲದ ಜನರು ಎಷ್ಟೇ ಉನ್ನತ ಸ್ಥಾನದಲ್ಲಿ ಇದ್ದರೂ ಕೂಡ ಅವರು ಅವರ ದೇಶದ ಮತ್ತು ರಾಜಕೀಯ ಲಾಭದ ಯೋಚನೆ ಮಾಡುತ್ತಾರೆ, ಇದೆ ಋಷಿ ಸುನಕ ಕೂಡ ತೋರಿಸುವುದು ಕಾಣುತ್ತಿದೆ. |