ಕೆನಡಾ ಆರೋಪಿಗಳ ಕುರಿತು ಮಾಹಿತಿ ನೀಡಿದರೆ ಭಾರತ ಚರ್ಚೆಗೆ ಸಿದ್ಧ ! – ಡಾ. ಜೈಶಂಕರ್

ವಾಷಿಂಗಟನ್ (ಅಮೇರಿಕ) – ನಾವು ಭಯೋತ್ಪಾದಕ ನಿಜ್ಜರ ಹತ್ಯೆಯಲ್ಲಿ ಭಾರತದ ಕೈವಾಡದ ಆರೋಪಗಳ ಬಗ್ಗೆ ಕೆನಡಾದೊಂದಿಗೆ ಚರ್ಚಿಸಲು ಸಿದ್ಧರಿದ್ದೇವೆ. ನಾವು ಕೆನಡಾಗೆ, ಈ ರೀತಿ ಯಾರನ್ನೂ ಹತ್ಯೆಮಾಡುವುದು ನಮ್ಮ ಸರಕಾರದ ನೀತಿಯಲ್ಲ; ಆದರೆ ಕೆನಡಾ ನಮ್ಮೊಂದಿಗೆ ಕೆಲವು ಮಾಹಿತಿ ಹಂಚಿಕೊಳ್ಳಲು ಸಿದ್ದವಿದ್ದಲ್ಲಿ ನಾವು ಅದನ್ನು ಪರಿಗಣಿಸಲು ಸಿದ್ದರಿದ್ದೇವೆ, ಸಧ್ಯ ಹೀಗೆ ಇದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ ರವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುವಾಗ ಹೇಳಿದರು.

ಡಾ.ಜೈಶಂಕರ ಮಾತು ಮುಂದುವರೆಸುತ್ತಾ, ನಾವು ಅಮೇರಿಕಾದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ ಸುಲಿವನರ ಜೊತೆ ಭಾರತ ಮತ್ತು ಕೆನಡಾದ ಬಗ್ಗೆ ಚರ್ಚಿಸಿದ್ದೇವೆ. ಮಹತ್ವದ ವಿಷಯವೆಂದರೆ, ನಮ್ಮ ರಾಯಭಾರಿ ಕಛೇರಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ನಿರಂತರವಾಗಿ ಬೆದರಿಕೆ ಹಾಕಲಾಗುತ್ತಿದೆ. ಆದ್ದರಿಂದ ಅವರು ಅಲ್ಲಿ ಕೆಲಸ ಮಾಡುವುದು ಸುರಕ್ಷಿತವಲ್ಲ ಎಂದು ಹೇಳಿದರು.