ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿನಿಗೆ ಹಿಜಾಬ್ ಹಾಕಿ ನೃತ್ಯ ಮಾಡಿಸಿದರು !

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಪ್ರತಿಭಟನೆಯ ನಂತರ ಮುಖ್ಯೋಪಾಧ್ಯಾಯ ಮತ್ತು ಸಿಬ್ಬಂದಿ ಅಮಾನತು

ಗುನಾ (ಮಧ್ಯಪ್ರದೇಶ) – ಇಲ್ಲಿನ ಪ್ರಿನ್ಸ್ ಗ್ಲೋಬಲ ಶಾಲೆಯ ಕಾನ್ವೆಂಟ್ ನಲ್ಲಿ ಹಿಂದೂ ವಿದ್ಯಾರ್ಥಿನಿಗೆ ಹಿಜಾಬ್ ಹಾಕಿ ಇಸ್ಲಾಮಿಕ್ ಹಾಡಿಗೆ ನೃತ್ಯ ಮಾಡಿಸಿದರು. ಇದರ ಮಾಹಿತಿ ಸಿಕ್ಕ ನಂತರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನವರು ಶಾಲೆಗೆ ಬಂದು ಪ್ರತಿಭಟನೆ ಮಾಡಿದರು. ಅವರು ಘೋಷಣೆಗಳನ್ನು ಕೂಗಿದರು. ಇದರ ಮಾಹಿತಿ ಪಡೆದ ಪೋಲೀಸರು ಶಾಲೆಗೆ ಆಗಮಿಸಿದರು. ಎಲ್ಲಿಯವರೆಗೆ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಆಂದೋಲನ ಮುಂದುವರೆಸಲಾಗುವುದು ಎಂದು ಪರಿಷತ್ ಹೇಳಿದನಂತರ ಮುಖ್ಯೋಪಾಧ್ಯಾಯ ಮತ್ತು ಸಿಬ್ಬಂದಿಯನ್ನು ಅಮಾನತು ಮಾಡಲಾಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಸಂಯೋಜಕ ವಿಕಾಸ ಶಿವಹರೆ ಮಾತನಾಡಿ, ಶಾಲೆಯಲ್ಲಿ ಶಿಕ್ಷಣದ ಸ್ಥಳದಲ್ಲಿ ಮತಾಂತರಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಇಂತಹ ಶಾಲೆಗಳ ಲೈಸನ್ಸ್ ರದ್ದು ಮಾಡಬೇಕು ಮತ್ತು ಇತರ ಕಾನ್ವೆಂಟ್ ಶಾಲೆಗಳಲ್ಲಿ ಏನು ನಡೆಯುತ್ತಿದೆ? ಇದರ ತನಿಖೆಯಾಗಬೇಕು !